Appam, Appam - Kannada

ಫೆಬ್ರವರಿ 23 – ಕರ್ತನು ಒಳ್ಳೆಯವನು!

“ಯೇಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.” (ಕೀರ್ತ ೩೪:೮)

ಪ್ರೀತಿಯಿಂದ ನಮ್ಮ ಪ್ರಿಯ ಕರ್ತನನ್ನು ದೃಷ್ಟಿಸಿ ನೋಡಿರಿ. ಹೃದಯ ಅಂತರಾಳದಿಂದ ಹಾಗೂ ಪ್ರೀತಿಯಿಂದ ಆತನನ್ನು ಸ್ತುತಿಸುತ್ತಾ ಹೀಗೆ ಹೇಳಿರಿ, “ದೇವರೇ ನೀನು ಒಳ್ಳೆಯವನು, ನೀನು ಒಳ್ಳೆಯವನು ಹಾಗೂ ಆ ಒಳ್ಳೆಯ ದೇವರನ್ನು, ಸರ್ವಶಕ್ತನನ್ನು, ಒದಗಿಸುವವನನ್ನು ಸ್ತುತಿಸಿ ಕೊಂಡಾಡಿರಿ. ಕಾರಣ ಆತನು ಒಳ್ಳೆಯವನು, ಆತನ ಒಳ್ಳೆತನವನ್ನು ನಮ್ಮ ಮೇಲೆ ಅಪರಿಮಿತವಾಗಿ ಸುರಿಸುವನು.

ನಾವು ದೇವರು ಒಳ್ಳೆಯವರು ಎಂದು ಬರೀ ಮಾತಿನಲ್ಲಿ ಮಾತ್ರ ಹೇಳಿದರೆ ಸಾಲದು. ನಮ್ಮ ಜೀವನದ ಎಲ್ಲಾ ಅನುಭವಗಳಲ್ಲಿ ನಮ್ಮ ದೇವರು ಒಳ್ಳೆಯವರೆಂದು ರುಚಿಸಿ ತಿಳಿದುಕೊಳ್ಳಬೇಕು. ಸಾಧಾರಣವಾದ ಊಟವನ್ನು ರುಚಿಯಾಗಿ ಸಿದ್ಧಪಡಿಸಿದ ಒಬ್ಬ ವ್ಯಕ್ತಿಯನ್ನು ರುಚಿ ನೋಡಿದ ಮೇಲೆ ನಾವು ಪ್ರಶಂಸಿಸುವುದಾರೆ ಇನ್ನೂ ಎಷ್ಟು ಹೆಚ್ಚಾಗಿ ದೇವರ ಒಳ್ಳೆಯತನವನ್ನು ರುಚಿಸಿ ಅದರ ಅನುಭವವನ್ನು ನಾವು ಪಡೆದುಕೊಳ್ಳಬೇಕು.

ದಾವೀದನು ಯೌವನಸ್ಥನಾಗಿದ್ದಾಗ, ಅವನು ದೇವರು ಸರ್ವೋತ್ತಮನೆಂದು ರುಚಿಸಿ ತಿಳಿದುಕೊಂಡನು. ಆತನು ಕುರುಬನಾಗಿರುವಾಗ ದೇವರನ್ನು ಅನುಭವದಿಂದ ತಿಳಿದುಕೊಂಡಿದ್ದನು. ಆತನು ಗೊಲ್ಯಾತನನ್ನು ಸೋಲಿಸಿದಾಗ, ದೇವರು ಒಳ್ಳೆಯವರು ಎಂದು ತಿಳಿದುಕೊಂಡನು. ದೇವರು ತಾಯಿಯ ಹಾಗೆ ಸಂತೈಸಿದ ಎಲ್ಲಾ ಸಮಯದಲ್ಲಿ ದೇವರ ಒಳ್ಳೆಯತನವನ್ನು ದಾವೀದನು ಕಂಡನು. ದಾವೀದನು ದೇವರನ್ನು ಅನುಭವಿಸಿದ ಪ್ರಕಾರ ಈಗಲೂ ನಾವು ಆತನನ್ನು ರುಚಿ ನೋಡಿ ಅನುಭವಿಸುವದಕ್ಕಾಗಿ ನಮ್ಮನ್ನು ಕರ್ತನು ಆಹ್ವಾನಿಸುತ್ತಿದ್ದಾನೆ.

ನಾವು ಕರ್ತನನ್ನು ರುಚಿ ನೋಡಿ ಆತನ ಒಳ್ಳೆಯತನವನ್ನು ಪ್ರಕಟಿಸುವಾಗ ಅದರ ಜೊತೆ ನಾವು ಆತನ ಕೃಪೆಯನ್ನು ಸಹ ರುಚಿ ನೋಡುತ್ತೇವೆ. ದೇವರ ವಾಕ್ಯದಲ್ಲಿ ಹೀಗೆ ಓದುತ್ತೇವೆ, “ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ.” (ಕೀರ್ತ ೮೬:೫)

ಸತ್ಯವೇದದಲ್ಲಿ ದೇವರ ಒಳ್ಳೆಯತನದ ಕುರಿತು ಮಾತ್ರ ಬರೆಯಲ್ಪಡಲಿಲ್ಲ ಬದಲಿಗೆ ಆತನ ಒಳ್ಳೆಯತನದ ಜೊತೆಗೆ ದೇವರ ಕರುಣೆಯನ್ನು ಅನೇಕ ವಾಕ್ಯ ಭಾಗಗಳಲ್ಲಿ ಓದುತ್ತೇವೆ.

