No products in the cart.
ಫೆಬ್ರವರಿ 09 – ನನ್ನನ್ನು ಸ್ಥಿರಪಡಿಸು!
“ನಿನ್ನ ಮಾರ್ಗದಲ್ಲಿ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ; ನನ್ನ ಕಾಲು ಜಾರಲಿಲ್ಲ. ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ, ಕಿವಿಗೊಟ್ಟು ಕೇಳು.” (ಕೀರ್ತ ೧೭:೫-೬)
ನಾವು ದೇವರ ಪ್ರಸನ್ನತೆಗೆ ಬಂದು ಕುಳಿತುಕೊಳ್ಳುವಾಗ, ಪ್ರಾರ್ಥನೆಯು ನಮ್ಮ ಜೀವನದಲ್ಲಿ ಮಹಿಮೆಯುಳ್ಳ ಕಾರ್ಯಗಳನ್ನು ನೆರವೇರಿಸುತ್ತದೆ. ದೇವರು ನಮ್ಮನ್ನು ಸ್ಥಿರಪಡಿಸುತ್ತಾನೆ, ಬಲಪಡಿಸುತ್ತಾನೆ ಮತ್ತು ನಮ್ಮ ನೀತಿಯ ಕುರಿತು ದೃಢಪಡಿಸುತ್ತಾನೆ. ದೇವರು ನಮಗೆ ಧೈರ್ಯವನ್ನು ಮತ್ತು ಬಲವನ್ನು ನೀಡಿ ಪರಿಶುದ್ಧತೆಯಿಂದ ಪರಿಶುದ್ಧತೆಗೆ ಬೆಳೆಯಲು ಸಹಾಯ ಮಾಡುತ್ತಾನೆ.
ನಾವು ಯೇಸುಕ್ರಿಸ್ತನಲ್ಲಿ ನಂಬಿಕೆಯ ಮೂಲಕ ರಕ್ಷಣೆಯನ್ನು ಹೊಂದಿದ್ದೇವೆ. ಯೇಸುವಿನ ರಕ್ತದಿಂದ ನಮ್ಮ ಪಾಪಗಳು ಶುದ್ಧೀಕರಿಸಲ್ಪಟ್ಟಿದೆ. ಆದರೂ ರಕ್ಷಣೆಯ ನಂತರ ನಾವು ನಿರಂತರವಾಗಿ ಶುದ್ಧೀಕರಣದ ಮೂಲಕ ನಮ್ಮ ಜೀವನವನ್ನು ಸ್ಥಿರಪಡಿಸಿಕೊಳ್ಳಬೇಕು. ನಾವು ಅಧಿಕವಾಗಿ ದೇವರ ಮುಂದೆ ತಗ್ಗಿಸಿಕೊಂಡವರಾಗಿ, ಪ್ರಾರ್ಥನೆಯಲ್ಲಿ ನಮ್ಮನ್ನು ಆತನಿಗೆ ಸಮರ್ಪಿಸಿಕೊಂಡು, ಆತನ ಆಳ್ವಿಕೆಗೆ ಒಪ್ಪಿಸಿಕೊಡುವಾಗ, ನಮ್ಮ ಆತ್ಮೀಕ ಜೀವನವು ತುಂಬಾ ಸ್ಥಿರವಾಗಿರುವುದು.
ದೇವರ ವಾಕ್ಯ ಹೇಳುತ್ತದೆ: ” ನನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದವನೂ ಆಗಿರುವಾತನಿಗೆ ಯುಗಯುಗಾಂತರಗಳಲ್ಲಿಯೂ ಘನ ಮಹತ್ವಗಳಿರಲಿ. ಆಮೇನ್” (ಪ್ರಕ ೧:೬)
ನಾವು ಮಾಡುವ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸಿ ಅವುಗಳನ್ನು ಪ್ರಮಾಣಿಕವಾಗಿ ಸರಿಪಡಿಸಿಕೊಳ್ಳದೇ ಹೋದರೆ, ಅವು ನಮ್ಮನ್ನು ತಕ್ಷಣವೇ ದೊಡ್ಡ ಬೀಳುವಿಕೆಗೆ ನಡೆಸುತ್ತದೆ. ನಮ್ಮ ಶಾರೀರಿಕ ಕೃತ್ಯಗಳು ದಿನಾಲೂ ಶುದ್ಧಿಕರಿಸಲ್ಪಡಬೇಕು. ನಮ್ಮ ಅರ್ಥಹೀನವಾದ ಪ್ರತಿಯೊಂದು ಮಾತುಗಳನ್ನು ಶುದ್ಧೀಕರಿಸಿಕೊಳ್ಳಬೇಕು. ನಮ್ಮ ಕಾಮದ ದೃಷ್ಟಿಯನ್ನು ಶುದ್ಧೀಕರಿಸಿಕೊಳ್ಳಬೇಕು.
