No products in the cart.
ಫೆಬ್ರವರಿ 20 – ಬದಲೇನು ಮಾಡಲಿ!
“ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” (ಕೀರ್ತ ೧೧೬:೧೨)
ದೇವರು ದಾವಿದನ ಜೀವನದಲ್ಲಿ ಮಾಡಿದ ಎಲ್ಲಾ ಒಳ್ಳೆಯ ಕಾರ್ಯಗಳಿಗಾಗಿ ಹಾಗೂ ಕರುಣೆಗಾಗಿ ಆತನ ಹೃದಯವು ಕೃತಜ್ಞತೆಯಿಂದ ತುಂಬಿತ್ತು. ತನ್ನನ್ನು ಉನ್ನತ ಸ್ಥಾನಕ್ಕೆ ನಡೆಸಿದ ದೇವರನ್ನು ಘನಪಡಿಸಲು ದಾವೀದನ ಹೃದಯವು ಯಾವಾಗಲೂ ಹಂಬಲಿಸುತ್ತಿತ್ತು. ಅದು ಮಾತ್ರವೇ ಅಲ್ಲದೇ, ತನ್ನನ್ನು ನಂಬಿಗಸ್ಥನಾಗಿ ಪ್ರೀತಿಸಿದ ದೇವರಿಗೆ ತನ್ನ ಸಾಮರ್ಥ್ಯ ಮೀರಿ ಕೊಡಬೇಕೆಂದು ನಿರ್ಧರಿಸಿದನು. ಆತನು ತನ್ನ ಎಲ್ಲಾ ಸಂಪತ್ತನ್ನು ದೇವರ ಸೇವೆ ಮತ್ತು ಆತನ ಭಕ್ತರಿಗಾಗಿ ವ್ಯಯಮಾಡಲು ಸಿದ್ಧನಿದ್ದನು.
ಈ ಭೂಮಿಯ ಮೇಲೆ ನಮಗೆ ಇರುವ ಶ್ರೇಷ್ಟವಾದ ಸೌಲಭ್ಯವೇನಂದರೆ, ಕರ್ತನಿಗೆ ಕೊಡುವದು. ನಾವು ದೇವರಿಗೆ ಕೊಡುವಾಗ ಆತನ ಹೃದಯವು ಸಂತೋಷಿಸುತ್ತದೆ, ಹಾಗೆಯೇ ನಮ್ಮ ಹೃದಯವೂ ಸಹ ಸಂತೋಷದಿಂದ ಕೂಡಿರುತ್ತದೆ.
ಒಮ್ಮೆ ನಮ್ಮ ತಂದೆಯವರು ನಾಗರಕೋಯಿಲ್‌ಪಟ್ಟಣದಲ್ಲಿ ನಡೆಯುತ್ತಿರುವ ಸತತ ಆತ್ಮೀಕ ಕೂಟಗಳಲ್ಲಿ ಭಾಗವಹಿಸಿದಾಗ, ಒಂದು ಕುಟುಂಬವು ಎಲ್ಲಾ ಕೂಟಗಳ ಹಣಕಾಸಿನ ಖರ್ಚಿನ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದರು. ನಂತರ ನಾವು ವಿಚಾರಿಸಿದಾಗ, ಆ ಕುಟುಂಬದ ಒಬ್ಬ ಸಹೋದರಿ ತನ್ನ ಸಾಕ್ಷಿಯನ್ನು ಹಂಚಿಕೊಂಡರು: “ಸರ್, ನಾನು ಸತ್ಯವೇದಲ್ಲಿ ವಿಧವೆಯು ಎರಡು ನಾಣ್ಯಗಳನ್ನು ದೇವಾಲಯದ ಹುಂಡಿಗೆಯಲ್ಲಿ ಹಾಕುವ ವಿಷಯವನ್ನು ಧ್ಯಾನಿಸುತ್ತಿದ್ದಾಗ, ಆ ವಿಧವೆಯ ಜೀವನಕ್ಕೆ ಆಧಾರವಾಗಿದ್ದುದ್ದು ಆ ನಾಣ್ಯಗಳು ಮಾತ್ರವೇ ಆಗಿತ್ತು. ಆ ವಿಧವೆಯ ಕೊಡುವಿಕೆಯ ಕಾರ್ಯದ ಕುರಿತು ಅರ್ಥಮಾಡಿಕೊಳ್ಳಲು ದೇವರು ಸಹಾಯ ಮಾಡಲಿ ಎಂದು ನಾನು ಪ್ರಾರ್ಥಿಸಿದೆನು. ಆಗ ದೇವರು ನನ್ನೊಂದಿಗೆ ಮಾತನಾಡಿದರು, “ನಿನ್ನ ಆದಾಯದಿಂದ ಸೇವೆಯ ಕಾರ್ಯಗಳಿಗೆ ನೀಡು, ಇದರಿಂದ ಸುವಾರ್ತೆಯು ಪ್ರಕಟಿಸಲ್ಪಡುತ್ತದೆ,” ಆ ಕಾರಣಕ್ಕಾಗಿಯೇ ನಾನು ಈ ಕೂಟಗಳ ವೆಚ್ಚವನ್ನು ಭರಿಸಲು ತೀರ್ಮಾನಿಸಿದೆನು.”
