Appam, Appam - Kannada

ಫೆಬ್ರವರಿ 05 – ಸಮಾಲೋಚನೆ!

“ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.” (ಕೀರ್ತ ೭೩:೨೩-೨೪)

ವೈಯಕ್ತಿಕ ಪ್ರಾರ್ಥನೆಯು ನಮಗೆ ಏಕೆ ಅವಶ್ಯವಾಗಿದೆ? ವೈಯಕ್ತಿಕ ಪ್ರಾರ್ಥನೆಯ ಸಮಯದಲ್ಲಿ ನಾವು ಆಪ್ತಸಮಾಲೋಚನೆಯನ್ನು ಹೊಂದಿಕೊಳ್ಳುತ್ತೇವೆ. ಆತನು ನಮ್ಮ ಮೇಲೆ ಕೃಪಾ ಕಟಾಕ್ಷವನ್ನು ನೀಡಿ ಪ್ರೀತಿಯಿಂದ ಮಾರ್ಗದರ್ಶನವನ್ನು ನೀಡುವನು.

ಸತ್ಯವೇದವು ದೇವರಿಗೆ ಆಲೋಚನೆಕರ್ತನು ಎಂಬ ಹೆಸರು ಇರುವುದನ್ನು ನಮಗೆ ಪ್ರಕಟಿಸುತ್ತದೆ. (ಯೆಶಾ ೯:೬), ಆತನು ಅದ್ಭುತವಾದ ಆಲೋಚನೆಕರ್ತನಾಗಿದ್ದಾನೆ. ದೇವರ ಆಲೋಚನೆಯು ನಿರಂತರವಾಗಿ ಇರುತ್ತದೆ. (ಕೀರ್ತ ೩೩:೧೧).

ಪ್ರಿಯ ದೇವರ ಮಕ್ಕಳೇ, ದೇವರ ಆಲೋಚನೆಯನ್ನು ಪಡೆದುಕೊಳ್ಳಲು ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನೀವು ಪ್ರಾರ್ಥನೆಯನ್ನು ಮಾಡಿ ಮುಗಿಸಿದ ನಂತರ ದೇವರ ಸ್ವರವನ್ನು ಕೇಳುವದಕ್ಕೆ ಸಿದ್ಧವಾಗಿ ಕಾಯ್ದುಕೊಂಡಿರಿ. ಆತನು ನಿಮಗೆ ಆಲೋಚನೆ ನೀಡುತ್ತಾನೆ ಎಂದು ವಾಗ್ದಾನ ಮಾಡಲಿಲ್ಲವೇ? ದೇವರ ವಾಕ್ಯ ಹೇಳುತ್ತದೆ, “ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದು ಹೋಗುವದು; ” (ಜ್ಞಾನೋ ೧೧:೧೪).

ಪ್ರತಿ ದಿನ ನಾವು ಅನೇಕ ತೀರ್ಮಾನಗಳನ್ನು ಮಾಡಬೇಕಾಗಿದೆ. ಅನೇಕ ಬಾರಿ ನಾವು ಎಲ್ಲಿಗೆ ಹೋಗಬೇಕು, ಯಾವ ಮಾರ್ಗದಲ್ಲಿ ಸಾಗಬೇಕು, ಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಅಥವಾ ಯಾರನ್ನು ಬೇಟಿಮಾಡಬೇಕು ಎಂಬುದನ್ನು ತಿಳಿಯದವರಾಗಿದ್ದಾರೆ.

ಒಂದು ತಪ್ಪಾದ ಹೆಜ್ಜೆಯು ದುಃಖಕರವಾದ ನೋವಿಗೆ ನಡೆಸುತ್ತದೆ.