ನಾವು ಅಶುದ್ಧವಾದ ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಮನುಷ್ಯನ ಉದ್ಧೇಶಗಳು, ಕ್ರಿಯೆಗಳು ಮತ್ತು ಆಲೋಚನೆಗಳು ಅಶುದ್ಧತ್ವದಿಂದ ತುಂಬಿವೆ. ನಾವು ಇಂತಹ ಪ್ರಪಂಚದಲ್ಲಿ ನಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕಾದರೆ, ದೇವರ ಪ್ರಸನ್ನತೆಯಲ್ಲಿ ನಮ್ಮನ್ನೇ ಸಮರ್ಪಿಸಿಕೊಂಡು ಶುದ್ಧತೆಯನ್ನು ಹೊಂದಿಕೊಳ್ಳಬೇಕಲ್ಲವೇ? ನಾವು ದೇವರ ಮೇಲೆ ಅವಲಂಭಿತರಾಗಿ ಪರಿಶುದ್ಧಾತ್ಮನ ಸಹಾಯವನ್ನು ಹುಡುಕುವವರಾಗಿರಬೇಕು.
ಆದಕಾರಣ, ಪ್ರಾರ್ಥಿಸಿರಿ. ನಾವು ಜನರಿಂದ ನಮ್ಮ ತಪ್ಪುಗಳನ್ನು ಅಪರಾಧಗಳನ್ನು ಮರೆಮಾಡಿಕೊಳ್ಳಬಹುದು. ಆದರೆ ದೇವರಿಂದ ಮರೆಮಾಡಿಕೊಳ್ಳುವದು ಹೇಗೆ? ಪವಿತ್ರಾತ್ಮನ ಕಣ್ಣಿಗೆ ಮರೆಯಾಗಿ ನಾವು ಜೀವಿಸುವುದು ಹೇಗೆ? ದಾವೀದನು ಹೀಗೆ ಬರೆಯುತ್ತಾನೆ ” ತನ್ನ ತಪ್ಪುಗಳನ್ನು ತಿಳಿದುಕೊಳ್ಳುವವನು ಯಾವನು? ಮರೆಯಾದವುಗಳಿಂದ ನನ್ನನ್ನು ನಿರ್ಮಲಮಾಡು.” (ಕೀರ್ತ ೧೯:೧೨)
ಪ್ರಿಯ ದೇವರ ಮಕ್ಕಳೇ, ನೀವು ಶುದ್ಧೀಕರಿಸಿಕೊಂಡವರಾಗಿ ಅಪ್ಪಟ ಚಿನ್ನದ ಹಾಗೆ ಪ್ರಕಾಶಿಸಬೇಕು. ನೀವು ಮತ್ತೆ ಮತ್ತೆ ಪಾಪದಲ್ಲಿ ಬೀಳದೇ ಎಚ್ಚರವಾಗಿ ದೇವರನ್ನು ಸ್ಥಿರವಾಗಿ ಹಿಂಬಾಲಿಸಬೇಕು. ನೀವು ಪ್ರಾರ್ಥನೆ ವೀರರಾಗಿದ್ದರೆ, ನಿಮ್ಮ ವೈಯಕ್ತಿಕ ಪ್ರಾರ್ಥನೆಯು ನಿಮ್ಮನ್ನು ನಡೆಸುವುದು ಮಾತ್ರವಲ್ಲದೇ ನೀವು ಸ್ಥಿರವಾಗಿ ನಿಲ್ಲುವದಕ್ಕೆ ಸಹಾಯಮಾಡುತ್ತದೆ.
ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವನೇ ನನ್ನ ಶರಣನು! ಪರಾತ್ಪರನನ್ನು ನಿವಾಸಸ್ಥಾನ ಮಾಡಿಕೊಂಡಿದ್ದೀಯಲ್ಲಾ. ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು. ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು.” (ಕೀರ್ತ ೯೧:೯-೧೧)
