No products in the cart.
ಫೆಬ್ರವರಿ 03 – ಅನ್ಯೋನ್ಯತೆ ಇರಲಿ!
“ನಾವು ಕಂಡು ಕೇಳಿದ್ದು ನಿಮಗೂ ಗೊತ್ತಾಗಿ ನಮಗಿರುವ ಅನ್ಯೋನ್ಯತೆಯಲ್ಲಿ ನೀವು ಸೇರಬೇಕೆಂದು ಅದನ್ನು ಪ್ರಸಿದ್ಧಿಪಡಿಸುತ್ತೇವೆ. ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂತಹದು ” (೧ ಯೋಹಾ ೧:೩)
ವೈಯಕ್ತಿಕ ಪ್ರಾರ್ಥನೆಯ ಬಹು ಮುಖ್ಯವಾದ ಸೌಂದರ್ಯವೇನೆಂದರೆ ದೇವರೊಂದಿಗೆ ನಮಗೆ ಇರುವ ಸಂತೋಷದ ಹಾಗೂ ಜೀವದಿಂದ ಕೂಡಿದ ಅನ್ಯೋನ್ಯತೆ. ಅನೇಕರು ಪ್ರಾರ್ಥನೆಯ ಸಮಯದಲ್ಲಿ ದೊಡ್ಡ ಅಗತ್ಯತೆಗಳ ಪಟ್ಟಿಯೊಂದಿಗೆ ದೇವರ ಪ್ರಸನ್ನತೆಗೆ ಬರುತ್ತಾರೆ. ಅವರು ದೇವರ ಸಮ್ಮುಖದಲ್ಲಿ ಕುಳಿತುಕೊಂಡು ಲೆಕ್ಕಿಸಲಾಗದ ಆರ್ಶೀವಾದಗಳನ್ನು ಬೇಡಿಕೊಳ್ಳುತ್ತಾರೆ.
ಆದರೆ ದೇವರು ಪ್ರಥಮವಾಗಿ ನಮ್ಮ ಪ್ರೀತಿಯನ್ನು ಬಯಸುತ್ತಾರೆ. ಆತನು ಸಂತೊಷದಿಂದ ಕೂಡಿದ ಅನ್ಯೋನ್ಯತೆಯನ್ನು ನಮ್ಮಿಂದ ಅಪೇಕ್ಷಿಸುತ್ತಾನೆ. ಆತನು ಪ್ರಾರ್ಥನೆಯ ಮೂಲಕ ನಮ್ಮೊಟ್ಟಿಗೆ ಅನ್ಯೋನ್ಯತೆ ಹೊಂದಲು ಇಚ್ಚಿಸುತ್ತಾನೆ. ನಾವು ದೇವರ ಸೇವೆಯನ್ನು ಮಾಡಲು ಹಾಗೂ ಪ್ರೀತಿಸ್ವರೂಪನಾದ ದೇವರನ್ನು ಪ್ರೀತಿಸಲು ಕರೆಯಲ್ಪಟ್ಟಿದ್ದೇವೆ. ಪ್ರಪಥಮವಾಗಿ ನಾವು ದೇವರ ಬಯಕೆಯನ್ನು ಈಡೇರಿಸಬೇಕಾಗಿದೆ. ಹೌದು ಆ ಬಯಕೆಯು ಆತನೊಂದಿಗೆ ಅನ್ಯೋನ್ಯತೆ ಹೊಂದಿರುವದು ಹಾಗೂ ನಮ್ಮ ಆರಾಧನೆಯನ್ನು ಸಲ್ಲಿಸುವದಾಗಿದೆ.
ದೇವರು ಆದಿಯಲ್ಲಿ ಮನುಷ್ಯನನ್ನು ಸೃಷ್ಟಿಸಿದಾಗ ಆತನೊಂದಿಗೆ ಅನ್ಯೋನ್ಯತೆಯನ್ನು ಹೊಂದಿಕೊಳ್ಳುವ ವಾತವರಣವನ್ನು ನಿರ್ಮಾಣಮಾಡಿದ್ದನು. ದೇವರು ಸ್ವತಃ ಅನ್ಯೋನ್ಯತೆಯನ್ನು ಬಯಸಿ ಪ್ರತೀ ದಿನ ಸಂಜೆಯ ತಂಗಾಳಿಯಲ್ಲಿ ಮನುಷ್ಯನನ್ನು ಬೇಟಿ ಮಾಡಲು ಬರುತ್ತಿದ್ದನು.
ಸತ್ಯವೇದವು ಹೇಳುತ್ತದೆ: “ತರುವಾಯ ಯೆಹೋವದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿದ್ದಾಗ ಆ ಸ್ತ್ರೀ ಪುರುಷರು ಆತನ ಸಪ್ಪಳವನ್ನು ಕೇಳಿದರು.” (ಆದಿ ೩:೮) ದೇವರು ಆದಾಮ ಮತ್ತು ಹವ್ವಳೊಂದಿಗೆ ಅನ್ಯೋನ್ಯತೆಯಿಂದ ಇರಲು ತಾನೇ ಬಂದನು.
