No products in the cart.
ಏಪ್ರಿಲ್ 01 – ಬೈಲಿನ ನೆಲಸಂಪಿಗೆ!
“ನಾನು ಬೈಲಿನ ನೆಲಸಂಪಿಗೆ, ತಗ್ಗಿನ ತಾವರೆ.” (ಪರಮ ಗೀತೆ ೨:೧)
ಈ ದಿನ ತಂದೆಯಾದ ದೇವರು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನೆಲಸಂಪಿಗೆಯನ್ನು ನೀಡಲು ಬಯಸುತ್ತಿದ್ದಾನೆ. ಅದು ಸುಂದರವಾಗಿದ್ದು ಪರಿಮಳ ಬೀರುವ ಪುಷ್ಪವಾಗಿದೆ, ಹಾಗೂ ಹೋಲಿಕೆಮಾಡಲಾಗದ ಬೆಲೆಬಾಳುವ ಪುಷ್ಪವಾಗಿದೆ. ರಕ್ತ ಅಂಟಿದ ಪುಷ್ಪವಾಗಿದೆ. ಆ ಪುಷ್ಪವು ನಮ್ಮ ಯೇಸು ಕ್ರಿಸ್ತನಾಗಿದ್ದಾನೆ. ಸತ್ಯವೇದವು ಹೇಳುತ್ತದೆ, ” ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು, ಆತನನ್ನು ನಂಬುವ ಒಬ್ಬನಾದರೂ ನಾಶವಾಗದೇ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು,” (ಯೋಹಾ ೩:೧೬)
ನಿಮ್ಮ ಸುತ್ತಲೂ ಇರುವ ಅಡವಿಯ ಹೂವುಗಳನ್ನು ನೋಡಿರಿ. ಆದರೆ ಸೂಕ್ಷ್ಮವಾಗಿ ಮತ್ತು ಗೌರವದಿಂದ ನೆಲಸಂಪಿಗೆಯನ್ನು ನೋಡಿರಿ.
ಯೇಸು ಕ್ರಿಸ್ತನನ್ನು ಉದಯದ ನಕ್ಷತ್ರವೆಂದು ಕರೆಯುತ್ತಾರೆ. ಆತನು ಆತ್ಮಗಳ ಪ್ರಿಯಕರನಾಗಿದ್ದಾನೆ. ಆತನನ್ನು ಹೂವುಗಳ ಸುಗಂಧರಾಜ ಎಂದು ಬಣ್ಣಿಸುವರು.
ಆತನನ್ನು ಸುವಾಸನೆ ಬೀರುವ ಪರಿಮಳಕ್ಕೆ, ಸುಂದರವಾದ ಸೇಬಿನ ಗಿಡಕ್ಕೆ ಹೋಲಿಸಲಾಗಿದೆ. ಆದರೆ ಈ ಒಂದು ಸ್ಥಳದಲ್ಲಿ ಮಾತ್ರ ಆತನಿಗೆ ನೆಲಸಂಪಿಗೆ ಎಂದು ಕರೆಯಲಾಗಿದೆ. ಯೇಸುವನ್ನು ಸೂಕ್ಷ್ಮವಾಗಿ ದೃಷ್ಟಿಸಿರಿ, ನಾವು ಯೇಸುವನ್ನು ಹೇಗೆ ವರ್ಣಿಸಬಹುದು?
ದೇವರ ವಾಕ್ಯ ಹೇಳುತ್ತದೆ, ” ಅವನ ನುಡಿ ಬಹು ಇಂಪು; ಹೌದು, ಅವನು ಸರ್ವಾಂಗದಲ್ಲಿಯೂ ಮನೋಹರನು; ಯೆರೂಸಲೇಮಿನ ಸ್ತ್ರೀರುಗಳಿರಾ, ಇವನೇ ನನ್ನ ಪ್ರಿಯನು,” (ಪರಮಗೀತೆ ೬:೧೬)
ಒಮ್ಮೆ ಒಬ್ಬ ವಿದ್ಯಾರ್ಥಿಯು ಶಾಲೆಯಲ್ಲಿ ಶಿಕ್ಷಕರ ಮೇಜಿನ ಮೇಲೆ ಇರುವ ಹೂ ಕುಂಡದಲ್ಲಿ ಇಡುವುದಕ್ಕೋಸ್ಕರ ಪ್ರತೀ ದಿನ ತನ್ನ ಹೂದೋಟದಿಂದ ಅನೇಕ ಗುಲಾಬಿಗಳನ್ನು ತರುತ್ತಿದ್ದನು. ಶಿಕ್ಷಕನು ಬೇರೆ ಶಾಲೆಗೆ ಹೋದಾಗಲೂ ಆ ಹುಡುಗನು ಹೂವುಗಳನ್ನು ಅವರಿಗೆ ನೀಡುವದನ್ನು ನಿಲ್ಲಿಸಲಿಲ್ಲ. ಆ ಹೂವುಗಳನ್ನು ನೋಡುವಾಗಲೆಲ್ಲಾ ಶಿಕ್ಷಕನ ಹೃದಯವು ಸಂತೋಷದಿಂದ ತುಂಬಲ್ಪಡುತ್ತಿತ್ತು. ಆದರೆ ಒಂದು ದಿನ ಆ ಹುಡುಗನು ಅಪಘಾತಕ್ಕೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡನು. ಆ ಶಿಕ್ಷಕರು ದುಃಖದಿಂದ “ಅಯ್ಯೋ, ಶಾರೋನಿನ ಪುಷ್ಪವಾಗಿರುವ ಯೇಸುವನ್ನು ಆ ಹುಡುಗನಿಗೆ ಕೊಡದೇ ಸೋತುಹೋದೆನು” ಎಂದು ವೇದನೆ ಪಟ್ಟನು.
