No products in the cart.
ಮಾರ್ಚ್ 26 – ಪ್ರೀತಿಯು ಉಬ್ಬಿಕೊಳ್ಳುವದಿಲ್ಲ!
“ಪ್ರೀತಿಯು ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ” (೧ ಕೊರಿ ೧೩:೪)
ಪ್ರೀತಿಯು ತನ್ನ ಕುರಿತು ಹೆಚ್ಚಿಸಿಕೊಳ್ಳುವದಿಲ್ಲ. ಅದು ಜನಪ್ರಿಯತೆಯನ್ನು ಬಯಸಿ ಮಾತನಾಡುವದಿಲ್ಲ. ಯಾರಿಗೂ ಗೊತ್ತಾಗದ ಹಾಗೆ ತೆರೆಮರೆಯಲ್ಲಿ ಪ್ರೀತಿಯಿಂದ ಕೆಲಸವನ್ನು ಮಾಡುವವರು, ಯಾವುದೇ ಹೆಸರು, ಕೀರ್ತಿ ಅಥವಾ ಗುರುತಿಸುವಿಕೆಯನ್ನು ಆಶಿಸದೇ ಕೇಲಸವನ್ನು ಮಾಡುವವರಾಗಿದ್ದಾರೆ.
ಸತ್ಯವೇದವು ಹೀಗೆ ಹೇಳುತ್ತದೆ, ” ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ, ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು. (೨ ಕೊರಿ ೧೦:೧೭-೧೮)
ಪ್ರೀತಿಸ್ವರೂಪನಾದ ಯೇಸುವನ್ನು ನೋಡಿರಿ. ಆತನು ಒಳ್ಳೆಯದನ್ನು ಮಾಡುತ್ತಲೇ ಇದ್ದನು. ಆತನು ಕುಷ್ಟರೋಗಿಗಳನ್ನು ಗುಣಪಡಿಸಿದನು. ಸತ್ತವರನ್ನು ಎಬ್ಬಿಸಿದನು. ಅನೇಕ ಸಂದರ್ಭಗಳಲ್ಲಿ ಅದ್ಭುತಗಳನ್ನು ಹೊಂದಿಕೊಂಡವರು ಆತನ ಹೆಸರನ್ನು ಎಲ್ಲಿಯೂ ಹೇಳಬಾರದೆಂದು ಅಪ್ಪಣೆಕೊಟ್ಟನು. ಜನರು ಆತನನ್ನು ಅರಸನನ್ನಾಗಿ ಮಾಡಬೇಕೆಂದಿರುವಾಗ ಯೇಸು ಅವರನ್ನು ಬಿಟ್ಟು ಹೊರಟುಹೋದನು. ಆತನಿಗೆ ಸ್ವ ಮಹಿಮೆಯನ್ನು ಹೊಂದಿಕೊಳ್ಳಲು ಇಷ್ಟವಿರಲಿಲ್ಲ. ಇದುವೇ ಯೇಸುವಿನ ಪ್ರೀತಿಯಾಗಿದೆ.
ಹೊಗಳಿಕೊಳ್ಳದ ಪ್ರೀತಿ ಯೇಸುವಿನ ಪ್ರೀತಿಯಾಗಿದೆ. ಆ ಪ್ರೀತಿಯೇ ಯೇಸುವನ್ನು ಪರಲೋಕದಿಂದ ಭೂಲೋಕಕ್ಕೆ ಕರೆದುಕೊಂಡು ಬಂದಿತು. ಕ್ರಿಸ್ತನಲ್ಲಿರುವ ದೈವೀಕ ಪ್ರೀತಿಯು ಪಾಪಿಗಳು ಹಾಗೂ ವಿರೋಧಿಗಳಾಗಿರುವ ನಮ್ಮ ಬಳಿಗೆ ಕರೆದುಕೊಂಡು ಬಂದಿತು. ಆ ಪ್ರೀತಿಯಿಂದ ಆತನು ದಾಸನ ರೂಪವನ್ನು ತಾಳಿದನು. ಆ ಪ್ರೀತಿಯ ನಿಮಿತ್ತವೇ ಯೇಸು ಪಾಪಿಗಳಾಗಿರುವ ನಮ್ಮನ್ನು ಬಿಡಿಸಿದನು. ನಾವೂ ಸಹ ನಶಿಸಿಹೋಗುವ ಜನರನ್ನು ರಕ್ಷಿಸಲು ಯಾವುದೇ ತರಹದ ತ್ಯಾಗವನ್ನು ಮಾಡಲು ಸಿದ್ಧರಿರಬೇಕು.
