No products in the cart.
ಜನವರಿ 17 – ಮುರಿಯಲ್ಪಟ್ಟ ಮತ್ತು ಪಶ್ಚಾತ್ತಾಪದ ಹೃದಯ!
“ನಿನಗೆ ಯಜ್ಞಗಳಲ್ಲಿ ಅಪೇಕ್ಷೆ ಇಲ್ಲ, ಇದ್ದರೆ ಸಮರ್ಪಿಸೇನು; ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ. ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತ ೫೧:೧೬-೧೭)
ನೀವು ಮುರಿಯಲ್ಪಟ್ಟ ಹಾಗೂ ಪಶ್ಚಾತ್ತಾಪದ ಹೃದಯದಿಂದ ದೇವರ ಸಮ್ಮುಖಕ್ಕೆ ಬರುವಾಗ ಕರ್ತನ ಹೃದಯವು ಕನಿಕರದಿಂದ ಕರಗುವಂತಹದ್ದಾಗಿದೆ. ಆತನು ತನ್ನ ಕೈಗಳನ್ನು ಚಾಚಿ ನಿಮ್ಮನ್ನು ಅಪ್ಪಿಕೊಳ್ಳುವನು. ಒಬ್ಬ ವ್ಯಕ್ತಿಯು ಎಷ್ಟೇ ದೊಡ್ಡ ಪಾಪಿಯಾದರೂ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಕಣ್ಣೀರಿನಿಂದ, ಜಜ್ಜಿದ ಹೃದಯದಿಂದ ದೇವರ ಸಾನಿಧ್ಯಕ್ಕೆ ಬರುವಾಗ ಆತನು ಕ್ಷಮಾಪಣೆಯ ಹಸ್ತದಿಂದ ನಿಮ್ಮನ್ನು ಸ್ಪರ್ಷಿಸಿ, ತೊಳೆದು ನಿಮ್ಮನ್ನು ಪರಿಶುದ್ಧಗೊಳಿಸುವನು.
ದೇವರು ಹೀಗನ್ನುತ್ತಾನೆ ” ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿ ಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನು ಜಜ್ಜಿಹೋದ ಮನಸ್ಸನ್ನು ಉಜ್ಜೀವಿಸುವವನಾಗಿದ್ದೇನೆ.” (ಯೆಶಾಯ ೫೭:೧೫)
ದೇವರು ಮುರಿಯಲ್ಪಟ್ಟ ಹೃದಯಕ್ಕೆ ಏಕೆ ಮೌಲ್ಯವನ್ನು ಕೊಡಬೇಕು? ಆಳವಾದ ಗಣಿಯಿಂದ ಚಿನ್ನದ ಕಣಗಳಿಂದ ಕೂಡಿರುವ ಕಪ್ಪು ಕಲ್ಲನ್ನು ಹೊರಗೆ ತೆಗೆದು ಮೊದಲು ಅದನ್ನು ಮುರಿದು ಪುಡಿಪುಡಿ ಮಾಡುವರು. ನಂತರ ಅದನ್ನು ಬೆಂಕಿಯ ಚಿಲುಮೆಗೆ ಹಾಕುವರು, ಆಗ ಮಾತ್ರವೇ ಅದು ಶುದ್ಧವಾದ ಚಿನ್ನವಾಗಿ ರೂಪಾಂತರಗೊಂಡು ಸುಂದರವಾದ ಆಭರಣಗಳನ್ನು ತಯಾರಿಸಲು ಸಿದ್ಧವಾಗುತ್ತದೆ.
ನಮ್ಮ ಜೀವನಕ್ಕೂ ಇದು ಅನ್ವಯಿಸುತ್ತದೆ. ಸಮಸ್ಯೆಗಳು, ಕಷ್ಟಗಳಿಂದ ನಾವು ಮುರಿಯಲ್ಪಡುವಾಗ ದೇವರು ಆ ಎಲ್ಲಾ ಅನುಭವಗಳನ್ನು ಉಪಯೋಗಿಸಿಕೊಂಡು ನಮ್ಮ ಜೀವನವನ್ನು ಶುದ್ಧವಾದ ಚಿನ್ನವನ್ನಾಗಿ ರೂಪಿಸುವನು.
