No products in the cart.
ಮಾರ್ಚ್ 08 – ಮೇಲಕ್ಕೆ ಎತ್ತುವ ಪ್ರೀತಿ!
” ನನ್ನನ್ನು ನಾಶನದ ಗುಂಡಿಯೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.” (ಕಿರ್ತ ೪೦:೨)
ದೇವರು ನಮ್ಮ ಮೇಲೆ ತೋರಿಸಿದ ಪ್ರೀತಿಯು ನಾವು ಪಾಪದಿಂದ ಹೊರ ಬರುವದಕ್ಕೆ ಸಹಾಯಮಾಡುತ್ತದೆ. ಅದು ನಮ್ಮನ್ನು ಕೆಸರಿನಿಂದ ಮೇಲಕ್ಕೆ ಎತ್ತುತ್ತದೆ. ಆ ಪ್ರೀತಿಯು ನಮ್ಮನ್ನು ಹುಡುಕುತ್ತದೆ.
ಕುರಿಯು ತಪ್ಪಿಸಿಕೊಂಡಾಗ ಕುರುಬನ ಹೃದಯದಲ್ಲಿ ತುಂಬಾ ತೊಂದರೆಯುಂಟಾಗುತ್ತದೆ. ರಾತ್ರಿ ಹಗಲು, ಬಿಸಿಲು ಮಳೆಯೆನ್ನದೇ ತೀರ ಕಾಳಜಿಯಿಂದ ಆತನು ತನ್ನ ಕಳೆದು ಹೋದ ಕುರಿಯನ್ನು ಹುಡುಕುತ್ತಾನೆ. ಒಂದು ವೇಳೆ ಕುರಿಯು ಮುಳ್ಳು ಪೊದೆಗಳ ನಡುವೆ ಸಿಕ್ಕಿಕೊಂಡಿದ್ದರೆ, ಕುರುಬನು ತನ್ನ ಕೈಗಳ ಗಾಯಗಳನ್ನು ಲೆಕ್ಕಿಸದೇ ಮುಳ್ಳುಗಳ ನಡುವೆ ಕೈ ಚಾಚಿ ಕುರಿಯನ್ನು ರಕ್ಷಿಸುತ್ತಾನೆ.
ಇದು ಒಬ್ಬ ಒಳ್ಳೆಯ ಕುರುಬನು ತೋರಿಸುವ ಪ್ರೀತಿಯಾಗಿದೆ.
ಕರ್ತನ ಪ್ರೀತಿಯ ಎಲ್ಲಾ ತೋರ್ಪಡಿಸುವಿಕೆಗಳಲ್ಲಿ ಶ್ರೇಷ್ಟವಾದುದ್ದು ಆತನ ಪ್ರೀತಿಯು ನಮ್ಮ ಆತ್ಮಗಳನ್ನು ಮೇಲೆಕ್ಕೆ ಎತ್ತುವುದಾಗಿದೆ. ದೇವರ ಪ್ರೀತಿಯು ನಮ್ಮನ್ನು ನರಕದ ಸುಳಿಯಿಂದ ಮತ್ತು ಶತ್ರುವಿನ ಶಕ್ತಿಯಿಂದ ನಮ್ಮನ್ನು ತಪ್ಪಿಸುತ್ತದೆ. ಹೌದು ಆತನು ಕತ್ತಲೆಯ ದೊರೆತನದಿಂದ ನಮ್ಮನ್ನು ಬಿಡಿಸುತ್ತಾನೆ.
ಒಮ್ಮೆ ಒಂದು ಕಲ್ಲಿದ್ದಲು ಗಣಿಯಲ್ಲಿ, ಭೂಕಂಪನದಿಂದ ದೊಡ್ಡ ಅಪಘಾತವುಂಟಾಯಿತು. ಅನೇಕ ಕಾರ್ಮಿಕರು ಗಣಿಯ ಒಳಗೆ ಸಿಳುಕಿಕೊಂಡರು. ರಕ್ಷಣಾ ಪಡೆಯವರು ಅವರನ್ನು ರಕ್ಷಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದರು, ಅವರನ್ನು ಮೇಲೆತ್ತಲು ವಿವಿಧ ಹಗ್ಗಗಳನ್ನು ಬಿಟ್ಟರು, ಆದರೆ ಆ ಹಗ್ಗವು ತಟ್ಟನೇ ಮುರಿದು ಹೋಗುತ್ತಿತ್ತು. ಕೊನೆಗೆ ಮೇಲ್ವಿಚಾರಕರು ಹೊಸ ಹಗ್ಗವನ್ನು ತಂದರು. ಅದನ್ನು ಅವರು ಬಿಗಿಯಾಗಿ ಕಟ್ಟಿ ಕೆಳಗೆ ಬಿಟ್ಟಾಗ ಅದು ಯಶಸ್ವಿಯಾಗಿ ಕಾರ್ಯಮಾಡಿ ಅನೇಕ ಕಾರ್ಮಿಕರ ಪ್ರಾಣ ಉಳಿಯಿತು. ನಂತರ ಆ ಹಗ್ಗವು ಕಿತ್ತು ಹೋಗದೇ ಇರುವದಕ್ಕೆ ಕಾರಣವೇನೆಂದು ಹುಡುಕುವಾಗ, ಆ ಹೊಸ ಹಗ್ಗಕ್ಕೆ ಸ್ಟೀಲ್ತಂತಿಯನ್ನು ಅಳವಡಿಸಿದ್ದರು.
