No products in the cart.
ಏಪ್ರಿಲ್ 30 – ಯೋನನೋ ಅಥವಾ ಯೋಸೇಪನೋ ?
“ಈ ದೊಡ್ಡ ತುಫಾನು ನಿಮಗೆ ಸಂಭವಿಸಿದ್ದು ನನ್ನ ನಿಮಿತ್ತವೇ ಎಂಬದು ನನಗೆ ಗೊತ್ತು ಎಂದುತ್ತರಕೊಟ್ಟರರು”. (ಯೋನನು ೧:೧೨)
ನಿಮ್ಮ ಕುಟುಂಬದಲ್ಲಿ ‘ಯೋನ’ ಯಾರು? ಕುಟುಂಬವು ಒಡೆದು ಹೋಗುವಂತೆ ಮಾಡುವ ಬಿರುಗಾಳಿಗಳು, ಸಂಘರ್ಷಗಳು ಮತ್ತು ಅಶಾಂತಿಗೆ ಕಾರಣರಾರು? ನಿಮ್ಮ ಪಾಪಗಳು ಮತ್ತು ತಪ್ಪು ನಿರ್ಧಾರಗಳು ನಿಮ್ಮ ಮನೆತನಕ್ಕೆ ತೊಂದರೆಯನ್ನು ತರುತ್ತಿವೆಯೇ?
ಒಬ್ಬ ಯೋನನ ಕಾರಣದಿಂದಾಗಿ, ಇಡೀ ಹಡಗು ಸಂಕಷ್ಟಕ್ಕೆ ಸಿಲುಕಿತು. ಸಮುದ್ರದಲ್ಲಿ ಭೀಕರ ಬಿರುಗಾಳಿ ಎದ್ದು, ಹಡಗು ಒಡೆದು ಹೋಗುವ ಸ್ಥಿತಿ ತಲುಪಿತು. ನಾವಿಕರು ಭಯಭೀತರಾದರು. ಅವರು ಹಡಗಿನಲ್ಲಿದ್ದ ಸಾಮಾನುಗಳನ್ನು ಸಮುದ್ರಕ್ಕೆ ಎಸೆದರು. ಹಡಗಿನ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ತೀವ್ರವಾಗಿ ಹೋರಾಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ದೇವರಿಗೆ ಮೊರೆಯಿಟ್ಟರು.
ಆದರೆ ದೇವರ ಆಜ್ಞೆಯನ್ನು ಪಾಲಿಸುವ ಬದಲು ತಾರ್ಷೀಷಿಗೆ ಪ್ರಯಾಣಿಸಲು ನಿರ್ಧರಿಸಿದ್ದ ಯೋನನು ಮಾತ್ರ ಗಾಢ ನಿದ್ರೆಯಲ್ಲಿದ್ದನು.
ದೇವರು ತೋರಿಸಿದ ಮಾರ್ಗದಲ್ಲಿ ನಡೆಯುವ ಬದಲು ನಿಮ್ಮ ಸ್ವಂತ ಇಚ್ಛೆಯಂತೆ ನಡೆಯುತ್ತಾ ನೀವು ಯೋನನಂತಿದ್ದೀರಾ? ಲೋಕದಲ್ಲಿ ಅನೇಕ ಹೋರಾಟಗಳು ನಡೆಯುತ್ತಿರುವ ಈ ದಿನಗಳಲ್ಲಿ, ಕರ್ತನ ಬರೋಣವು ಸಮೀಪವಿರುವಾಗ ಮತ್ತು ಪವಿತ್ರಾತ್ಮನು ನಮ್ಮ ಮಧ್ಯೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವಾಗ, ನೀವು ಆತ್ಮಿಕ ನಿದ್ರೆಯಲ್ಲಿರುವ ಯೋನನಾಗಿದ್ದೀರಾ?
ನಿಮ್ಮ ಕುಟುಂಬದಲ್ಲಿನ ಬಿರುಗಾಳಿಗಳು, ಸಂಘರ್ಷಗಳು ಮತ್ತು ಅಶಾಂತಿಗಳು ನಿಲ್ಲಬೇಕಾದರೆ, ನಿಮ್ಮ ಜೀವನದಿಂದ ‘ಯೋನನ ಸ್ವಭಾವ’ವನ್ನು ತೆಗೆದುಹಾಕಬೇಕು. ಅದು ಅನೈತಿಕ ಆಲೋಚನೆಗಳಾಗಿರಲಿ, ಪಾಪದ ಆಸೆಗಳಾಗಿರಲಿ, ಅಪ್ರಾಮಾಣಿಕತೆ, ಅವಿಧೇಯತೆ ಅಥವಾ ಇತರ ಯಾವುದೇ ಪಾಪವಾಗಿರಲಿ, ಅದನ್ನು ಕ್ರಿಸ್ತನ ಶುದ್ಧೀಕರಿಸುವ ರಕ್ತವೆಂಬ ಸಮುದ್ರಕ್ಕೆ ಎಸೆಯಿರಿ. ಪಶ್ಚಾತ್ತಾಪಪಡಿರಿ, ಪಾಪದಿಂದ ದೂರವಿರಿ ಮತ್ತು ಕ್ರಿಸ್ತನ ಕಡೆಗೆ ಮರಳಿ ಬನ್ನಿ.
