No products in the cart.
ಫೆಬ್ರವರಿ 21 – ಹುಡುಕಿರಿ!
“ರಾತ್ರಿ ರಾತ್ರಿಯಲ್ಲಿಯೂ ಹಾಸಿಗೆಯ ಮೇಲೆ ನನ್ನ ಪ್ರಾಣ ಪ್ರಿಯನನ್ನು ಹುಡುಕಿದೆನು. ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ನಾನು ಎದ್ದು ಊರನ್ನು ತಿರುಗುವೆನು, ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು ಎಂದುಕೊಂಡೆನು; ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.” (ಪರಮ ಗೀತೆ ೩:೧-೨)
ನಾವು ಕಾತುರದಿಂದ ಹಾಗೂ ದಾಹದಿಂದ ದೇವರ ಪ್ರಸನ್ನತೆಯನ್ನು ಹುಡುಕುವಾಗ, ನಾವು ನಿಜವಾಗಿಯೂ ಅವರನ್ನು ಕಂಡುಕೊಳ್ಳುತ್ತೇವೆ. ನಾವು ಹೃದಯಪೂರ್ವಕವಾಗಿ ಹುಡುಕುವಾಗ, ಆತನು ನಿಶ್ಚಯವಾಗಿ ತನ್ನನ್ನು ನಮಗೆ ಪ್ರಕಟಿಸಿಕೊಳ್ಳುವನು. ” ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.” ಎಂಬುದಾಗಿ ದೇವರ ವಾಕ್ಯ ತಿಳಿಸುತ್ತದೆ ಅಲ್ಲವೇ? (ಮತ್ತಾ ೫:೮.)
ಒಮ್ಮೆ ಮಹಾತ್ಮ ಗಾಂಧಿಯವರು ಒಬ್ಬ ಮಿಷನರಿಗೆ ಹೀಗೆ ಹೇಳಿದರು “ದೇವರನ್ನು ಹುಡುಕುವ ವಿಷಯದಲ್ಲಿ ನಮಗೆ ತಾಳ್ಮೆಯು ಅತ್ಯವಶ್ಯವಾಗಿದೆ. ನಮಗೆ ಎಷ್ಟರಮಟ್ಟಿಗೆ ತಾಳ್ಮೆ ಇರಬೇಕೆಂದರೆ ಸಮುದ್ರದ ತೀರದಲ್ಲಿ ಕುಳಿತು ಒಂದು ಸ್ಟ್ರಾ ಮೂಲಕ ಒಂದೊಂದು ಹನಿಯನ್ನು ತೆಗಯುತ್ತಾ ಇಡೀ ಸಮುದ್ರದ ನೀರನ್ನು ಖಾಲಿಮಾಡಬೇಕು, ಅಲ್ಲಿಯ ತನಕ ನಮಗೆ ತಾಳ್ಮೆ ಬೇಕು”. ಅಂದನು. ಇದನ್ನು ಮಿಷನರಿಯು ಒಪ್ಪಿಕೊಳ್ಳಲಿಲ್ಲ. ಆತನು ಪ್ರೀತಿಯಿಂದ ಗಾಂಧಿಜೀಯವರಿಗೆ ಹೀಗೆ ಪ್ರತಿಕ್ರಿಯಿಸಿದರು, ” ಒಬ್ಬ ವ್ಯಕ್ತಿಯು ಕಾತುರದಿಂದ ಹಾಗೂ ದಾಹದಿಂದ ದೇವರ ಪ್ರಸನ್ನತೆಯನ್ನು ಹುಡುಕುವಾಗ ದೇವರು ಕರುಣೆಯುಳ್ಳವನಾಗಿ ಆ ವ್ಯಕ್ತಿಯನ್ನು ಹುಡುಕಿಕೊಂಡು ಬರುವನು.”
ಒಬ್ಬ ಸ್ತ್ರೀಯು ತಾನು ಕಳೆದುಕೊಂಡಿರುವ ಬೆಳ್ಳಿಯ ನಾಣ್ಯವನ್ನು ಮತ್ತೆ ಪಡೆಯುವ ತನಕ ಸತತವಾಗಿ ಹುಡುಕಿದ ಹಾಗೆ, ದೇವರು ತನ್ನ ಅಪಾರವಾದ ಕೃಪೆಯಿಂದ ನಮ್ಮನ್ನು ಹುಡುಕುತ್ತಿದ್ದಾನೆ. ಬೆಳ್ಳಿಯ ನಾಣ್ಯದ ಮೇಲೆ ಅರಸನ ಚಿತ್ರ ಕೆತ್ತನೆಯಾಗಿರುವ ಪ್ರಕಾರ ಕರ್ತರ ಕರ್ತನು ಅರಸರ ಅರಸನಾದ ಯೇಸುಕ್ರಿಸ್ತನು ತನ್ನ ಸಾರೂಪ್ಯದಲ್ಲಿ ತನ್ನ ಹೋಲಿಕೆಗೆ ಸರಿಯಾಗಿ ನಮ್ಮನ್ನು ಸೃಷ್ಟಿಮಾಡಿದ್ದಾನೆ. ನಾವು ಆತನಿಗೆ ಸಂಬಂಧಪಟ್ಟವರಾದ್ದರಿಂದ ಅವರು ನಮ್ಮನ್ನು ಹುಡುಕುತ್ತಾನೆ. ನಾವು ಸಹ ಆತನನ್ನು ಪುನಃ ಹುಡುಕಬಾರದೋ?