ಯೋಬನು ಕಠಿಣವಾದ ದುಃಖ ಮತ್ತು ಜಜ್ಜಲ್ಪಟ್ಟ ಅನುಭವಗಳನ್ನು ದಾಟಿಹೋದನು. ಆದರೂ ಆ ಜಜ್ಜಿದ ಪರಿಸ್ಥಿತಿಗಳು ಅತನ ಜೀವನದಲ್ಲಿ ಆಶೀರ್ವಾದವಾಗಿ ಮಾರ್ಪಟ್ಟವು. ಒಂದು ಗುಲಾಬಿ ಹೂವನ್ನು ಪರಿಗಣಿಸಿರಿ. ಅದು ಪರಿಮಳವನ್ನು ಹೀರಿಕೊಳ್ಳಬೇಕಾದರೆ ಮೊದಲು ಜಜ್ಜಲ್ಪಡಬೇಕು. ನಂತರವೇ ಅದು ಸುಮಧುರವಾದ ಪರಿಮಳವನ್ನು ನೀಡಲು ಸಾಧ್ಯವಾಗುತ್ತದೆ.
ಅದೇ ಪ್ರಕಾರ ನೀವು ದೇವರನ್ನು ಮೆಚ್ಚಿಸುವ ಪರಿಮಳವಾಗಿ ಬದುಕಬೇಕಾದರೆ ದೇವರು ತೋರಿಸುವ ಮಾರ್ಗದಲ್ಲಿ ಸಂತೋಷವಾಗಿ ನಡೆಯಬೇಕು. ಆ ಮಾರ್ಗದಲ್ಲಿ ನೀವು ಮುರಿಯಲ್ಪಟ್ಟರೂ ಸಂತೋಷದಿಂದಲೇ ಸಾಗಿಹೋಗಬೇಕು.
ಹಾಗೆಯೇ ನಿಮ್ಮ ಹೃದಯವು ಮುರಿಯಲ್ಪಟ್ಟು ಯೇಸು ಕ್ರಿಸ್ತನ ಪಾದ ಸಮ್ಮುಖದಲ್ಲಿ ಕಣ್ಣೀರನ್ನು ಸುರಿಸುವಾಗ ಪರಲೋಕವು ಅದನ್ನು ಗಮನಿಸುತ್ತದೆ. ಜಜ್ಜಲ್ಪಟ್ಟ ಹೃದಯದಿಂದ ಅರ್ಪಿಸುವ ಪ್ರಾರ್ಥನೆಗಳು ನೇರವಾಗಿ ದೇವರ ಪ್ರಸನ್ನತೆಗೆ ತಲುಪುತ್ತವೆ.
ಯೇಸು ಕ್ರಿಸ್ತನು ರೊಟ್ಟಿಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಅದನ್ನು ಮುರಿದನು. ಮುರಿಯಲ್ಪಟ್ಟ ಆ ರೊಟ್ಟಿಯು ಮುಂಬರುವ ದಿನಗಳಲ್ಲಿ ಮುರಿಯಲ್ಪಡುವ ಆತನ ಶರೀರಕ್ಕೆ ಸಂಕೇತವಾಗಿದೆ. ಕಲ್ವಾರಿ ಬೆಟ್ಟದಲ್ಲಿ ಆತನ ದೇಹವು ಮುರಿಯಲ್ಪಟ್ಟಿತು, ಗಾಯಗೊಂಡನು. “ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ” (ಯೆಶಾಯ ೫೩:೫).
ನಿಮಗಾಗಿ ಮುರಿಯಲ್ಪಟ್ಟ ದೇವರ ಕುಮಾರನನ್ನು ನೋಡಿರಿ. ನಿಮ್ಮ ಮುರಿಯಲ್ಪಟ್ಟ ಎಲ್ಲಾ ನೋವುಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ನಿಮ್ಮ ಕಣ್ಣೀರನ್ನು ಅವರು ಎಂದಿಗೂ ನಿರ್ಲಕ್ಷಿಸುವದಿಲ್ಲ. ನಿಮ್ಮ ಜಜ್ಜಲ್ಪಟ್ಟ ಹೃದಯವು ದೇವರ ಹೃದಯವನ್ನು ಆಳವಾಗಿ ಸ್ಪರ್ಷಿಸುವುದು. ಆತನು ತನ್ನ ಕರುಣೆಯ ಹಸ್ತಗಳಿಂದ ನಿಮ್ಮ ಪ್ರತಿಯೊಂದು ಕಣ್ಣೀರನ್ನು ಒರೆಸುವನು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರ ಮಾಡುತ್ತಾನೆ.” (ಕೀರ್ತ ೩೪:೧೮)
