Appam, Appam - Kannada

ಫೆಬ್ರವರಿ 26 – ಅವನು ದಾವೀದನಂತಿರುವನು!

“ಆ ದಿನದಲ್ಲಿ ಯೆಹೋವನು ಯೆರೋಸಲೇಮಿನವರನ್ನು ಸುತ್ತಲೂ ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು. ದಾವೀದನ ವಂಶವು ದೇವರಂತೆ. ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳುವದು.” (ಜೆಕರ್ಯ ೧೨:೮)

ದೇವರು ದಾವೀದನನ್ನು ಅಪರಿಮಿತವಾಗಿ ಪ್ರೀತಿಸಿದನು ಕಾರಣ, ದಾವೀದನು ದೇವರನ್ನು ಸ್ತುತಿಸುವದಕ್ಕಾಗಿಯೇ ಉಂಟುಮಾಡಲ್ಪಟ್ಟಿದ್ದಾರೆ. ದಾವೀದನು ದೇವರ ಹೃದಯಕ್ಕೆ ಸಮೀಪವುಳ್ಳವನಾಗಿದ್ದನು. ಅದು ಮಾತ್ರವೇ ಅಲ್ಲ ದೇವರು ದಾವೀದನ ಮೇಲೆ ಸಮೃದ್ಧಿಯಾದ ಅಭಿಷೇಕವನ್ನು ಸುರಿಸಿದನು. ಮತ್ತು ಪ್ರವಾಧನೆಯನ್ನು ಮತ್ತು ಪ್ರಕಟಣೆಯನ್ನು ಒಳಗೊಂಡಿರುವ ಕೀರ್ತನೆಗಳನ್ನು ದೇವರು ದಾವೀದನಿಗೆ ಅನುಗ್ರಹಿಸಿದ್ದಾರೆ.

ದಾವೀದನು ವೈರಿಗಳ ಮುಂದೆ ಅಭಿಷೇಕವನ್ನು ಹೊಂದಿದ್ದಾನೆ. ತನ್ನ ಸಹೋದರರ ಮುಂದೆ ಅಭಿಷೇಕಿಸಲ್ಪಟ್ಟಿದ್ದನು. ಮಾತ್ರವಲ್ಲದೇ ಆತನು ಇಸ್ರಾಯೃಲ್ಯರ ಜನ ಸಮೂಹದ ಮುಂದೆ ಅಭಿಷೇಕಿಸಲ್ಪಟ್ಟನು. ಶತ್ರುಗಳನ್ನು ಸೋಲಿಸಲು ಹಾಗೂ ಎಲ್ಲಾ ವೈರಿಗಳನ್ನು ಆತನ ಪಾದಗಳ ಕೆಳಗೆ ಹಾಕಲು ದೇವರು ದಾವೀದನಿಗೆ ಅಧಿಕಾರವನ್ನು ಮತ್ತು ಶಕ್ತಿಯನ್ನು ನೀಡಿದನು.

ದಾವೀದನು ಗೋಲ್ಯಾತನನ್ನು ಸಾಯಿಸಿರುವದು ಮತ್ರವಲ್ಲದೇ ಆತನ ಮಾಡಿದ ನೂರಾರು ಯುದ್ಧಗಳಲ್ಲಿ ಜಯವನ್ನು ಪಡೆದಿದ್ದಾರೆ. ಮತ್ತು ದಾವೀದನು ಜಯದ ಮೇಲೆ ಜಯವನ್ನು ಸಾಧಿಸಿದರು.

ಪ್ರಿಯ ದೇವರ ಮಕ್ಕಳೇ ನೀವು ಜೀವನದಲ್ಲಿ ಅನೇಕ ಸೋಲುಗಳನ್ನು ಹಾದು ಬಂದಿರಬಹುದು. ನೀವು ಈ ದಿನಮಾನಗಳಲ್ಲಿ ಬಲಹೀನರಾಗಿದ್ದು, ಕದಲಿಸಲ್ಪಟ್ಟವರಾಗಿ ಸಂತೋಷವನ್ನು ಕಳೆದುಕೊಂಡಿರಬಹುದು. ನಿರುತ್ಸಾಹಗೊಳ್ಳಬೇಡಿರಿ, ದಾವೀದ ಕುಮಾರನಾದ ಯೇಸು ಕ್ರಿಸ್ತನು ನಿಮಗೆ ಸಂಪೂರ್ಣವಾದ ಜಯವನ್ನು ನೀಡುತ್ತಾರೆ.