ಆಕೆಯು ಆ ವಿಷಯವನ್ನು ಹೇಳುವಾಗ ಆಕೆಯ ಮುಖದಲ್ಲಿ ದೊಡ್ಡ ಸಂತೋಷ ಎದ್ದು ಕಾಣುತ್ತಿತ್ತು ಎಂದು ನಮ್ಮ ತಂದೆಯುವರು ಹೇಳಿದರು. ನಿಜವಾಗಿಯೂ ನಮ್ಮ ಯೇಸು ಕ್ರಿಸ್ತನು ಕಲಿಸಿಕೊಟ್ಟ ಹಾಗೆ, ತೆಗೆದುಕೊಳ್ಳುವದಕ್ಕಿಂತ ಕೊಡುವುದೇ ಶ್ರೇಷ್ಟ ಆರ್ಶೀವಾದವಾಗಿದೆ. (ಅ. ಕೃ ೨೦:೩೫)
ನಾನು ಬಡವರಿಗೆ ಕರುಣೆಯನ್ನು ಉದಾರವಾಗಿ ಕೊಡುವಾಗ, ದೇವರು ನಮ್ಮಿಂದ ಸಾಲತೆಗೆದುಕೊಂಡಿದ್ದೇನೆ ಎಂದು ಭಾವಿಸುತ್ತಾರೆ. ನಾವು ಕೊರತೆಯಲ್ಲಿರುವವರಿಗೆ, ವಿಧವೆಯರಿಗೆ ಕೊಡುವಾಗ ಕರ್ತನು ನಮಗೆ ಹಿಂತಿರುಗಿಸಿ ಕೊಡುವನು. ನಾವು ದೆವರ ಸೇವೆಗೆ ಮತ್ತು ಆತನ ಸೇವಕರಿಗೆ ಕೊಡುವಾಗ ದೇವರು ತನ್ನ ಅಪಾರ ಕೃಪೆಯಿಂದ ನಾವು ನಿರೀಕ್ಷಿಸದೇ ಇರುವ ಹಾಗೆ ಮತ್ತು ಊಹೆಗೂ ಮೀರಿದ ಸಾವಿರ ಪಟ್ಟು ಆರ್ಶೀವಾದಗಳನ್ನು ಅನುಗ್ರಹಿಸುವನು.
ದೇವರು ನಮಗಾಗಿ ಪರಲೋಕದ ಬಾಗಿಲುಗಳನ್ನು ತೆರೆಯುವೆನು ಎಂಬ ವಾಗ್ದಾನವನ್ನು ನೀಡಿರುವವನಲ್ಲವೇ? ನೀನು ಉನ್ನತವಾಗಿ ಮೇಲೇತ್ತಲ್ಪಡಲು ಬಯಸುವಿಯೋ? ನಿಮ್ಮ ಕೆಲಸಗಳಲ್ಲಿ ಹಾಗೂ ಶ್ರಮೆಗಳಲ್ಲಿ ಆರ್ಶೀವದಿಸಲ್ಪಡಲು ಇಚ್ಚಿಸುವಿರೋ? ನೀವು ಬಾಲವಾಗಿ ಅಲ್ಲದೇ ತಲೆಯಾಗಿ ಇರಲು, ಕೆಳಗಿನವರಾಗಿರದೇ ಮೇಲಿನವರಾಗಿರಲು ಇಷ್ಟ ಪಡುವಿರೋ? ಹಾಗಾದರೆ ದೇವರ ಕೆಲಸಕ್ಕಾಗಿ ಉದಾರವಾಗಿ ಕೊಡಿರಿ. ಆಗ ದೇವರು ನಿಮ್ಮ ಜೀವನದಲ್ಲಿ ನಡೆಸುವ ಅದ್ಭುತಗಳನ್ನು ನೀವು ಸಾಕ್ಷಿಕರಿಸುವಿರಿ.
ಪ್ರಿಯ ದೇವರ ಮಕ್ಕಳೇ, ನೀವು ದೇವರಿಗೆ ಕೊಡುವ ಎಲ್ಲಾ ಸಮಯದಲ್ಲಿ ಬರೀ ಹಣವನ್ನು ಮಾತ್ರ ನೀಡದೆ, ನಿಮ್ಮ ತಲಾಂತುಗಳನ್ನು, ಸಾಮರ್ಥ್ಯಗಳನ್ನು , ಸಮಯವನ್ನು ಹಾಗೂ ನಿಮ್ಮನ್ನೇ ಕಾಣಿಕೆಯಾಗಿ ಕೊಡಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನನ್ನ ಆಲಯವು ಆಹಾರ ಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾರದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ.” (ಮಲಾಕಿ ೩:೧೦)