ಯೇಸು ಕ್ರಿಸ್ತನು ಬರೀ ಒಂದು ಗುಲಾಬಿಯಲ್ಲಾ. ಆತನು ಶಾರೋನಿನ ಪುಷ್ಪವಾಗಿದ್ದಾನೆ. ಶಾರೋನ್‌ಎಂಬ ಪದದ ಅರ್ಥ ತೆರೆದ ಮೈದಾನವಾಗಿದೆ. ಈ ಮೈದಾನದಲ್ಲಿ ಬೆಳೆಯುವ ಪುಷ್ಪವು ಎಲ್ಲರಿಗೂ ಕಾಣಿಸುತ್ತದೆ. ಜನರು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ, ದಿಕ್ಕುಗಳಿಂದ ಶ್ರೀಮಂತರು ಮತ್ತು ಬಡವರು ಕ್ರಿಸ್ತನ ಬಳಿಗೆ ಬಂದು ಆತನ ಪರಿಮಳದ ಸುವಾಸನೆಯನ್ನು ಹೀರುತ್ತಾ, ಪುಷ್ಪಗಳ ಸುಂದರವಾದ ಎಸಲುಗಳನ್ನು ಬಿಡಿಸುತ್ತಾ ಸಂತೋಷಿಸುವರು.
ಯೇಸು ಕ್ರಿಸ್ತನು ಎಲ್ಲರಿಗೂ ಬೇಕಾದವನಾಗಿದ್ದಾನೆ, ಆತನು ಪಟ್ಟಣದ ಹೊರಗೆ ಗುಡ್ಡದಲ್ಲಿ ಮರಣವನ್ನು ಹೊಂದಿದನು. ಆತನು ಇಡೀ ಪ್ರಪಂಚಕ್ಕಾಗಿ ಸುರಿಸಿದನು. ಆತನು ಈ ದಿನದಲ್ಲಿಯೂ ಶಾರೋನಿನ ಪುಷ್ಪವಾಗಿ ತನ್ನ ಪರಿಮಳವನ್ನು ಎಲ್ಲೆಡೆಗೆ ಪಸರಿಸುತ್ತಿದ್ದಾರೆ.
ಪ್ರಿಯ ದೇವರ ಮಕ್ಕಳೇ, ಯೇಸು ಕ್ರಿಸ್ತನು ತೆರೆದ ಮೈದಾನದಲ್ಲಿ ಶಾರೋನಿನ ಪುಷ್ಪವಾಗಿ ನಿಂತುಕೊಂಡು – ಎಲ್ಲಾ ಪಾಪಿಗಳೇ, ದುಃಖಿತರೇ, ನೀವು ನನ್ನ ಬಳಿಗೆ ಬಂದು ವಿಮೋಚನೆಯನ್ನು ಸಮಾಧಾನವನ್ನು ಪಡೆದುಕೊಳ್ಳಿರಿ ಎಂದು ಸಾರ್ವಜನಿಕವಾಗಿ ಹೇಳಿದನು. ಈ ಕಾರಣಕ್ಕಾಗಿ ಆತನು ನಮ್ಮನ್ನು ಅಧಿವಾಗಿ ಪ್ರೀತಿಸುತ್ತಾನೆ,
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಎಲೈ ಕಷ್ಟ ಪಡುವವರೇ, ಹೊರೆ ಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿ ಕೊಡುವೆನು” (ಮತ್ತಾ ೧೧:೨೮)
