No products in the cart.
ಮಾರ್ಚ್ 31 – ಪ್ರೀತಿಯು ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ!
“ಪ್ರೀತಿಯು ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ” (೧ ಕೊರಿ ೧೩:೫)
ಅಪರಾಧವನ್ನು ಮರೆಯದೇ, ಕ್ಷಮಿಸದೇ ನೆನಪಿನಲ್ಲಿಟ್ಟುಕೊಂಡು, ಅವಶ್ಯಕತೆ ಬಂದಾಗ ಅಪಕಾರಕ್ಕೆ ಅಪಕಾರವನ್ನು ಮಾಡುವದು. ಇದು ಪ್ರೀತಿಯ ಸ್ವಭಾವವಲ್ಲ. ಪ್ರೀತಿಯು ಕ್ಷಮಿಸುತ್ತದೆ ಮತ್ತು ಮರೆತುಹೋಗುತ್ತದೆ. ಅದು ಎಂದಿಗೂ ಅಪರಾಧಗಳ ಪಟ್ಟಿಯನ್ನು ಇಟ್ಟುಕೊಳ್ಳುವದಿಲ್ಲ. ಪ್ರೀತಿಯು ಯಾವ ಕಾರಣಕ್ಕೂ ಸೇಡು ತೀರಿಸಿಕೊಳ್ಳುವದಿಲ್ಲ.
ಪ್ರಾಣಿಗಳಲ್ಲಿ ಆನೆಗೆ ವಿಪರೀತವಾದ ನೆನಪಿನ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಅದು ತನಗೆ ಆದ ಗಾಯವನ್ನು ಅನೇಕ ವರ್ಷಗಳವರೆಗೂ ಮರೆಯದೇ ನೆನಪಿನಲ್ಲಿಟ್ಟುಕೊಂಡಿರುತ್ತದೆ.
ಒಮ್ಮೆ ಒಬ್ಬ ಹುಡುಗನು ತೆಂಗಿನ ಕಾಯಿಯನ್ನು ಕೊಡುವ ಹಾಗೆ ನಟನೆ ಮಾಡಿದನು. ಆನೆಯು ಆತನ ಕೈಯಿಂದ ಅದನ್ನು ಕಸಿದುಕೊಂಡು ಆತುರದಿಂದ ತಿನ್ನಲಾರಂಬಿಸಿತು, ಅದರೊಳಗೆ ಸುಣ್ಣದ ಗಾರೆಯಿಂದ ತುಂಬಿಸಿದ್ದರು, ಅದರ ಪ್ರತಿಫಲ ಆನೆಯ ಬಾಯಿ ಮತ್ತು ಸೊಂಡಿಲು ಸುಟ್ಟುಹೋಯಿತು. ಆನೆಯು ಆ ಘಟನೆಯನ್ನು ಮರೆತುಹೋಗಲಿಲ್ಲ. ಅನೇಕ ವರ್ಷಗಳ ನಂತರ ಆ ಹುಡುಗನು ಬೆಳೆದು ಯುವಕನಾದಾಗ, ಆತನನ್ನು ಆನೆಯು ಗುಂಪಿನ ಮಧ್ಯೆ ಗುರುತು ಹಿಡಿದು ಅವನನ್ನು ಓಡಿಸಿಕೊಂಡು ಹೋಗಿ ಕೆಳಗೆ ಕೆಡವಿಕೊಂಡು ತುಳಿದು ಸಾಯಿಸಿತು. ಅದೇ ರೀತಿ ಈ ದಿನಮಾನಗಳಲ್ಲಿ ಅನೇಕ ಜನರು ತಮ್ಮ ಹೃದಯಗಳಲ್ಲಿ ಕಹಿತನ, ದ್ವೇಷ ಮತ್ತು ಸೇಡಿನ ಆಲೋಚನೆಗಳನ್ನು ಹೊಂದಿರುತ್ತಾರೆ.
ಆದರೆ ಪ್ರೀತಿಯು ಅಪಕಾರವನ್ನು ಯೋಚಿಸುವದಿಲ್ಲ. ಪ್ರಿಯ ದೇವರ ಮಕ್ಕಳೇ, ದೈವೀಕ ಪ್ರೀತಿಯಿಂದ ಜನರ ಅಪರಾಧಗಳನ್ನು ಕ್ಷಮಿಸಿರಿ ಹಾಗೂ ಅವುಗಳನ್ನು ಮರೆತುಬಿಡಿರಿ. ದೇವರ ವಾಕ್ಯ ಹೇಳುತ್ತದೆ, “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರಿ.” (ಎಫೆಸ ೪:೩೨)
ಒಮ್ಮೆ ಒಬ್ಬ ಪೋಲಿಸ್ಅಧಿಕಾರಿಯು ಕಳ್ಳನನ್ನು ಓಡಿಸಿಕೊಂಡು ಹೋಗುತ್ತಿದ್ದನು. ಆ ಕಳ್ಳನು ಒಲಂಪಿಕ್ಆಟಗಾರನು ಓಡುವಂತೆ ವೇಗವಾಗಿ ಓಡುವದನ್ನು ಕಂಡು ಪೋಲಿಸ್ಅಧಿಕಾರಿಯು ಆಶ್ಚರ್ಯಪಟ್ಟನು. ಆತನನ್ನು ಸರೆಹಿಡಿದು ಸರೆಮನೆಗೆ ಕಳುಹಿಸುವ ಬದಲು ಆತನ ಜೀವನವನ್ನು ಪರಿವರ್ತಿಸಿ ಒಬ್ಬ ಪ್ರಸಿದ್ದ ಓಟಗಾರನ್ನಾಗಿ ತರಬೇತಿಗೊಳಿಸಲು ತೀರ್ಮಾನಿಸಿದನು.