ನೀವು ದಾವೀದನ ಹಾಗೆ ದೇವರನ್ನು ಆರಾಧಿಸಲು ನಿಮ್ಮನ್ನು ಒಪ್ಪಿಸಿಕೊಟ್ಟರೆ, ದೇವರು ನಿಮ್ಮ ವಾಸಸ್ಥಳವನ್ನು ದೃಢಪಡಿಸುವನು. ಆತನು ನಿಮ್ಮ ಬಲಹೀನ ಮೊಣಕಾಲುಗಳನ್ನು ಬಲಪಡಿಸುವನು, ಆಗ ನೀವು ಸಂತೋಷದಿಂದ ಅಪೋಸ್ತಲನಾದ ಪೌಲನ ಹಾಗೆ ಹೇಳಬಹುದು, ” ನಾನು ಕ್ರಿಸ್ತನಲ್ಲಿದ್ದುಕೊಂಡು ಎಲ್ಲವನ್ನು ಮಾಡುವದಕ್ಕೆ ಶಕ್ತನಾಗಿದ್ದೇನೆ,” (ಫಿಲಿ ೪:೧೩). ನಿಮ್ಮ ವಾಸ ಸ್ಥಳವು ದಾವೀದನ ಗುಡಾರದ ಹಾಗೆ ಇರಲಿ. ಆಗ ದೇವರ ಪ್ರಸನ್ನತೆಯು ನಿಮ್ಮಲ್ಲಿ ನೆಲೆಗೊಂಡಿರುತ್ತದೆ. ದೇವರ ಮಹಿಮೆಯು ನಿಮ್ಮನ್ನು ಆವರಿಸುತ್ತದೆ. ಆ ಸ್ಥಳದಲ್ಲಿ ಸಂತೋಷದ ಹಾಡುಗಳು ಹಾಗೂ ನೃತ್ಯಗಳು ಇದ್ದವು. ದೇವರನ್ನು ಪ್ರೀತಿಸುವವರ ಹಿತಕ್ಕಾಗಿ ದೇವರು ಎಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ನೀವು ಶಕ್ತಿಶಾಲಿಗಳಾಗಿರುವಿರಿ.

ಪ್ರವಾದಿಯಾದ ಜೆಕರ್ಯನ ಮೂಲಕ ದೇವರು ನೀಡಿರುವ ವಾಗ್ದಾನವನ್ನು ಪುನಃ ಓದಿರಿ, “ಆ ದಿನದಲ್ಲಿ ಯೆಹೋವನು ಯೆರೋಸಲೇಮಿನವರನ್ನು ಸುತ್ತಲೂ ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು. ದಾವೀದನ ವಂಶವು ದೇವರಂತೆ. ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳುವದು.” (ಜೆಕರ್ಯ ೧೨:೮)

ಹಳೆಒಡಂಬಡಿಕೆಯ ಸಂತರ ಕುರಿತು ನಾವು ಹೀಗೆ ಓದುತ್ತೇವೆ, ” ನಂಬಿಕೆಯ ಮೂಲಕ ಅವರು ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡಕೊಂಡರು; ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಟರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು.” (ಇಬ್ರಿಯ ೧೧:೩೩-೩೪)

ಪ್ರಿಯ ದೇವರ ಮಕ್ಕಳೇ, ದೇವರನ್ನು ಅಧಿಕವಾಗಿ ನೀವು ಸ್ತುತಿಸುವಾಗ ದೇವರಲ್ಲಿ ಅಭಿವೃದ್ಧಿಯನ್ನು ಹೊಂದುವಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು?.” (ಕೀರ್ತ ೨೭:೧)

Leave A Comment

Your Comment
All comments are held for moderation.