No products in the cart.
ಮಾರ್ಚ್ 11 – ದೇವರ ಪ್ರೀತಿ!
“ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವುದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದಿದೆಯಲ್ಲಾ.” (ರೋಮ ೫:೫)
ದೇವರ ಶ್ರೇಷ್ಠವಾದ ಗುಣಲಕ್ಷಣವು ಪ್ರೀತಿಯಾಗಿದೆ. ” ದೇವರು ಪ್ರೀತಿಸ್ವರೂಪಿಯಾಗಿದ್ದಾನೆ”. (೧ ಯೋಹಾ ೪:೮)
ಆತನ ಪ್ರೀತಿಯು ತ್ಯಾಗವುಳ್ಳದ್ದು, ಕಾರ್ಯರೂಪದ ಪ್ರೀತಿ, ನಿಮಗಾಗಿ ತನ್ನ ಪ್ರೀತಿಯನ್ನು ಧಾರಾಳವಾಗಿ ಸುರಿಸುವಂತಹದ್ದು ಆಗಿದೆ. ಆ ಪ್ರೀತಿಯ ನಿಮಿತ್ತ ತಂದೆಯಾದ ದೇವರು ತನ್ನ ಒಬ್ಬನೇ ಕುಮಾರನನ್ನು ನಮಗಾಗಿ ಕಳುಹಿಸಿಕೊಟ್ಟನು. ಆ ಪ್ರೀತಿಗಾಗಿ ಯೇಸು ಕ್ರಿಸ್ತನು ತನ್ನ ಅಮೂಲ್ಯವಾದ ರಕ್ತವನ್ನು ನಮಗೋಸ್ಕರ ಸುರಿಸಿದನು.
ಗ್ರೀಕ್‌ಭಾಷೆಯಲ್ಲಿ ದೈವೀಕ ಪ್ರೀತಿಗೆ ʼಅಗಾಫೆ ಪ್ರೀತಿʼ ಎಂದು ಕರೆಯುವರು. ಸ್ವಾರ್ಥರಹಿತವಾದ ಪ್ರೀತಿಯು ಏನನ್ನೂ ಎದುರುನೋಡುವುದಿಲ್ಲ. ಪ್ರಪಂಚದಲ್ಲಿರುವ ಎಲ್ಲಾ ಪ್ರೀತಿಗಳಿಗಿಂತಲೂ ದೇವರ ಪ್ರೀತಿಯೇ ಸರ್ವ ಶ್ರೇಷ್ಠವಾಗಿದೆ. ಅದು ನಮ್ಮನ್ನು ಕರ್ತನ ಮುಂದೆ ಅಡ್ಡಬೀಳುವಂತೆ ಮಾಡುವ ದೈವೀಕ ಪ್ರೀತಿಯಾಗಿದೆ.
ದಕ್ಷಿಣ ಅಮೆರಿಕದಲ್ಲಿ ಅಪರೂಪವಾಗಿರುವ ಮೀನನ್ನು ಕಾಣಬಹುದು, ಅದರ ಹೆಸರು “ನಾಲ್ಕು ಕಣ್ಣಿನ ಮೀನು”. ಅದರ ವೈಶಿಷ್ಟತೆ ಏನಂದರೆ ಅದು ಮೇಲೆ ಕೆಳಗೆ ಮತ್ತು ನೀರಿನ ಆಳದ ಸ್ಥಳವನ್ನು ಏಕಕಾಲದಲ್ಲಿ ನೋಡುತ್ತದೆ. ಅದು ಈಜುವಾಗ ಅದರ ಎರಡು ಕಣ್ಣುಗಳು ನೀರಿನ ಕೆಳಭಾಗವನ್ನು ನೋಡುತ್ತಿರುತ್ತದೆ, ಉಳಿದ ಕಣ್ಣುಗಳು ಮೇಲ್ಬಾಗವನ್ನು ನೋಡುತ್ತದೆ. ಅದರ ಕಣ್ಣುಗಳ ಪದರಗಳು ತೀಕ್ಷಣತೆಯಿಂದ ಕೂಡಿರುತ್ತದೆ ಮತ್ತು ವ್ಯತ್ಯಾಸವಾದ ದೃಷ್ಟಿಕೋಣವನ್ನು ಹೊಂದಿದೆ. ಒಂದೇ ಸಮಯದಲ್ಲಿ ಎರಡು ಕಡೆ ದೃಷ್ಟಿಯನ್ನು ಹರಿಸಿ ನೋಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಅದೇ ಪ್ರಕಾರ, ನಿಮ್ಮ ಪ್ರೀತಿಯು ಎರಡು ದೃಷ್ಟಿಕೋನಗಳನ್ನು ಹೊಂದಿರಬೇಕು. ಮೊದಲನೆಯದು, ದೇವರ ಕಡೆಗೆ ಮೇಲೆ ನೋಡುವ ದೃಷ್ಟಿಕೋನ. ಎರಡನೆಯದು, ಹೊರಗಡೆ ಇತರ ಸಹೋದರ ಮತ್ತು ಸಹೋದರಿಯರಿಗೆ ಪ್ರೀತಿಯನ್ನು ಕೊಡುವದು. ದೇವರು ನಮಗೆ ಎರಡು ಆಜ್ಞೆಗಳನ್ನು ನೀಡಿದ್ದಾರಲ್ಲಾ. ನಿನ್ನ ಪೂರ್ಣ ಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣ ಮನಸ್ಸಿನಿಂದ ದೇವರನ್ನು ಪ್ರೀತಿಸಬೇಕು ಹಾಗೂ ನಿನ್ನಂತೆಯೇ ನಿನ್ನ ನೆರೆಹೊರೆಯವನನ್ನು ಪ್ರೀತಿಸಬೇಕು.