ಗಟ್ಟಿಯಾದ ದ್ವನಿವರ್ಧಕದ ಮೂಲಕ ಆ ಆಧಿಕಾರಿಯು, ಆತನನ್ನು ಕನಿಕರದಿಂದ ಕರೆದು, ಆತನಿಗೆ ಶಿಕ್ಷೆ ಕೊಡುವುದಿಲ್ಲವೆಂದು ಭರವಸೆಯನ್ನು ಕೊಟ್ಟನು. ತನ್ನ ಜೀವವನ್ನು ಉಳಿಸಿಕೊಳ್ಳಲು ವೇಗವಾಗಿ ಓಡುತ್ತಿದ್ದ ಆ ಕಳ್ಳನು ಆ ಮಾತುಗಳನ್ನು ಕೇಳಿಸಿಕೊಂಡು ತಟ್ಟನೆ ನಿಂತುಕೊಂಡನು. ಆಧಿಕಾರಿಯು ಅವನ ವೇಗವನ್ನು ಪ್ರಶಂಸಿದರು, ಮತ್ತು ಅಗತ್ಯವಿರುವ ತರಬೇತಿಯನ್ನು ನೀಡಿದರು, ಸೂಕ್ತವಾದ ಬಟ್ಟೆಗಳನ್ನು, ಪೋಷಕಾಂಶಗಳನ್ನು ನೀಡಿ ದೇಶಾಭಿಮಾನವನ್ನು ಅವನಲ್ಲಿ ತುಂಬಿದನು. ಮುಂದೆ ಒಂದು ದಿನ ಈ ಮಾಜಿ ಕಳ್ಳನು ಭಾರತ ದೇಶವನ್ನು ಪ್ರತಿನಿಧಿಸಿ ಒಲಂಪಿಕ್ ಕ್ರೀಡೆಯಲ್ಲಿ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತಂದನು.
ಮನುಷ್ಯನು ಪಾಪ ಮಾಡಿದ್ದರಿಂದ ಪರಿಶುದ್ಧನಾದ ದೇವರ ಸಮ್ಮುಖದಲ್ಲಿ ನಿಂತುಕೊಳ್ಳುವದಕ್ಕೆ ಅರ್ಹತೆಯನ್ನು ಕಳೆದುಕೊಂಡು ಮರಗಳ ಹಿಂದೆ ಅಡಗಿಕೊಂಡಿದ್ದರು. ಆತನು ದೇವರ ನ್ಯಾಯತೀರ್ಪು ಮತ್ತು ಶಿಕ್ಷೆಗೆ ಹೆದರಿ ದೇವರ ಪ್ರಸನ್ನತೆಯಿಂಂದ ದೂರ ಓಡಿ ಹೋದನು.
ಆದರೆ ಕ್ರಿಸ್ತನು ನಮ್ಮನ್ನು ಹುಡುಕಿಕೊಂಡು ಬಂದನು, ನಮ್ಮನ್ನು ದಂಡಿಸಲಿಲ್ಲ, ಆದರೆ ಪ್ರೀತಿಯಿಂದ ನಮ್ಮನ್ನು ಆತನ ಮಕ್ಕಳನ್ನಾಗಿಯೂ ಮಾಡಿದನು.
ಪ್ರಿಯ ದೇವರ ಮಕ್ಕಳೇ, ಆ ಪ್ರೀತಿಯನ್ನು ಯಾವಾಗಲೂ ಅಭ್ಯಾಸಮಾಡಿಸಿರಿ. ಪ್ರೀತಿಯೆಂಬ ನದಿಯು ನಿಮ್ಮ ಹೃದಯದಲ್ಲಿ ಯಾವಾಗಲೂ ತುಂಬಿ ಹರಿಯಲಿ. ಅದು ಯೇಸು ಕ್ರಿಸ್ತನ ಕಡೆಗೂ ಹಾಗೂ ನೀವು ಪ್ರೀತಿಸುವ ಆತ್ಮಗಳ ಬಳಿಗೂ, ಸಹೋದರ ಸಹೋದರಿಯರ ಬಳಿಗೂ ನಡೆಸುತ್ತದೆ. ಪ್ರೀತಿಯು ಅಪಕಾರವನ್ನು ಎಂದಿಗೂ ಬಯಸುವದಿಲ್ಲ. ಸೇಡಿಗೆ ಬದಲಾಗಿ ತ್ಯಾಗವನ್ನು ಆರಿಸಿಕೊಳ್ಳುತ್ತದೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ”. (ಯೋಹಾ ೩:೧೭)
