No products in the cart.
ಫೆಬ್ರವರಿ 06 – ಪ್ರತಿ ಮುಂಂಜಾನೆ ಹೊಸ ಕರುಣೆ!
“ನಾನು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸಗಾಗಿ ಒದಗುತ್ತದೆ; ನಿನ್ನ ಸತ್ಯಸಂದತೆಯು ದೊಡ್ಡದು.” (ಪ್ರಲಾ ೩:೨೨-೨೩)
ಪ್ರತಿ ದಿನ ಮುಂಜಾನೆ ಬೇಗನೆ ಎದ್ದು ದೇವರ ಸಮ್ಮುಖದಲ್ಲಿ ವೈಯಕ್ತಿಕ ಪ್ರಾರ್ಥನೆಯಲ್ಲಿ ಯಾರು ಸಮಯವನ್ನು ಕಳೆಯುತ್ತಾರೋ ಅವರಿಗೆ ದೇವರ ಕರುಣೆಯು ದೊರೆಯುವುದು. ಹೌದು ದೇವರ ಕೃಪೆಯಿಂದ ಮಾತ್ರ ನಾವು ಅಳಿಯದೇ ಇನ್ನೂ ಉಳಿದಿದ್ದೇವೆ. ಆತನ ಕನಿಕರವು ಎಂದಿಗೂ ನಿಂತುಹೋಗುವದಿಲ್ಲ. ಆತನ ಕೃಪಾವರಗಳು ಪ್ರತಿ ಮುಂಜಾನ ಹೊಸಹೊಸಗಾಗಿ ಕಾಣುತ್ತದೆ.
ಹಳೆಒಡಂಬಡಿಕೆಯ ಕಾಲದಲ್ಲಿ , ದೇವರು ಪ್ರತಿ ದಿನ ಇಸ್ರಾಯೇಲ್ಯರ ಬಿಡಾರದ ಮುಂದೆ ಮನ್ನ ಬಂದು ಬೀಳುವಂತೆ ಮಾಡಿದನು. ಪ್ರತಿ ದಿನ ತಾಜ ಮನ್ನವನ್ನು ದೇವರು ಅನುಗ್ರಹಿಸಿದನು. ಹಿಂದಿನ ದಿನದ ಮನ್ನಾವನ್ನು ಮರುದಿನ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಆ ಆಹಾರವನ್ನು ಆ ಹೋತ್ತೇ ಖಾಲಿಮಾಡಬೇಕಿತ್ತು.
ಕಾರಣ ಅದು ಬಿಸಿಲ ತಾಪಕ್ಕೆ ಬೇಗನೇ ಕರಗಿ ನೀರಾಗುತ್ತದೆ. ಸೂರ್ಯನು ನೆತ್ತಿಯ ಮೇಲೆ ಬರುವದರರೊಳಗೆ ಇದನ್ನು ಸಂಗ್ರಹಿಸಬೇಕು. ಒಂದು ಕುಟುಂಬವು ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಆರಿಸಿಕೊಳ್ಳಬೇಕು. ಇನ್ನೊಂದು ಕುಟುಂಬಕ್ಕೆ ಸೇರಿಸಿ ಇಟ್ಟುಕೊಳ್ಳಬಾರದು. ಪ್ರತೀ ಮನೆಗೆ ಅವಶ್ಯವಾದ ಮನ್ನವನ್ನು ದೇವರು ನೀಡಿದನು. ಆ ಮನ್ನವನ್ನೇ ನಾವು ದೇವರ ಕರುಣೆಯೆಂದು ಚಿತ್ರಿಸಿಕೊಂಡಿದ್ದೇವೆ.
