Appam, Appam - Kannada

ಫೆಬ್ರವರಿ 24 – ಒಳ್ಳೆಯದನ್ನು ಮಾಡುವಾತನು?

“ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದ್ದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾದಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು.” (ಅ ಕೃ ೧೦:೩೮)

ನಮ್ಮ ಪ್ರಿಯ ಯೇಸುಕ್ರಿಸ್ತನು ಒಳ್ಳೆಯವನು. ಕಾರಣ ಅವರು ಒಳ್ಳೆಯವರು. ಸತ್ಯವೇದವು ಹೇಳುತ್ತದೆ ಯೇಸು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುವವರನ್ನು ಗುಣಪಡಿಸುತ್ತಾ ಇದ್ದನು. ಎರಡು ಸಾವಿರ ವರ್ಷಗಳ ಹಿಂದೆ ಒಳ್ಳೆಯದನ್ನು ಮಾಡುತ್ತಿದ್ದ ಅದೇ ಯೇಸುವು ಇಂದಿಗೂ ಮಾರ್ಪಡದೇ ಹಾಗೇಯೆ ಇದ್ದಾರೆ. ಆತನು ನಿಮ್ಮಲ್ಲಿ ಒಳ್ಳೆಯದನ್ನು ಮಾಡಲು ಈಗಲೂ ನಮ್ಮ ಮಧ್ಯೆ ಇದ್ದಾರೆ.

ಒಬ್ಬ ವ್ಯಕ್ತಿಯು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಇರುತ್ತಾನೆ, ಆತನೇ ಸೈತಾನನು. ಆತನು ಕದ್ದುಕೊಳ್ಳುವುದಕ್ಕೂ, ಕೊಲೆ ಮಾಡುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆ ಹೊರತು ಮತ್ತಾವುದಕ್ಕೂ ಅಲ್ಲ. ಆದರೆ ಯೇಸು ಒಳ್ಳೆಯವರಾಗಿದ್ದಾರೆ, ಆತನು ನಮಗೆ ಜೀವವನ್ನು ಕೊಡಲು, ಆ ಜೀವವು ಸಮೃದ್ಧಿಯಾಗಿರಬೇಕಂತಲೂ ಬಂದನು. (ಯೋಹಾ ೧೦:೧೦)

ಒಳ್ಳೆಯದನ್ನು ಮಾಡುವ ದೇವರು ಅಷ್ಟಕ್ಕೆ ನಿಲ್ಲಿಸದೇ, ಆತನು ಕೆಟ್ಟದ್ದನ್ನು ಮಾಡುವ, ಸೈತಾನನ್ನು ಓಡಿಸಿ ಆತನ ಕೈಮುಷ್ಟಿಯಿಂದ ತನ್ನ ಜನರನ್ನು ಬಿಡಿಸುತ್ತಾನೆ, ಸತ್ಯವೇದವು ಸ್ಪಷ್ಟವಾಗಿ ತಿಳಿಸುತ್ತದೆ, ಯೇಸು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುವವರನ್ನು ಗುಣಪಡಿಸುತ್ತಾ ಇದ್ದನು. (ಅ.ಕೃ ೧೦:೩೮).

ಒಂದು ಸಾರಿ ಒಬ್ಬ ಸಹೋದರಿ ಅನಾರೋಗದಿಂದ ಆಸ್ಪತ್ರೆಯಲ್ಲಿ ದಾಖಲಾದರು. ಆ ಕಾಯಿಲೆಯು ಆಕೆಯನ್ನು ಐದು ವರ್ಷಗಳು ಸುಧೀರ್ಘವಾಗಿ ಕಾಡಲಾರಂಭಿಸಿತು. ವೈದ್ಯರು ಕಾಯಿಲೆಯ ಸ್ವರೂಪವನ್ನು ಕಂಡುಹಿಡಿಯಲು ಹರ ಸಾಹಸ ಪಟ್ಟರು. ಲಕ್ಷಾಂತರ ರೂಪಾಯಿಗಳು ಖರ್ಚಾಯಿತು. ಆದರೂ ಆರೋಗ್ಯದ ಸ್ಥಿತಿಯಲ್ಲಿ ಯಾವ ಸುಧಾರಣೆಯು ಕಂಡುಬರಲಿಲ್ಲ.