ಮೊದಲಗಿತ್ತಿಯಾದ ಸ್ತ್ರೀಯು ಹೀಗೆ ಹೇಳುತ್ತಾಳೆ, “ರಾತ್ರಿ ರಾತ್ರಿಯಲ್ಲಿಯೂ ಹಾಸಿಗೆಯ ಮೇಲೆ ನನ್ನ ಪ್ರಾಣ ಪ್ರಿಯನನ್ನು ಹುಡುಕಿದೆನು. ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ನಾನು ಎದ್ದು ಊರನ್ನು ತಿರುಗುವೆನು, ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು ಎಂದುಕೊಂಡೆನು; ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.” ನಾಲ್ಕನೆಯ ವಚನವನ್ನು ಓದುವಾಗ ಸಹನೆಯಿಂದ ಕಣ್ಣೀರಿನಿಂದ ಹುಡುಕುವಾಗ ಕೊನೆಯಲ್ಲಿ ಕಂಡುಕೊಂಡಳು. ಆತನನ್ನು ಬಿಡದೇ ಹಿಡಿದುಕೊಂಡಳು. (ಪರಮ ಗೀತೆ ೩:೧-೪)
ನಾವು ಕರ್ತನನ್ನು ಹುಡುಕುವಾಗ ಆತನು ನಿಶ್ಚಯವಾಗಿ ನಮಗೆ ತನ್ನನ್ನು ಪ್ರಕಟಿಸಿಕೊಳ್ಳುವನು. ದೇವರ ವಾಕ್ಯ ಘೋಷಿಸುತ್ತದೆ, ” ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟು ಬಿಡುವನು,” (೨ ಪೂ. ಕಾ ೧೫:೨).
ಅನೇಕರು ತುಂಬಾ ಭಯಾನಕ ಸಾಕ್ಷಿಗಳನ್ನು ಹೇಳುವದನ್ನು ಕೇಳಿದ್ದೇನೆ. “ನಾನು ಭೀಕರವಾದ ಅಪಘಾತಕ್ಕಿಡಾದಾಗ, ನಾನು ದೇವರ ಪ್ರಸನ್ನತೆಯನ್ನು ಅನುಭವಿಸಿದೆನು. ದೇವರೇ ನನ್ನನ್ನು ಕಾಪಾಡಿದನು.” ಕೆಲವು ಸಹೋದರಿಗಳು ಹೇಳಿದ್ದೇನಂದರೆ, “ಹೆರಿಗೆಯ ತೀವ್ರವಾದ ನೋವಿನ ಸಂದರ್ಭದಲ್ಲಿ ಭಯದಲ್ಲಿ ಇರುವಾಗ ದೇವರ ಪ್ರಸನ್ನತೆಯು ನಮ್ಮ ಸಂಗಡ ಇದ್ದು ನಮಗೆ ಸಮಾಧಾನವನ್ನು ನೀಡಿತು.”
ಪ್ರಿಯ ದೇವರ ಮಕ್ಕಳೇ, ನಮ್ಮ ಕಷ್ಟದ ಸಮಯದಲ್ಲಿ ಮಾತ್ರ ದೇವರ ಪ್ರಸನ್ನತೆಯನ್ನು ಅನುಭವಿಸಿದರೆ ಸಾಲದು, ನಾವು ಎಲ್ಲಾ ಸಂದರ್ಭಗಳಲ್ಲಿ ನಿರಂತರವಾಗಿ ದಾಹದಿಂದ ಆತನ ಪ್ರಸನ್ನತೆಯನ್ನು ಹುಡುಕೋಣ! ದೇವರ ಪ್ರಸನ್ನತೆಯನ್ನು ರುಚಿ ನೊಡುವವರಾಗಿ ಆತನಲ್ಲಿ ನೆಲೆಗೊಳ್ಳಬೇಕು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ ಪ್ರಭಾವವನ್ನೂ ಕಂಡ ಪ್ರಕಾರ ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ.” (ಕೀರ್ತ ೬೩:೨)