ಅದೇ ಪ್ರಕಾರ, ಎಲ್ಲಾ ಮನುಷ್ಯರ ಪ್ರೀತಿಯು ಬಾಡಿಹೊಗಬಹುದು, ಬಲಹೀನವಾಗಬಹುದು, ಅಥವಾ ಬದಲಾಗಬಹುದು ಆದರೆ ಕರ್ತನ ಪ್ರೀತಿಯು ಎಂದಿಗೂ ಬಾಡಿಹೋಗುವುದಿಲ್ಲ, ಬಲಹೀನವಾಗುವುದಿಲ್ಲ, ಹಾಗೂ ಎಂದಿಗೂ ಬದಲಾಗುವುದಿಲ್ಲ. ಅದು ಬಲವುಳ್ಳದ್ದು ಮತ್ತು ಮುರಿಯಲ್ಪಡದೇ ಇರುತ್ತದೆ.
ಕ್ರಿಸ್ತನ ಪ್ರೀತಿಯ ನಿಮಿತ್ತ ಆತನ ಅಮೂಲ್ಯವಾದ ರಕ್ತವು ಧಾರಾಳವಾಗಿ ಹರಿದಿದೆ. ಕಲ್ವಾರಿಯ ಪ್ರೀತಿಯು ಬುಗ್ಗೆಯಾಗಿ ಹೇರಳವಾಗಿ ಹರಿಯುತ್ತದೆ. ಅದು ಆತ್ಮಗಳನ್ನು ದೇವರ ಕಡೆಗೆ ಸೆಳೆಯುತ್ತದೆ. ಆತನು ನಮ್ಮನ್ನು ಕೆಸರಿನಿಂದ ಮೇಲಕ್ಕೆ ಎತ್ತಿದಾಗ, ಆತನು ತನ್ನ ರಕ್ತದಿಂದ ನಮಗಾಗಿ ಕ್ರಯವನ್ನು ಕಟ್ಟಿದ್ದಾರೆ. ಅದನ್ನು ನಾವು ಎಂದಿಗೂ ಮರೆಯಬಾರದು. ಅದು ನಿರಂತರ ಸ್ತುತಿಗೆ ಅರ್ಹನಾಗಿದ್ದಾನೆ.
ನೀವು ಕ್ರಿಸ್ತನ ಅಮೂಲ್ಯವಾದ ರಕ್ತದಿಂದ ಬಿಡುಗಡೆಯನ್ನು ಹೊಂದಿದ್ದೀರಿ ಮತ್ತು ಪರಲೋಕಕ್ಕೆ ಸೇರಿದವರಾಗಿದ್ದೀರಿ. ಕಲ್ವಾರಿಯ ಪ್ರೀತಿಯು ಎಂದಿಗೂ ಮುರಿಯಲ್ಪಡುವದಿಲ್ಲ. ದೇವರ ಪ್ರೀತಿಯಿಂದ ನಮ್ಮನ್ನು ಆತನ ಕಡೆಗೆ ಸೆಳೆದುಕೊಂಡಿದೆ. ಆತನ ಹಸ್ತದಿಂದ ನಿಮ್ಮನ್ನು ಯಾರೂ ಕಸಿದುಕೊಳ್ಳುವದಿಲ್ಲ.
ಪ್ರಿಯ ದೇವರ ಮಕ್ಕಳೇ, ಹಳೆಯ ಪಾಪಗಳು ನಿಮ್ಮ ಮೇಲೆ ದಬ್ಬಾಳಿಕೆ ಮಾಡುವದರ ಕುರಿತು ಅಥವಾ ಸೈತಾನನು ನಿಮ್ಮನ್ನು ನಾಶಮಾಡುತ್ತಿದ್ದಾರೆ ಎಂದು ನೀವು ಭಯಪಡಬೇಡಿರಿ. ನೀವು ಆತನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತವಾಗಿರುವಿ. ಆತನ ರಕ್ತವು ಎಂದಿಗೂ ಸೋಲುವದಿಲ್ಲ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ನೀವು ನಿಮ್ಮ ಸ್ವಂತ ಸ್ವತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ.” (೧ ಕೊರಿ ೬:೨೦)
