No products in the cart.
ಫೆಬ್ರವರಿ 19 – ಯೋಗ್ಯನಲ್ಲ!
“ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಅಪಾತ್ರನಾಗಿದ್ದೇನೆ.” (ಆದಿ ೩೨:೧೦)
ಯಾಕೋಬನ ಈ ಮಾತುಗಳನ್ನು ಪದೇ ಪದೇ ಓದಿರಿ. ಇದರಿಂದ ಅವರ ಹೃದಯವನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆತನ ಹೃದಯವು ದೀನತೆಯಿಂದ ಮತ್ತು ಕೃತಜ್ಞತೆಯಿಂದ ತುಂಬಿತ್ತು. ದೀನತೆ ಮತ್ತು ಸ್ತುತಿಯು ದೇವರ ಹೃದಯವನ್ನು ಕರಗಿಸುವ ಉತ್ತಮವಾದ ಗುಣಲಕ್ಷಣಗಳಾಗಿವೆ.
ಇಡೀ ಸತ್ಯವೇದದಲ್ಲಿ ದೇವರು ದೀನರನ್ನು ಘನಪಡಿಸಿ ಮೇಲೆತ್ತಿದ್ದಾನೆ. ದಾವೀದನ ದೀನತೆಯನ್ನು ಗಮನಿಸಿರಿ, ದಾವೀದನು ದೇವರ ಸಮ್ಮುಖದಲ್ಲಿ ತಗ್ಗಿಸಿಕೊಂಡು ಹೀಗೆ ಹೇಳಿದರು, “ಕರ್ತನೇ, ಯೆಹೋವನೇ, ನಾನೆಷ್ಟರವನು? ನನ್ನ ಮನೆ ಎಷ್ಟರದು? ನೀನು ನನ್ನನ್ನು ಇಲ್ಲಿಯವರೆಗೂ ತಂದಿದ್ದೀಯಲ್ಲಾ.” (೨ ಸಮು ೭:೧೮).
ಸೋಲೋಮೋನನ್ನು ನೋಡಿರಿ, ಆತನು ದೇವರ ಮುಂದೆ ತಗ್ಗಿಸಿಕೊಂಡು ಹೇಳಿದ್ದೇನಂದರೆ, ” ನನ್ನ ದೇವರಾದ ಯೆಹೋವನೇ, ನನ್ನ ತಂದೆಗೆ ಬದಲಾಗಿ ನಿನ್ನಿಂದ ಅರಸನಾಗಿ ನೇಮಿಸಲ್ಪಟ್ಟ ನಿನ್ನ ಸೇವಕನಾದ ನಾನು ಚಿಕ್ಕವನು: ” (೧ ಅರಸ ೩:೭).
ಯೇಸು ಕ್ರಿಸ್ತನು ಸ್ನಾನಿಕನಾದ ಯೋಹಾನನ ಬಳಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಬಂದಾಗ, ಯೋಹಾನನು ತನ್ನನ್ನು ಆಳವಾಗಿ ತಗ್ಗಿಸಿಕೊಂಡು ದೀನ ಮನಸ್ಸಿನಿಂದ ಹೀಗೆ ಹೇಳಿದನು, ” ನಾನು ನಿನ್ನಿಂದ ಸ್ನಾನ ಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನಮ್ಮ ಬಳಿಗೆ ಬರುವುದೇನು ಎಂದು ಹೇಳಿದನು.” (ಮತ್ತಾ ೩:೧೪).
ಶತಾಧಿಪತಿಯ ಮಾತನ್ನು ಕೇಳಿಸಿಕೊಳ್ಳಿರಿ, ” ಫ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.” (ಮತ್ತಾ ೮:೮)
ಕಾನಾನ್ಯರ ಸ್ತ್ರೀಯನ್ನು ನೋಡಿರಿ, ಆಕೆಯು ತನ್ನನ್ನು ತಗ್ಗಿಸಿಕೊಂಡು ಹೀಗೆ ಹೇಳಿದಳು, “ಆಕೆ – ಆ ಮಾತು ನಿಜವೇ, ನಾಯಿ ಮರಿಗಳಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ ಅಂದಳು.” (ಮತ್ತಾ ೧೫:೨೭)
ಅಪೋಸ್ತಲನಾದ ಪೌಲನು ಹೇಗೆ ತನ್ನನ್ನು ತಗ್ಗಿಸಿಕೊಂಡನು ಎಂಬದನ್ನು ನೋಡಿರಿ. ” ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು.” (೧ ತಿಮೋ ೧:೧೫).
ದೇವರ ಮುಂದೆ ತಮ್ಮನ್ನು ದೀನತೆಯಿಂದ ತಗ್ಗಿಸಿಕೊಂಡವರೆಲ್ಲರನ್ನು ದೇವರು ಉನ್ನತವಾಗಿ ಆಶೀರ್ವಾದಿಸಿದ್ದಾರೆ. ನಿಮ್ಮ ಹೃದಯವೂ ಯಾವಾಗಲೂ ಸ್ತುತಿ ಮತ್ತು ಕೃತಜ್ಞತೆಯಿಂದ ತುಂಬಿರಲಿ. ಕೃಪಾಭರಿತನಾದ ಯೇಸುವಿನ ಮುಖವನ್ನು ನೋಡಿ ಹೀಗೆ ಹೇಳಿರಿ, ” ತಂದೆಯೇ ನಾನು ನಿಮ್ಮನ್ನು ವಂದಿಸುತ್ತೇನೆ”. ನೀವು ಇದನ್ನು ಮಾಡುವಾಗ ನೀವು ಮೇಲಿನಿಂದ ಆತ್ಮೀಕ ಆಶೀರ್ವಾದಗಳನ್ನು ಸ್ವಾಧೀನಪಡಿಸಿಕೊಳ್ಳುವಿರಿ.
ನೀವು ದೇವರ ಮಂದಿರಕ್ಕೆ ಹೋಗುವಾಗ ನಿಮ್ಮನ್ನು ಕಾಪಾಡಿಕೊಳ್ಳಿರಿ, ನಿಮ್ಮ ನಡೆ, ವಸ್ತ್ರಗಳು ಮತ್ತು ಜೀವನ ಶೈಲಿಯು ನಿಮ್ಮಲ್ಲಿ ಅಹಂ ಬರದ ಹಾಗೆ ಜಾಗ್ರತೆ ವಹಿಸಬೇಕು. ನಿಮ್ಮ ಸಹೋದರರ ಮುಂದೆ ದೀನರಾಗಿ ನಡೆದುಕೊಳ್ಳಿರಿ. ದೇವರ ಮಂದಿರಕ್ಕೆ ಕೃತಜ್ಞತೆಯುಳ್ಳವರಾಗಿ ಪ್ರವೇಶಿಸಿರಿ. ಮತ್ತು ಹೃದಯಂತರಾಳದಿಂದ ಸ್ತುತಿಸಿರಿ.
ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: “ಅವರು ಯೆಹೋವನ ಕೃಪೆಗೋಸ್ಕರವೂ ಆತನನ್ನು ಕೊಂಡಾಡಲಿ. ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸಿ ಉತ್ಸಾಹ ಧ್ವನಿಮಾಡುತ್ತಾ ಆತನ ಮಹತ್ಕಾರ್ಯಗಳನ್ನು ವರ್ಣಿಸಲಿ. ” (ಕೀರ್ತ ೧೦೭:೨೧-೨೨)
