No products in the cart.
ಮೇ 11 – ಪಾಪಕ್ಕೆ ಸಾಯುವ ಮೂಲಕ ಜಯ!
“ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ? … ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ. ಆತನಿಗೆ ಸ್ತೋತ್ರವಾಗಾಲಿ.” (1 ಕೊರಿಂಥ 15:55, 57)
ಯೇಸುಕ್ರಿಸ್ತನು ಮರಣ, ಪಾತಾಳ ಮತ್ತು ಸೈತಾನನ ಮೇಲೆ ವಿಜಯಶಾಲಿಯಾಗಿ ಮತ್ತೆ ಎದ್ದು ಬಂದನು. ಆತನು ಜಯ ಮತ್ತು ಮಹಿಮೆಯಲ್ಲಿ ಪುನರುತ್ಥಾನಗೊಂಡನು.
ಆತನ ಮಕ್ಕಳಾದ ನಾವು ಆ ಜಯವನ್ನು ಪರಂಪರೆಯಾಗಿ ಪಡೆದಿದ್ದೇವೆ ಮತ್ತು ಧೈರ್ಯದಿಂದ ಹೀಗೆ ಘೋಷಿಸುತ್ತೇವೆ: “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ? ”
ಯೇಸು ಮರಣಹೊಂದಿದನು, ಹೂಣಲ್ಪಟ್ಟನು ಮತ್ತು ಪುನರುತ್ತಾನ ಹೊಂದಿದನು ಎಂಬ ಸತ್ಯವು ಒಂದು ಚಾರೀತ್ರಿಕ ಸತ್ಯವಾಗಿದೆ—ಇದನ್ನು ಯಾರೂ ನಿರಾಕರಿಸಲಾಗದು. ಆದರೆ ಇದನ್ನು ಕೇವಲ ಇತಿಹಾಸವೆಂದು ನಾವು ಪರಿಗಣಿಸಿದರೆ, ಅದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ.
ನಾವು ವೈಯಕ್ತಿಕವಾಗಿ ಶಿಲುಬೆಯ ಬಳಿಗೆ ಬಂದು ನಂಬಿಕೆಯಿಂದ: “ನನಗಾಗಿ ನೀನು ಮರಣಹೊಂದಿದೆ”, “ನನಗಾಗಿ ನೀನು ಹೂಣಲ್ಪಟ್ಟೆ”, “ನನಗಾಗಿ ನೀನು ಎಬ್ಬಿಸಲ್ಪಟ್ಟೆ” ಎಂದು ಹೇಳಿದಾಗ ಮಾತ್ರ, ನಮ್ಮ ಜೀವನದಲ್ಲಿ ರಕ್ಷಣೆಯು ನಿಜವಾಗುತ್ತದೆ.
ಆದರೆ ವಿಜಯಶಾಲಿಯಾದ ಜೀವನ ಹೊಂದಿಕೊಳ್ಳಲು ಒಂದು ಪ್ರಾಮುಖ್ಯವಾದ ಹಂತವನ್ನು ತೆಗೆದುಕೊಳ್ಳಬೇಕಿದೆ. ಅದು ನಮ್ಮ ಸಮರ್ಪಣೆಯಾಗಿದೆ. ಅದೇನಂದರೆ: “ನಾನು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿದ್ದೇನೆ”, “ನಾನು ಕ್ರಿಸ್ತನೊಂದಿಗೆ ಹೂಣಲ್ಪಟ್ಟಿದ್ದೇನೆ”, “ಆತನ ಪುನರುತ್ಥಾನದ ಶಕ್ತಿಯ ಮೂಲಕ ನಾನು ಜಯದ ಜೀವನವನ್ನು ನಡೆಸುತ್ತೇನೆ”. ಇದೇ ವಿಜಯದ ರಹಸ್ಯ.
ಅಪೊಸ್ತಲನಾದ ಪೌಲನು ಹೀಗೆ ಘೋಷಿಸಿದನು: “ನಾನು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿದ್ದೇನೆ.” “ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸಹಿತ ಶಿಲುಬೆಗೆ ಹಾಕಿದರು.” (ಗಲಾತ್ಯ 5:24). “ನಾನು ಶಿಲುಬೆಗೆ ಹಾಕಿಸಿಕೊಂಡು ಲೋಕದ ಪಾಲಿಗೆ ಸತ್ತೆನು.” (ಗಲಾತ್ಯ 6:14). ಈ ರೀತಿಯಾಗಿ ವಿಜಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.
ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವನಾಗಿ ಬದುಕುವುದು ಎಂದರೆ: ಪಾಪ ಮತ್ತು ಪ್ರಲೋಭನೆಗಳು ನಿಮ್ಮ ಮೇಲೆ ಆಳಲು ಸಾಧ್ಯವಿಲ್ಲ ಎಂಬ ಭರವಸೆಯೊಂದಿಗೆ ದೃಢವಾಗಿ ನಿಲ್ಲುವುದು.
ಸತ್ಯವೇದವು ಹೀಗೆ ಬೋಧಿಸುತ್ತದೆ: “ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರರಾಗುವದಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು… ನಾವೂ ಕೂಡ ಜೀವದಿಂದೆದ್ದು ಹೊಸಬರಾಗಿ ನಡಕೊಳ್ಳಬೇಕು.” (ರೋಮಾ 6:3–5)
ನಾವು ಆತನ ಮರಣದ ಸಾರೂಪ್ಯದಲ್ಲಿ ಆತನೊಂದಿಗೆ ಒಂದಾಗಿದ್ದರೆ, ಆತನ ಪುನರುತ್ಥಾನದ ಸಾರೂಪ್ಯದಲ್ಲಿ ಖಂಡಿತವಾಗಿಯೂ ಒಂದಾಗಿರುತ್ತೇವೆ.
ಪ್ರಿಯ ದೇವರ ಮಗುವೇ, ನೀವು ಕ್ರಿಸ್ತನ ಮರಣ ಮತ್ತು ಪುನರುತ್ಥಾನದಲ್ಲಿ ನಂಬಿಕೆ ಇಟ್ಟು ದೀಕ್ಷಾಸ್ನಾನ ಪಡೆದಿದ್ದರೆ, ನಿರಂತರವಾಗಿ ಈ ಸತ್ಯವನ್ನು ಒಪ್ಪಿಕೊಳ್ಳಿರಿ ಮತ್ತು ಜಯಶಾಲಿಯಾದ ಜೀವನವನ್ನು ನಡೆಸಿರಿ.
“ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನಷ್ಟೆ” (ರೋಮಾ 6:7). ನಾವು ಪಾಪದ ಪಾಪದ ಪಾಲಿಗೆ ಸತ್ತು ಕ್ರಿಸ್ತನಲ್ಲಿ ಜೀವಿಸಿದಾಗ ಜಯವು ನಮಗೆ ಸಿಗುತ್ತದೆ.”
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಹೇಗಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ತಾನಕ್ಕೆ ಸದೃಶವಾದ ಪುನರುತ್ತಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು” (ರೋಮಾ 6:5)