ಜಾನ್ಸ್ಮಿತ್ಎನ್ನುವ ದೇವರ ಸೇವಕರು ಯಾವುದೇ ಗುರುತಿಸುವಿಕೆಯನ್ನು ಅಪೇಕ್ಷಿಸಲಿಲ್ಲ. ಒಮ್ಮೆ ಆತನ ಎದೆಗೆ ಜನರು ಹೊಡೆಯುವಾಗ ಅವರು ಅಳುತ್ತಾ ಹೀಗೆ ಹೇಳಿದರು, ” ನಾನು ನಶೀಸುವ ಆತ್ಮಗಳನ್ನು ನೋಡುವಾಗ ನನ್ನ ಹೃದಯವು ಮುರಿಯಲ್ಪಡುತ್ತದೆ ಎಂಬುದನ್ನು ದೇವರು ನನಗೆ ತೋರಿಸಿದರು, ಆತ್ಮಗಳು ರಕ್ಷಿಸಲ್ಪಡದೇ ಹೋದರೆ ನನ್ನ ಜೀವನಕ್ಕೆ ಅರ್ಥವಿರುವಿದಿಲ್ಲ. ಓ ದೇವರೇ ನನಗೆ ಆತ್ಮಗಳನ್ನು ನೀಡಿರಿ, ಇಲ್ಲವಾದರೆ ನಾನು ಸಾಯುತ್ತೇನೆ.” ಎಂದು ಆತನು ಭಾರದಿಂದ ಅಳುವದಕ್ಕೆ ಪ್ರಾರಂಭಿಸಿದನು.
ಆರದ ಬೆಂಕಿಯ ಕಡೆಗೆ ನಿರ್ಲಕ್ಷದಿಂದ ವೇಗವಾಗಿ ಸಾಗಿ ಹೋಗುತ್ತಿರುವ ಜನರ ಸ್ಥಿತಿಯನ್ನು ನೋಡುವ ಹಾಗೆ ದೇವರು ನಮಗೆ ಆಂತರ್ಯದ ಕಣ್ಣುಗಳನ್ನು ದಯಪಾಲಿಸಲಿ ಹಾಗೂ ಅವರ ಬಳಿಗೆ ಕನಿಕರ ಮತ್ತು ಪ್ರೀತಿಯಿಂದ ಹೋಗುವುದಕ್ಕೆ ದೇವರು ನಮಗೆ ಸಹಾಯ ಮಾಡಲಿ. ದೇವರು ನಮ್ಮ ಹೃದಯಗಳನ್ನು ಆಲೋಚನೆಗಳಿಂದಲೂ, ಧ್ಯಾನದಿಂದಲೂ ಮತ್ತು ಪ್ರೀತಿಯ ಕ್ರಿಯೆಗಳಿಂದಲೂ ತುಂಬಿಸಲಿ. ನಾವು ಕಲ್ವಾರಿಯ ಪ್ರೀತಿಯನ್ನು ಮೇಲಕ್ಕೆ ಎತ್ತುವದರಿಂದ ಆತ್ಮಗಳನ್ನು ದೇವರ ಕಡೆಗೆ ಸೆಳೆಯಲು ನಮಗೆ ಕೃಪೆಯನ್ನು ದಯಪಾಲಿಸಲಿ.
ಕ್ರಿಸ್ತನ ಪ್ರೀತಿಯ ಮೇಲೆ ಭರವಸೆಯನ್ನು ಇಟ್ಟವರು, ನಾಶವಾಗುತ್ತಿರುವ ಆತ್ಮಗಳ ಕುರಿತು ಭಾರವನ್ನು ಹೊಂದಿರುತ್ತಾರೆ. ಅಂತಹ ಹೃದಯಗಳಲ್ಲಿ ಸ್ವ ಮಹಿಮೆಗೆ ಯಾವ ಸ್ಥಳವೂ ಇರುವದಿಲ್ಲ. ಪ್ರಿಯ ದೇವರ ಮಕ್ಕಳೇ, ಕ್ರಿಸ್ತನ ಪ್ರೀತಿಯು ನಿಮ್ಮನ್ನು ಒತ್ತಾಯಪಡಿಸಲಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಮ್ಮನ್ನೇ ಪ್ರಸಿದ್ದಿಪಡಿಸಿಕೊಳ್ಳದೇ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂದು ಕರ್ತನೆಂತಲೂ ಪ್ರಸಿದ್ಧಿಪಡಿಸುತ್ತೇವೆ”.(೨ ಕೊರಿ ೪:೫)