ನಿಮ್ಮ ಪಾಪದ ಕಾರಣದಿಂದಾಗಿ ನಿಮ್ಮ ನಿರಪರಾಧಿ ಕುಟುಂಬವು ಏಕೆ ಕಷ್ಟಪಡಬೇಕು? ಇಂದು ನೀವು ನೂತನ ಸೃಷ್ಟಿಯಾಗಲು ನಿರ್ಧರಿಸಿರಿ. ಆಗ ಬಿರುಗಾಳಿಯು ಶಾಂತವಾಗುವುದು, ಶಾಂತಿಯು ಮರಳುತ್ತದೆ ಮತ್ತು ದೇವರ ಆಶೀರ್ವಾದಗಳು ಹೆಚ್ಚಾಗುತ್ತವೆ.
ಒಬ್ಬ ಯೋನನಿಂದ ಎಲ್ಲರಿಗೂ ಹೇಗೆ ನಷ್ಟವಾಯಿತು ಎಂಬುದನ್ನು ಗಮನಿಸಿ.
ಆದರೆ ಈಗ ಹಳೆಯ ಒಡಂಬಡಿಕೆಯಲ್ಲಿನ ಯೋಸೇಫನನ್ನು ನೆನಪಿಸಿಕೊಳ್ಳಿರಿ. ಯೋಸೇಫನ ಜೀವನದ ಮೂಲಕ ಪ್ರತಿಯೊಬ್ಬರೂ ಆಶೀರ್ವದಿಸಲ್ಪಟ್ಟರು. ಅವನ ಸಹೋದರರು ಅವನನ್ನು ಗುಂಡಿಗೆ ಹಾಕಿ ಮಿದ್ಯಾನ್ಯ ದೇಶದ ವ್ಯಾಪಾರಿಗಳಿಗೆ ಮಾರಿದರು. ಆದರೂ ಅವನು ಐಗುಪ್ತದಲ್ಲಿ ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟನು. ನಂತರ ಅವನು ತನ್ನ ಸಹೋದರರಿಗೆ ಧಾನ್ಯವನ್ನು ಒದಗಿಸಿದನು. ಅವನು ತನ್ನ ತಂದೆಯನ್ನು ಐಗುಪ್ತಕ್ಕೆ ಕರೆತಂದು ತನ್ನ ಇಡೀ ಕುಟುಂಬ ಮತ್ತು ಸಂಬಂಧಿಕರನ್ನು ಅಲ್ಲಿ ಪೋಷಿಸಿದನು. ಯೋಸೇಫನ ಮೂಲಕ ಎಷ್ಟು ದೊಡ್ಡ ಆಶೀರ್ವಾದ ಬಂದಿತು ನೋಡಿ!
ಸತ್ಯವೇದವು ಹೀಗೆ ಹೇಳುತ್ತದೆ: “ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮಾನನಾಗಿದ್ದಾನೆ, ಒರತೆಯು ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿದ್ದಾನೆ. ಬಿಲ್ಲುಗಾರರು ಬಂದು ಅವನನ್ನು ಕೆಣಕಿ ಬಾಣ ಎಸೆದು ಕವಿದುಕೊಂಡರು. ಆದರೂ ಯಾಕೋಬನ ವಂಶಸ್ಥರನ್ನು ರಕ್ಷಿಸುವ ಪರಾಕ್ರಮಿಯ ಭುಜಬಲದಿಂದಲೂ ಒಸ್ರಾಯೇಲನಿಗೆ ಪಾಲಕನೂ ಬಂಡೆಯೂ ಆಗಿರುವಾತನ ಕಡೆಯಿಂದಲೂ ಅವನ ಬಿಲ್ಲು ಸ್ಥಿರವಾಗಿ ನಿಂತಿತು, ಅವನ ಕೈಗಳು ಚುರುಕಾಗಿ ಮಾಡಲ್ಪಟ್ಟವು.” (ಆದಿಕಾಂಡ 49:22–24)
ಪ್ರಿಯ ದೇವರ ಮಕ್ಕಳೇ, ನೀವು ಯೋನನೋ ಅಥವಾ ಯೋಸೇಫನೋ?
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ಥಿವಾರಕ್ಕಾಗಿ ಆಳುಗಳು ಸೋಲೋಮೋನನ ಅಪ್ಪಣೆಯಂತೆ ಶ್ರೇಷ್ಠವಾದ ದೊಡ್ಡಕಲ್ಲುಗಳನ್ನು ಕೊರೆಯುತ್ತಿದ್ದರು.” (೧ ಅರಸುಗಳು ೫:೧೭)