ಕ್ರೈಸ್ತತ್ವದ ಸೌಂದರ್ಯವು ಪ್ರೀತಿಯಲ್ಲಿ ನೆಲೆಗೊಂಡಿದೆ. ನೀವು ತೋರಿಸುವ ಪ್ರೀತಿಯನ್ನು ಅವಿಶ್ವಾಸಿಗಳು ನೋಡಿ ಕರ್ತನ ಸಮೀಪಕ್ಕೆ ಬರುವರು. ಕ್ರಿಸ್ತನ ಪ್ರೀತಿಯನ್ನು ಪವಿತ್ರಾತ್ಮನು ಧಾರಾಳವಾಗಿ ಅವರ ಹೃದಯಗಳಲ್ಲಿ ಸುರಿಸಲ್ಪಟ್ಟಿದೆ. ಆದಕಾರಣ ಯೇಸು ಕ್ರಿಸ್ತನ ಆಳವಾದ ಪ್ರೀತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ನಿನಗೆ ಇದು ಗೊತ್ತಿರುವ ಪ್ರಕಾರ ಗಟ್ಟಿತನ, ಅನಗತ್ಯತೆ ಮತ್ತು ಪ್ರೀತಿ ರಹಿತ ಮಾತುಗಳು ಪವಿತ್ರಾತ್ಮನನ್ನು ದುಃಖಪಡಿಸುತ್ತದೆ. ಕೆಲವರು ಇತರರ ಕುರಿತು ಒರಟಾಗಿ ನಡೆದುಕೊಳ್ಳುತ್ತಾರೆ. ಕೆಲವರು ಜಾತಿ ಮತ್ತು ಹಿನ್ನಲೆಯನ್ನು ಪರಿಗಣಿಸಿ ಹಿಯಾಳಿಸುತ್ತಾರೆ. ಕೆಲವರು ಬಡವರನ್ನು ಹೀನವಾಗಿ ಕಾಣುತ್ತಾರೆ. ಅಂತಹ ಕಾರ್ಯಗಳು ನಡೆಯುವಾಗ ದೇವರ ಹೃದಯವು ದುಃಖಪಡುತ್ತದೆ. “ಎಲ್ಲಾ ಧ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನು ಸಕಲವಿಧವಾದ ದುಷ್ಟತನವನ್ನು ನಿಮ್ಮಿಂದ ದೂರಮಾಡಲಿ.” (ಎಫೆ ೪:೩೧)
ಪ್ರಿಯ ದೇವರ ಮಕ್ಕಳೇ “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರಿ.” (ಎಫೆ ೪:೩೨)
ದೇವರು ಆತನ ಪ್ರೀತಿಯಿಂದ ನಿಮ್ಮನ್ನು ತುಂಬಿಸಲಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ದೇವರ ಮಕ್ಕಳೆಂಬ ಹೆಸರನ್ನು ನಮಗೆ ಕೊಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾರೆ ನೋಡಿರಿ, ನಾವು ಆತನ ಮಕ್ಕಳಾಗಿದ್ದೇವೆ.” (೧ ಯೋಹಾ ೩:೧)