ಈ ಲೋಕದಲ್ಲಿ ಅನೇಕರು ಒಳ್ಳೆಯವರ ಹಾಗೆ ಕಾಣಿಸಿಕೊಳ್ಳುತ್ತಾರೆ. ಅವರು ಸಿಹಿಯಾದ ಮಾತುಗಳನ್ನಾಡುತ್ತಾರೆ ಮತ್ತು ನಮ್ಮ ಹೃದಯಗಳು ಸುಲಭವಾಗಿ ಅವರನ್ನು ನಂಬುತ್ತದೆ. ಆದರೆ ಒಂದು ದಿನ ಅವರ ನಿಜವಾದ ಬಣ್ಣವು ಹೊರ ಬಂದಾಗ ಅವರು ಕೆಟ್ಟತನದ ಪ್ರತಿಬಿಂಭವಾಗಿರುವ ಸರ್ಪದ ಹಾಗೆ ಕಾಣುತ್ತಾರೆ. ಆಗ ನಾವು ತೀರ ಅಸಹಾಯಕರಾಗಿ ಕಂಡುಬರುತ್ತೇವೆ.

ದೇವರ ವಾಕ್ಯ ಹೇಳುತ್ತದೆ, ” ಇದು ಶಾಸ್ತ್ರದಲ್ಲಿ ಬರೆದಿರುವ ಮಾತುಗಳಿಗೆ ಸರಿಯಾಗಿವೆ; ಅವು ಯಾವವಂದರೆ – ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ; ತಿಳುವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ. ಎಲ್ಲರೂ ದಾರಿ ತಪ್ಪಿ ನಡೆಯುತ್ತಾರೆ, ಎಲ್ಲರೂ ಕೆಲಸಕ್ಕೆ ಬಾರದವರಾದರು. ಒಳ್ಳೇದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ, ” (ರೋಮ ೩:೧೦-೧೨) ಮತ್ತೆ ಹೀಗೆ ಓದುತ್ತೇವೆ, ” ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತಿ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.” (ಲೂಕ ೧೮:೧೯).

ಜೀವನದಲ್ಲಿ ಅನೇಕ ಸಮಸ್ಯೆಗಳು ಬರುವಾಗ, ದೇವರು ನಿಜವಾಗಲೂ ಒಳ್ಳೆಯವರಾ ಎಂದು ಸೈತಾನನು ನಿಮ್ಮಲ್ಲಿ ಸಂದೇಹವನ್ನು ತರುತ್ತಾನೆ. ಉದಾಹರಣೆಗೆ: ಒಬ್ಬ ಚಿತ್ರಕಲಾಕಾರನು ಒಂದು ಮೂಲ ಚಿತ್ರವನ್ನು ಬಿಡಿಸಲು ಪ್ರಾರಂಭಿಸಿದನು. ಪ್ರಾರಂಭದಲ್ಲಿ ಯಾವ ನಿಕರವಾದ ಚಿತ್ರ ಕಾಣದೇ, ಅರ್ಥವಿಲ್ಲದ ಗೆರೆಗಳು ಮಾತ್ರ ಇದ್ದವು. ಇದನ್ನು ಅರ್ಧದಲ್ಲಿ ಗಮನಿಸಿದ ಒಬ್ಬ ವ್ಯಕ್ತಿಯು ಈ ಚಿತ್ರವು ಸರಿ ಇಲ್ಲ ಎಂಬ ನಿರ್ಧಾರಕ್ಕೆ ಬರಬಹುದು. ಆದರೆ ತಾಳ್ಮೆಯಿಂದ ಕಾಯುವಾಗ ಅಂತ್ಯದಲ್ಲಿ, ಪ್ರಾರಂಭದಲ್ಲಿ ಆಕರ್ಷಣೆಯಿಲ್ಲದೆ ಕಾಣಿಸಿದ ಗೆರೆಗಳು ಸುಂದರವಾಗಿಯೂ ಮತ್ತು ಅರ್ಥಪೂರ್ಣವಾಗಿಯೂ ಕಾಣಿಸುತ್ತದೆ.

ಪ್ರಿಯ ದೇವರ ಮಕ್ಕಳೇ, ನೀವು ತಾಳ್ಮೆಯಿಂದ ದೇವರ ಕಾರ್ಯಗಳನ್ನು ಗಮನಿಸಿದರೆ, ಅಂತ್ಯದಲ್ಲಿ ದೇವರ ಎಲ್ಲಾ ಕಾರ್ಯಗಳೂ ಒಳ್ಳೆಯದಾಗಿರುತ್ತದೆ. ಮತ್ತು ದೇವರು ಒಳ್ಳೆಯವನು ಎಂದು ನೀವು ತಿಳಿದುಕೊಳ್ಳುವಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಇದಲ್ಲದೇ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ.” (ರೋಮ ೮:೨೮)

Leave A Comment

Your Comment
All comments are held for moderation.