No products in the cart.
ಮಾರ್ಚ್ 09 – ಕುಟುಂಬದಲ್ಲಿ ಪ್ರೀತಿ!
“ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ ೫:೨೫)
ದೇವರನ್ನು ಪ್ರೀತಿಸುವ ಪ್ರತಿಯೊಬ್ಬರೂ ಅದೇ ರೀತಿಯಾಗಿ ತನ್ನ ಕುಟುಂಬವನ್ನು ಸಹ ಪ್ರೀತಿಸಬೇಕು. ಪ್ರತೀ ಕ್ರೈಸ್ತ ಕುಟುಂಬವು ಕಿಸ್ತನ ಪ್ರೀತಿಯನ್ನು ಲೋಕಕ್ಕೆ ಪ್ರತಿನಿಧಿಸುವವರಾಗಿರಬೇಕು.
ಎಫೆಸ ೫ ನೇ ಅಧ್ಯಾಯದಲ್ಲಿ ಪುರುಷನು, ಪತ್ನಿ ಹಾಗೂ ಮಕ್ಕಳಿಗೆ ವಿಶೇಷವಾದ ಆಲೋಚನೆಗಳನ್ನು ನೀಡಲಾಗಿದೆ. ಅಪೋಸ್ತಲನಾದ ಪೌಲನು ಹೀಗೆ ಪ್ರೋತ್ಸಾಹಿಸುತ್ತಿದ್ದಾನೆ, “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಮತ್ತು ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ ೫:೨೨, ೨೫)
ಹೌದು ಹೆಂಡತಿಯು ಗಂಡನಿಗೆ ಅಧೀನಳಾಗಬೇಕು ಮತ್ತು ಪುರುಷನು ತನ್ನ ಹೆಂಡತಿಯನ್ನು ಪ್ರೀತಿಸಬೇಕು. ಆಗ ಮಾತ್ರ ಮನೆಯಲ್ಲಿ ಸಾಮರಸ್ಯ, ಐಕ್ಯತೆಯು ನೆಲೆಸಿರುತ್ತದೆ. ಸಮಸ್ಯೆಗಳು ಸುಮ್ಮನೆ ಬರುವದಿಲ್ಲ. ಒಬ್ಬ ಗಂಡನು ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸಬೇಕು? ಪೌಲನು ಅದರ ಅಳತೆಯನ್ನು ಸ್ಪಷ್ಟವಾಗಿ ವಿವರಿಸುತ್ತಾ – ” ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರ, ಎಂಬುದಾಗಿ. ಆ ಪ್ರೀತಿಯು ಕ್ರಿಸ್ತನ ತ್ಯಾಗವನ್ನು ತೋರ್ಪಡಿಸುತ್ತದೆ.
ನಂತರ ಪೌಲನು ಪೋಷಕರು ಮತ್ತು ಮಕ್ಕಳ ಕುರಿತಾಗಿ ಮಾತನಾಡಿದ್ದಾನೆ. ದೇವರ ವಾಕ್ಯ ಹೇಳುತ್ತದೆ ” ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ.” (ವಿಮೋ ೨೦:೧೨)
ಪೋಷಕರ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವಿಲ್ಲ. . ಅವರು ಎಷ್ಟೇ ಮುಪ್ಪಿನವರಾದರೂ ವಿಶೇಷವುಳ್ಳವಾಗಿರುತ್ತಾರೆ. ತಂದೆ-ತಾಯಿಗಳನ್ನು ಗೌರವಿಸುವುದು ಮಕ್ಕಳ ಪ್ರಾಮುಖ್ಯವಾದ ಕರ್ತವ್ಯವಾಗಿದೆ.
ನಾವು ನಮ್ಮ ಸಹೋದರರನ್ನು ಪ್ರೀತಿಸಲು ಆಜ್ಞಾಪಿಸಲ್ಪಟ್ಟಿದ್ದೇವೆ. (೧ ಪೇತ್ರ ೨:೧೭). ನಮ್ಮ ಸಹೋದರರು ಮತ್ತೊ ಸಹೋದರಿಯರು ದೇವರಿಗೆ ಮಹಿಮೆ ತರಲು ನಮಗೆ ಸಹಾಯ ಮಾಡುವರು. ಒಂದು ಕುಟುಂಬದ ರಕ್ತಸಂಬಂಧಿಗಳು ಒಟ್ಟಾಗಿ ಇರುವಾಗ ಶತ್ರುವು ಆ ಕುಟುಂಬದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ.
ದುಃಖಕರವಾದ ಕಾರ್ಯವೇನಂದರೆ ಕೆಲವು ಕುಟುಂಬಗಳಲ್ಲಿ ಮಕ್ಕಳ ಮಧ್ಯದಲ್ಲಿ ತಮ್ಮ ಆಸ್ತಿಯನ್ನು ವಿಭಾಗ ಮಾಡುವ ಸಂದರ್ಭ ಬಂದಾಗ ಸಹೋದರ ಬಾಂಧವ್ಯ ಮುರಿದು ಹೋಗುತ್ತದೆ. ಇನ್ನೂ ಕೆಲವು ಕುಟುಂಬಗಳಲ್ಲಿ, ಅಪಾರ್ಥಗಳು, ಕೆಲವೊಮ್ಮೆ ಜೀವನ ಸಂಗಾತಿಯ ಒತ್ತಡಗಳು, ಸಂಬಂಧಿಗಳಲ್ಲಿ ಬಿರುಕು ಮೂಡುವದು. ಆದರೆ ದೇವರ ಮಕ್ಕಳಾದ ನಾವು, ಇಂತಹ ಯಾವ ಸಂದರ್ಭಗಳಲ್ಲಿಯೂ ನಮ್ಮಲ್ಲಿರುವ ಪ್ರೀತಿಯು ನಾಶಮಾಡದಂತೆ ಜಾಗ್ರತೆ ವಹಿಸಬೇಕು. ಪ್ರೀತಿಯನ್ನು ಮತ್ತು ಬಾಂಧವ್ಯವನ್ನು ಕಾಪಾಡಿಕೊಳ್ಳುವದು ನಮ್ಮ ಕರ್ತವ್ಯವಾಗಿದೆ.
ದೇವರ ವಾಕ್ಯ ನಮ್ಮನ್ನು ಎಚ್ಚರಿಸುತ್ತದೆ, ” ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ, ಮತ್ತು ಅವನಲ್ಲಿ ವಿಘ್ನಕರವಾದದ್ದು ಏನೂ ಇಲ್ಲ.” (೧ ಯೋಹಾ ೨:೧೦-೧೧)
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವುಳ್ಳದ್ದು! ” (ಕೀರ್ತ ೧೩೩:೧)
