No products in the cart.
ಮಾರ್ಚ್ 28 – ಪ್ರೀತಿಯು ಮರ್ಯಾದೆಗೆಟ್ಟು ನಡೆಯುವದಿಲ್ಲ!
“ಪ್ರೀತಿಯು ಮರ್ಯಾದೆಗೆಟ್ಟು ನಡೆಯುವದಿಲ್ಲ”, (೧ ಕೊರಿ ೧೩:೫)
ಪ್ರೀತಿಯು ಎಂದಿಗೂ ಅಯೋಗ್ಯವಾಗಿ ಹಾಗೂ ಅವಮಾನಕರವಾಗಿ ನಡೆದುಕೊಂಡು ತಮ್ಮನ್ನು ಪ್ರೀತಿಸುವವರ ಮನಸ್ಸನ್ನು ನೋಯಿಸುವದಿಲ್ಲ. ನಿಜವಾದ ಪ್ರೀತಿಯು ಯಾವಾಗಲೂ ಮೆಚ್ಚಿಸುತ್ತದೆ, ಗಾಯಪಡಿಸುವುದಿಲ್ಲ. ಇದರ ಮೂಲಕ ನಾವು ಪ್ರಮಾಣಿಕವಾದ ಪ್ರೀತಿ ಯಾವುದು ಮತ್ತು ವಂಚನೆಯ ಪ್ರೀತಿ ಯಾವುದು ಎಂದು ತಿಳಿದುಕೊಳ್ಳುತ್ತೇವೆ.
ಆದಾಮ ಮತ್ತು ಹವ್ವಳು ಅಳತೆಗೂ ಮೀರಿದ ದೇವರ ಪ್ರೀತಿಯನ್ನು ಹೊಂದಿದ್ದರು. ಅವರು ತಮ್ಮ ಅವಿಧೇಯತೆಯಿಂದ ತಿನ್ನಬಾರದೆಂದು ಅಪ್ಪಣೆ ಕೊಟ್ಟ ಹಣ್ಣನ್ನು ತಿಂದು ಕರ್ತನಿಗೆ ನೋವನ್ನು ಉಂಟುಮಾಡಬಾರದಿತ್ತು. ಅವರಲ್ಲಿದ್ದ ಪ್ರೀತಿಯು ಕಡಿಮೆಯಾಗಿದ್ದರಿಂದ ಪಾಪವು ಪ್ರವೇಶಿಸಿತು. ಆಕಾನನು ದೇವರನ್ನು ಮತ್ತು ತನ್ನ ನಾಯಕನಾದ ಯೆಹೋಶುವನನ್ನು ಪ್ರಮಾಣಿಕವಾಗಿ ಪ್ರೀತಿಸದೇ ಇದ್ದರಿಂದ ಅತಿ ಆಸೆಪಟ್ಟು ಬ್ಯಾಬಿಲೊನಿನವರ ಬೆಲೆಬಾಳುವ ವಸ್ತ್ರಗಳನ್ನು ಕದ್ದುಕೊಂಡನು. ಇಸ್ಕರಿಯುತ ಯೂದನು ಆತನಿಗಾಗಿ ಭೂಲೋಕಕ್ಕೆ ಇಳಿದು ಬಂದಿರುವ ಯೇಸು ಕ್ರಿಸ್ತನನ್ನು ಪ್ರೀತಿಮಾಡಿದ್ದರೆ ಕೇವಲ ೩೯ ಬೆಳ್ಳಿ ನಾಣ್ಯಗಳಿಗೆ ಯೇಸುವನ್ನು ಹಿಡಿದುಕೊಡುತ್ತಿರಲಿಲ್ಲ. ಪ್ರೀತಿಯ ಕೊರತೆಯು ಅವರೆಲ್ಲರ ಸೋಲಿಗೆ ಕಾರಣವಾಗಿತ್ತು. ಈ ದಿನಮಾನಗಳಲ್ಲಿಯೂ ಸಹ ಸಣ್ಣ ಪ್ರೀತಿಯ ಕೊರತೆಯು ವಿಶ್ವಾಸಿಗಳನ್ನು ತಪ್ಪಾದ ಕಾರ್ಯಗಳನ್ನು ಮಾಡುವುದಕ್ಕೆ, ಲಂಚವನ್ನು ತೆಗೆದುಕೊಳ್ಳುವದಕ್ಕೆ ದಾರಿ ಮಾಡಿಕೊಡುತ್ತದೆ. ದೇವರ ಪ್ರೀತಿಯ ಬೆಳಕಿನಲ್ಲಿ ನಮ್ಮ ಕೃತ್ಯಗಳನ್ನು ಪರೀಕ್ಷಿಸಿಕೊಂಡು ಸರಿಪಡಿಸಿಕೊಳ್ಳಿರಿ.