ಒಂದು ದಿನ ಒಬ್ಬ ದೈವ ಸೇವಕರು ಆಸ್ಪತ್ರೆಗೆ ಬಂದು ದೇವರ ಪ್ರೀತಿಯ ಕುರಿತು ಹಂಚಿಕೊಂಡರು. ಆ ಸಹೋದರಿಯು ಕಣ್ಣೀರಿನಿಂದ ಹೀಗೆ ಕೂಗಿದಳು, “ಸರ್‌, ದೇವರು ನಿಜವಾಗಿಯೂ ಒಳ್ಳೆಯವರಾಗಿದ್ದರೆ, ಈ ಕಾಯಿಲೆ ನನಗೆ ಏಕೆ? ಈ ಮರಣದ ಹೋರಾಟ ಯಾಕೆ? ಈ ವ್ಯರ್ಥವಾದ ಖರ್ಚು ಏಕೆ?

ದೇವರ ಸೇವಕರು ಆಕಗೆ ಯೋಹಾನ ೧೦:೧೦ ನ್ನು ವಿವರಿಸಿ ಹೇಳಿದ್ದೇನಂದರೆ “ನಿನ್ನ ಆರೋಗ್ಯಕ್ಕೆ ತಡೆಯಾಗಿರುವವರು ಸೈತಾನನಾಗಿದ್ದಾನೆ. ಆತನು ಒಬ್ಬ ಕಳ್ಳನಾಗಿದ್ದಾನೆ, ಕದ್ದುಕೊಳ್ಳುವುದಕ್ಕೂ, ಕೊಲೆ ಮಾಡುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆ ಹೊರತು ಮತ್ತಾವುದಕ್ಕೂ ಅಲ್ಲ. ಆದರೆ ಯೇಸು ಒಳ್ಳೆಯವರಾಗಿದ್ದಾರೆ, ಆತನು ನಮಗೆ ಜೀವವನ್ನು ಕೊಡಲು, ಆ ಜೀವವು ಸಮೃದ್ಧಿಯಾಗಿರಬೇಕಂತಲೂ ಬಂದನು” ಇದನ್ನು ಹೇಳಿ ಆ ಸೇವಕರು ಆಕೆಯ ತಲೆಯ ಮೇಲೆ ಕೈಯಿಟ್ಟು ಪ್ರಾರ್ಥಿಸಿದರು.

ಆಗ ಎಲ್ಲರೂ ಆಶ್ಚರ್ಯದಿಂದ ನೋಡುತ್ತಿರಲಾಗಿ ಆಶುದ್ಧ ಆತ್ಮಗಳು ಆಕೆಯಿಂದ ಹೊರಹೋದವು. ಯೇಸು ಕ್ರಿಸ್ತನು ಸೈತಾನನ ಕೈಯಿಂದ ಆಕೆಯನ್ನು ಸಂಪೂರ್ಣವಾಗಿ ಬಿಡಿಸಿದನು. ಆ ದಿನವೇ ಆ ಸಹೋದರಿಯು ದೈವೀಕ ಸ್ವಸ್ಥತೆಯನ್ನು ಹೊಂದಿ ಕೊಂಡಳು.

ಸರ್ವಶಕ್ತನಾದ ಒಳ್ಳೆಯ ದೇವರು ಸೈತಾನನ ಎಲ್ಲಾ ಶಕ್ತಿಯ ಮೇಲೆ ಅಧಿಕಾರವನ್ನು ನಿಮಗೆ ಕೊಟ್ಟಿದ್ದಾರೆ. ಯೇಸು ನೀಡಿರುವ ಅಧಿಕಾರವನ್ನು ಉಪಯೋಗಿಸಕೊಂಡು ಸೈತಾನನ್ನು ಗದರಿಸಿರಿ. ಆತನು ನಿಮ್ಮನ್ನು ಬಿಟ್ಟು ಹೋಗುವನು.

ಪ್ರಿಯ ದೇವರ ಮಕ್ಕಳೇ, ಯೇಸು ಕ್ರಿಸ್ತನನ್ನು ನಿಮ್ಮ ಜೀವನದೊಳಗೆ ಆಹ್ವಾನಿಸಿ ಅವರನ್ನು ಕೊಂಡಾಡಿರಿ. ಆತನು ಒಳ್ಳೆಯವನು, ಒಳ್ಳೆಯದನ್ನೇ ಮಾಡುವನು. ಆಗ ಸೈತಾನನವು ನಿಮ್ಮನ್ನು ಬಿಟ್ಟು ಹೋಗುವನು, ದೇವರ ಆರ್ಶೀವಾದಗಳು ನಿಮ್ಮ ಹಿಂಬಾಲಿಸುತ್ತದೆ. ಮತ್ತು ದೇವರ ಒಳ್ಳೆಯತನವು ನಿಮ್ಮನ್ನು ಆವರಿಸುತ್ತದೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.” (ಪ್ರಕ ೧೨:೧೧)

Leave A Comment

Your Comment
All comments are held for moderation.