ಆ ಕಾರಣದಿಂದಲೇ ಆಪ್ತಸಮಾಲೋಚನೆ ನೀಡುವ ಆತ್ಮವನ್ನು ದೇವರು ನಮಗೆ ದಯಪಾಲಿಸಿದ್ದಾರೆ. ಸತ್ಯವೇದವು ಹೇಳುತ್ತದೆ “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ.” (ಯೆಶಾ ೧೧:೨)

ಅದು ಮಾತ್ರವೇ ಅಲ್ಲ ಪವಿತ್ರಾತ್ಮನು ಎಲ್ಲವನ್ನು ತಿಳಿದವರಾಗಿದ್ದಾರೆ. ದೇವರ ಆಳವಾದ ವಿಷಯಗಳನನ್ನ ತಿಳಿದಿದ್ದಾನೆ. ಸತ್ಯವೇದವು ಹೀಗೆ ಹೇಳುತ್ತದೆ. ” ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ. ” (೧ ಕೊರಿ ೨:೧೦)

ದೇವರು ಆತ್ಮನ ಮೂಲಕ ತನ್ನ ಆಪ್ತಸಮಾಲೋಚನೆಯನ್ನು ನಮಗೆ ನೀಡುತ್ತಾನೆ.

ಮೋಶೆಯು ೨೦ ಲಕ್ಷ ಜನರನ್ನು ಐಗುಪ್ತದಿಂದ ಹೊರಗೆ ಕರೆತಂದು ವಾಗ್ದಾನದ ಕಾನಾನ್‌ದೇಶಕ್ಕೆ ಮರುಭೂಮಿಯ ಮೂಲಕ ನಡೆಸಿದನು. ಪ್ರತೀ ದಿನ ಯಾವ ಸ್ಥಳದಲ್ಲಿ ಗುಡಾರವನ್ನು ಹಾಕಬೇಕು, ಯಾವಾಗ ಪ್ರಯಾಣವನ್ನು ಪುನಃ ಮುಂದುವರೆಯಬೇಕು, ಹೇಗೆ ನಡೆದುಕೊಳ್ಳಬೇಕು, ಜನರ ಅವಶ್ಯಕತೆಗಳನ್ನು ಹೇಗೆ ಸಂಧಿಸಬೇಕು ಏನೇನು ಮಾಡಬೇಕು ಎಂಬುದನ್ನು ದೇವರು ಮೋಶೆಗೆ ಸ್ಪಷ್ಟವಾದ ಆಲೋಚನೆ ನೀಡಿದರು. ದೇವರು ಇಸ್ರಾಯೇಲ್ಯರಿಗೆ ಹಗಲಲ್ಲಿ ಮೇಘಸ್ಥಂಭವಾಗಿ ಇರುಳಲ್ಲಿ ಅಗ್ನಿಸ್ಥಂಭವಾಗಿ ಮಾರ್ಗದರ್ಶಿಸಿದರು. (ಧರ್ಮೋ ೧:೩೨-೩೩) ಆತನು ದೊಢ್ಡ ಮಹತ್ಕಾರ್ಯಗಳನ್ನು ಸಾಕ್ಷಿಕರೀಸುವದಕ್ಕೆ ದೇವರು ಸಹಾಯಮಾಡಿದನು.

ಪ್ರಿಯ ದೇವರ ಮಕ್ಕಳೇ. ನಿಮ್ಮ ವೈಯಕ್ತಿಕ ಪ್ರಾರ್ಥನೆಯಲ್ಲಿ ದೇವರ ಸ್ವರವನ್ನು ಆಲಿಸಿರಿ. ಆತನು ನಿಜವಾಗಿಯೂ ನಿಮಗೆ ಮಾರ್ಗದರ್ಶನವನ್ನು ನೀಡಿ ಸರಿಯಾದ ಮಾರ್ಗದರ್ಶನವನ್ನು ನೀಡುವನು.

ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವನು ನನಗೆ ಆಲೋಚನೆಯನ್ನು ಹೇಳಿ ಕೊಡುತ್ತಾನೆ, ಆತನನ್ನು ಕೊಂಡಾಡುವೆನು, ರಾತ್ರಿ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.” (ಕೀರ್ತ ೧೬:೭)

Leave A Comment

Your Comment
All comments are held for moderation.