ಒಬ್ಬ ವ್ಯಕ್ತಿಯು ದೇವರೊಂದಿಗೆ ಅನ್ಯೋನ್ಯತೆಯಲ್ಲಿ ಇರುವಾಗ ಅವನ ಹೃದಯವು ಸಂತೋಷದಿಂದ ತುಂಬಿರುತ್ತದೆ. ವಿವರಿಸಲಾಗಾದ ಆತ್ಮ ಸಂತೃಪ್ತಿ ನಮ್ಮಲ್ಲಿ ತುಂಬಿಕೊಂಡು ನಮಗೆ ಸಮಧಾನವನ್ನು ತರುತ್ತದೆ. ಹೌದು ದೇವರು ನಮ್ಮ ಅನ್ಯೋನ್ಯತೆಯನ್ನು, ವೈಯಕ್ತಿಕ ಪ್ರಾರ್ಥನೆ ಸಮಯ ಮತ್ತು ಪ್ರೀತಿಯನ್ನು ಕಾತುರದಿಂದ ಎದುರುನೋಡುತ್ತಿದ್ದಾನೆ. ಆ ಉದ್ದೇಶಕ್ಕೋಸ್ಕರವಾಗಿಯೇ ದೇವರು ನಮ್ಮನ್ನು ಆತನ ಸ್ವರೂಪದಲ್ಲಿ ಹಾಗೂ ಹೋಲಿಕೆಯಲ್ಲಿ ಉಂಟುಮಾಡಿದ್ದಾನೆ.
ಈ ದಿನಮಾನಗಳಲ್ಲಿ ಜನರು ತುಂಬಾ ಕಾರ್ಯನಿರತರಾಗಿ ವೇಗವಾಗಿ ಓಡುತ್ತಿದ್ದಾರೆ. ಅವರು ತಮ್ಮ ಸಮಸ್ಯೆಗಳು ಹಾಗೂ ಕಷ್ಟಗಳನ್ನು ಪರಿಹರಿಸುವದರಲ್ಲಿಯೇ ಮುಳುಗಿಹೋಗಿದ್ದಾರೆ. ಅವರು ದಿನವಿಡೀ ಇವರನ್ನು ಬೇಟಿಮಾಡಬೇಕು, ಆ ಕೆಲಸವನ್ನು ಮಾಡಬೇಕು, ಈ ಸಾಲಗಳನ್ನು ತೀರಿಸಬೇಕು, ಹೊಸ ಕೆಲಸಕ್ಕಾಗಿ ಪ್ರಯತ್ನಿಸಬೇಕು ಎಂಬ ವಿಷಯಗಳ ಹಿಂದೆ ಓಡುತ್ತಿರುತ್ತಾರೆ. ಆದರೆ ಅವರು ದೇವರ ಸಮ್ಮುಖದಲ್ಲಿ ಕುಳಿತು ಅನ್ಯೋನ್ಯತೆಯಲ್ಲಿ ಸಮಯವನ್ನು ಕಳೆಯುತ್ತಿಲ್ಲ.
ಅದರ ಪ್ರತಿಫಲ ಅವರು ಸಂತೋಷವನ್ನು ಕಳೆದುಕೊಂಡಿದ್ದಾರೆ, ಸಮಸ್ಯೆಗಳು ಅವರನ್ನು ಆಳ್ವಿಕೆಮಾಡುತ್ತದೆ. ಅನೇಕ ವಿಧವಾದ ಒತ್ತಡಗಳು ಅವರನ್ನು ಆವರಿಸಿಕೊಳ್ಳುತ್ತದೆ. ಸತ್ಯವೇದವು ಹೇಳುತ್ತದೆ ” ನೀವು ಮೊದಲು ದೇವರ ರಾಜ್ಯಕ್ಕಾಗಿ ಮತ್ತು ಅದರ ನೀತಿಗಾಗಿ ತವಕಿಸಿರಿ. ಆಗ ಉಳಿದುದ್ದೇಲ್ಲಾ ನಿಮಗೆ ಸಿಕ್ಕುವದು.” (ಮತ್ತಾ ೬:೩೩)
ಪ್ರಿಯ ದೇವರ ಮಕ್ಕಳೇ, ನೀವು ಮೊದಲು ದೇವರ ರಾಜ್ಯಕ್ಕಾಗಿ ಮತ್ತು ಅದರ ನೀತಿಗಾಗಿ ತವಕಿಸುವಾಗ, ಆತನೊಂದಿಗೆ ನೀವು ಅನ್ಯೊನ್ಯತೆಯನ್ನು ಹೊಂದಿಕೊಂಡಾಗ ದೇವರು ಉಳಿದುದ್ದೇಲ್ಲವನ್ನು ಕೂಡಿಸಿ ಕೊಟ್ಟು ನಿಮ್ಮನ್ನು ಆರ್ಶೀವದಿಸುವನು.
ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: ” ಉದ್ಯಾನ ವೃಕ್ಷಗಳಲ್ಲಿ ಸೇಬು ಹೇಗೋ ಪುರುಷರಲ್ಲಿ ನನ್ನ ಕಾಂತನು ಹಾಗೇಯೇ ಇಷ್ಟನು. ನಾನು ನೆರಳಿನಲ್ಲಿ ಕೂತು ಸಂತಸಗೊಂಡೆನು. ಅವನ ಫಲವು ನನ್ನ ನಾಲಿಗೆಗೆ ರುಚಿಯಾಗಿತ್ತು.” (ಪರಮಗೀತೆ ೨:೩)