ಪ್ರಿಯ ದೇವರ ಮಕ್ಕಳೇ ಪ್ರತೀ ದಿನ ನೀವು ವೈಯಕ್ತಿಕವಾಗಿ ಪ್ರಾರ್ಥಿಸುವಾಗ ದೇವರ ಹೊಸ ಕೃಪೆಯು ನಿಮ್ಮನ್ನು ಆವರಿಸಿಕೊಳ್ಳುವದಕ್ಕಾಗಿ ಪ್ರಾರ್ಥಿಸಿರಿ. ನೀವ ಇದನ್ನು ಮಾಡುವಾಗ ಕರುಣಾಮಯನಾದ ದೇವರು ನಿಮ್ಮ ಜೀವನದಲ್ಲಿ ತನ್ನ ವಾಗ್ದಾನಗಳನ್ನು ನೆರವೇರಿಸುತ್ತಾನೆ. “ಬೆಟ್ಟಗಳು ಸ್ಥಳಗಳು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟು ಹೋಗದು.” (ಯೆಶಾ ೫೪:೧೦)
ದೇವರು ಎಂತಹ ಕೃಪೆಯನ್ನು ನಮಗೆ ನೀಡುತ್ತಾನೆ? ಆ ಕೃಪೆಯು ನಮ್ಮನ್ನು ಬಿಟ್ಟು ಹೋಗುವದಿಲ್ಲ. ನಿರಂತರವಾಗಿ ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯುತ್ತಿದ್ದ ದಾವೀದನನ್ನು ದೇವರು ನೋಡಿದಾಗ ಆತನಿಗೆ ಹೀಗೆ ವಾಗ್ದಾನವನ್ನು ನೀಡಿದನು “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು; ಅವನು ತಪ್ಪು ಮಾಡಿದರೆ ಅವನಿಗೆ ಮನುಷ್ಯ ಶಿಕ್ಷೆಯನ್ನು ಕೊಡುವೆನು, ನರಪುತ್ರನಂತೆ ಅವನನ್ನು ದಂಡಿಸುವೆನು. ಆದರೂ ನನ್ನ ಕೃಪೆಯು ಸೌಲನನ್ನು ಬಿಟ್ಟುಹೋದ ಹಾಗೆ ಅವನನ್ನು ಬಿಟ್ಟು ಹೋಗುವದಿಲ್ಲ, ನಾನು ಸೌಲನನ್ನು ನಿನ್ನೇದುರಿನಿಂದ ಹೊರಡಿಸಿಬಿಟ್ಟೆನಲ್ಲಾ. ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು.” (೨ ಸಮು ೭:೧೪-೧೬)
ಅರಸನಾದ ಸೋಲೋಮೋನನು ಅನೇಕ ಸಾರಿ ದೇವರಿಂದ ಮತ್ತು ಆತನ ಮಾರ್ಗಗಳಿಂದ ದೂರವಾದರೂ, ದೇವರು ಕೃಪಾಭರಿತನಾಗಿ ಆತನಿಗೆ ಕರುಣೆಯನ್ನು ತೋರಿಸಿದನು. ದಾವೀದನ ಪ್ರಾರ್ಥನೆಗಳು ಆತನ ಮಗನ ಮೇಲೆ ದೇವರ ಕರುಣೆಯು ಬರುವಂತೆ ಮಾಡಿದವು. ನಿಮ್ಮ ವೈಯಕ್ತಿಕ ಪ್ರಾರ್ಥನೆಗಳು ನಿಮಗೆ ಮಾತ್ರ ದೇವರ ಕರುಣೆಯನ್ನು ತರದೇ ನಿಮ್ಮ ಮಕ್ಕಳು ಮಕ್ಕಳ ಸಂತತಿಗೆ ಕರುಣೆಯ ಆಶೀರ್ವಾದಗಳನ್ನು ತರುತ್ತವೆ.
ಪ್ರಿಯ ದೇವರ ಮಕ್ಕಳೇ, ಯೇಸು ಕ್ರಿಸ್ತನು ದಾವೀದನ ಕುಮಾರನು ನಮಗೆ ಕರುಣೆಯನ್ನು ತೋರಿಸಿದ್ದಾನೆ. ಇದು ದೇವರ ಪರಿಪೂರ್ಣ
ಕೃಪೆಯಾಗಿದೆ. ಇದು ಸಮೃದ್ಧಿಯಾದ ಹಾಗೂ ತುಂಬಿ ಹೊರಸೂಸುವ ಕೃಪೆಯಾಗಿದೆ. ಈ ಕೃಪೆಯು ನಮ್ಮನ್ನು ಎಂದಿಗೂ ಬಿಟ್ಟುಹೋಗುವದಿಲ್ಲ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೇಸುಕ್ರಿಸ್ತನ ದಾಸನೂ ಅಪೋಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ.” (೨ ಪೇತ್ರ ೧:೧-೨)