ಒಬ್ಬ ವ್ಯಕ್ತಿಯು ನಿಜವಾಗಲೂ ತನ್ನ ಹೆಂಡತಿಯನ್ನು ಪ್ರೀತಿಸುವುದಾದರೆ ಇತರ ಸ್ತ್ರೀಯನ್ನು ಕೆಟ್ಟ ದೃಷ್ಟಿಯಿಂದ ನೋಡುವದಿಲ್ಲ. ಒಬ್ಬ ತಂದೆಯು ತನ್ನ ಮಕ್ಕಳನ್ನು ಪ್ರಮಾಣಿಕವಾಗಿ ಪ್ರೀತಿಸಿದರೆ ಅವರ ಶಿಕ್ಷಣ ಮತ್ತು ಭವಿಷ್ಯತ್ತಿಗಾಗಿ ಉಳಿತಾಯ ಮಾಡಿರುವ ಹಣವನ್ನು ದುರುಪಯೋಗಮಾಡುವದಿಲ್ಲ. ಒಬ್ಬ ವ್ಯಕ್ತಿಯು ನಿಜವಾಗಲೂ ಕರ್ತನನ್ನು ಪ್ರೀತಿಸುವದಾದರೆ ದೇವನ ಮನಸ್ಸಿಗೆ ನೋವು ಉಂಟು ಮಾಡುವ ಹಾಗೆ ಪ್ರಾಪಂಚಿಕ ಪಾಪಕೃತ್ಯಗಳನ್ನು ಮಾಡುವದಿಲ್ಲ. ಪ್ರೀತಿಯು ಮರ್ಯಾದೆಗೆಟ್ಟು ನಡೆಯುವುದಿಲ್ಲ.
ಕರ್ತನು ಎಫೆಸ ಸಭೆಯಲ್ಲಿನ ಕಾರ್ಯಗಳನ್ನು ನೋಡಿದನು. ಅವರ ಶ್ರಮೆ ಮತ್ತು ಸಹನೆಯ ಕುರಿತು ಬರೆದಿದ್ದಾರೆ. ಆದರೂ ಅವರಲ್ಲಿರುವ ಒಂದು ಕೊರತೆಯು ದೇವರ ಹೃದಯಕ್ಕೆ ನೋವು ತಂದಿತು. ಆತನು ಹೇಳಿದನು, ” ನೀನು ನಿನ್ನ ಮೊದಲ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದೀ ಎಂದು ನಿನ್ನ ಮೇಲೆ ನಾನು ತಪ್ಪು ಹೊರಿಸಬೇಕಾಗುತ್ತದೆ.” ಅವರ ಪರಿಸ್ಥಿತಿ ಎಷ್ಟು ಶೋಚನಿಯವಾಗಿತ್ತಲ್ಲವೇ!
ಈ ದಿನದಲ್ಲಿ ಅನೇಕರು ಸಿದ್ಧಾಂತಗಳ ವಿಷಯದಲ್ಲಿ ವೈರಾಗ್ಯವುಳ್ಳವರಾಗಿರಬಹುದು. ಅವರು ತಪ್ಪು ಮಾಡಿದವರು ಯಾವ ಕರುಣೆ ಇಲ್ಲದೇ ಶಿಕ್ಷೆಗೆ ಒಳಪಡಬೇಕೆಂದು ಪ್ರತಿಪಾದಿಸುತ್ತಾರೆ. ಅವರ ಮೂಲ ಕಾಳಜಿಯು ಆತ್ಮೀಕ ಅಧಿಕಾರವನ್ನು ಸದ್ವಿನಿಯೋಗ ಮಾಡುವವರ ತಪ್ಪುಗಳನ್ನು ಹುಡುಕುವುದಾಗಿದೆ. ಅಂತಹ ವಿಚಿತ್ರ ಜನರಿಗೆ ದೇವರು ದುಃಖದಿಂದ ಹೇಳುವುದೇನಂದರೆ, “ನೀವು ನಿಮ್ಮ ಮೊದಲ ಪ್ರೀತಿಯನ್ನು ತೊರೆದುಬಿಟ್ಟಿದ್ದೀರಿ”.
ಒಂದು ಕಾಲದಲ್ಲಿ ದೇವರ ಪ್ರಸನ್ನತೆಯೇ ಅವರ ಆನಂದವಾಗಿತ್ತು. ಆದರೆ ಈಗ ಇತರರಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದು ಅವರಿಗೆ ತೃಪ್ತಿಯನ್ನು ನೀಡುತ್ತದೆ. ಅಂದು ದೇವರ ವಾಕ್ಯ ಅವರಿಗೆ ಸಂತೋಷವನ್ನು ನೀಡುತ್ತಿತ್ತು, ಈಗ, ಗದರಿಸುವಿಕೆಯ ಪತ್ರಗಳನ್ನು ಬರೆಯುವದು ಚಾಳಿಯಾಗಿಬಿಟ್ಟಿದೆ.
ಪ್ರಿಯ ದೇವರ ಮಕ್ಕಳೇ, ಆದಿ ಕಾಲದ ಯಜ್ಞದ ಆತ್ಮನು ಎಲ್ಲಿದ್ದಾರೆ? ಕರ್ತನಿಗಾಗಿ ಹಿಂಸೆಯನ್ನು ಅನುಭವಿಸಲು ಎಷ್ಡ ಮಂದಿಗೆ ಇಷ್ಟವಿದೆ? ಕಲ್ವಾರಿಯ ಪ್ರೀತಿಯು ಎಲ್ಲಿದೆ?
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು.” (ಪ್ರಕ ೨:೫)
