Appam, Appam - Kannada

ಫೆಬ್ರವರಿ 17 – ಯಾವನಾದರೂ ಹಿಂದೆಗೆದರೆ!

“ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವುದಿಲ್ಲ” (ಇಬ್ರಿ ೧೦:೩೮)

ಕರ್ತನು ಹೀಗೆ ಪ್ರಕಟಿಸುತ್ತಾನೆ, ” ಯಾವನಾದರು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವುದಿಲ್ಲ”. ಕರ್ತನಿಗಾಗಿ ಶ್ರಮೆಗಳನ್ನು ಸಹಿಸಿಕೊಂಡಿರುವ ಒಬ್ಬ ದೇವ ಸೇವಕರ ಕುರಿತು ನನೆಗ ಗೊತ್ತಿದೆ. ಆತನು ಹೊರದೇಶದಿಂದ ಬಂದಿರುವ ಕ್ರೈಸ್ತ ಮಿಷನರಿಯಾದದ್ದರಿಂದ ಸ್ಥಳೀಯ ಜನರು ಅತನಿಗೆ ವಿಪರೀತವಾಗಿ ಹಿಂಸಿಸಿ, ಯೇಸುವನ್ನು ನಿರಾಕರಿಸಲು ಒತ್ತಾಯಿಸಿದರು.

ಆ ಸಮಯದಲ್ಲಿ ಕರ್ತನು ಆತನ ಸಂಗಡ ಮಾತನಾಡಿ ” ಸ್ಥಿರವಾಗಿ ನಿಂತುಕೊಂಡು ನನ್ನನ್ನೇ ಆತುಕೊಂಡಿರು, ನೀನು ಹಿಂದೆಗೆದರೆ, ನನ್ನ ಆತ್ಮವು ನಿನ್ನಲ್ಲಿ ಸಂತೋಷಿಸುವುದಿಲ್ಲ.” ಆ ಸೇವಕನು ಕರ್ತನಲ್ಲಿ ದೃಢವಾಗಿ ಇದ್ದನು. ಆತನು ಭಾರದಿಂದ ಹೀಗೆ ಪ್ರಾರ್ಥಿಸಿದನು. ” ಕರ್ತನೇ ನೀತಿವಂತನು ನಂಬಿಕೆಯಿಂದಲೇ ಬದುಕುವನು ಎಂದು ನೀವು ಹೇಳಿದ್ದೀರಿ, ನಾನು ನನ್ನ ನಂಬಿಕೆಯನ್ನು ನಿನ್ನ ಮೇಲೆ ಇಡುತ್ತೇನೆ. ಈ ಶೋಧನೆಯ ಸಂಕಟದಲ್ಲಿ ನಾನು ಬೀಳಬಾರದು.” ಆಗ ದೇವರು ಆತನು ನಂಬಿಕೆಯಲ್ಲಿ ಸ್ಥಿರವಾಗಿ ನಿಂತುಕೊಳ್ಳುವುದಕ್ಕೆ ಸಹಾಯಮಾಡಿದನು.

ನಂತರದ ದಿನಗಳಲ್ಲಿ ಆತನು ತನ್ನ ಸಾಕ್ಷಿಯನ್ನು ನನ್ನ ಬಳಿ ಹಂಚಿಕೊಂಡಾಗ , ನನ್ನ ಹೃದಯವು ದುಃಖದಿಂದ ತುಂಬಿತು. ಈ ದಿನಗಳಲ್ಲಿ ಅನೇಕರು ದೇವರಿಂದ ಹಿಂತುರಿಗಿ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಕರ್ತನಿಗಾಗಿ ಎದ್ದು ಪ್ರಕಾಶಿಸಿದವರು ಇಂದು ಬಿದ್ದುಹೋಗಿರುವ ಸ್ಥಿತಿಯಲ್ಲಿದ್ದಾರೆ. ಅವರನ್ನು ಕಾಡಿದ ನಿರುತ್ಸಾಹದ ನಿಮಿತ್ತ ಅವರು ಹಿಂತುರುಗಿ ಹೋಗಿದ್ದಾರೆ.

ಹಿಂದೆಗೆದು ಹೋಗಿರುವ ವ್ಯಕ್ತಿಯನ್ನು ದೇವರು ನೋಡುವಾಗ , ಆತನು ನೋವಿನಿಂದ ಮಾತನಾಡುತ್ತಾನೆ. ” ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೆಲೆ ತಪ್ಪು ಹೊರಿಸಬೇಕಾಗುತ್ತದೆ. ಆದದರಿಂದ ನೀನು ಎಲ್ಲಿಂದ ಬಿದ್ದಿದ್ದಿಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು ನೀನು ದೇವರ ಕಡೆಗೆ ತಿರುಗಿಕೊಳ್ಳದೇ ಹೋದರೆ ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುವೆನು.” (ಪ್ರಕಟ ೨:೪-೫)

ನಿಮ್ಮನ್ನು ಪ್ರಮಾಣಿಕತೆಯಿಂದ ಪರೀಕ್ಷೆಮಾಡಿಕೊಳ್ಳಿರಿ. ನಿಮಗೆ ದೇವರ ಮೇಲೆ ಮೊದಲು ಇದ್ದ ದೈವೀಕವಾದ ಪ್ರೀತಿಯು ಇನ್ನೂ ಹಾಗೆಯೇ ಇದೆಯಾ? ಆ ಸಮಯದಲ್ಲಿ ಆತನ ಪ್ರಸನ್ನತೆಯಲ್ಲಿ ಸಂತೋಷದಿಂದ ಆರಾಧಿಸಿದ ಹಾಗೆ ಈಗಲೂ ಮಾಡಲೂ ಸಾಧ್ಯನಾ? ಬೀದಿ ಸುವಾರ್ತೆಗಳ ಮೂಲಕ ಆತ್ಮಗಳನ್ನು ಗೆಲ್ಲುವುದಕ್ಕೆ ನೀವು ಸಂತೋಷಪಡುತ್ತಿದ್ದೀರಾ?

ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರವು “ಇಲ್ಲ” ಎಂದಾದರೆ ನೀವು ನಿಧಾನವಾಗಿ ಹಿಂದೆಗೆಯುವ ಹಂತದಲ್ಲಿದ್ದೀರಿ. ಹಿಂದೆಗೆಯುವ ಮತ್ತೊಂದು ಸ್ಪಷ್ಟವಾದ ಸೂಚನೆಯೇನಂದರೆ, ಹಿಂದೆಗೆಯುವವರು ಇತರರಲ್ಲಿ ತಪ್ಪನ್ನು ಹುಡುಕುತ್ತಾರೆ ಹಾಗೂ ಜೊತೆ ವಿಶ್ವಾಸಿಗಳನ್ನು ನಿರಂತರವಾಗಿ ಹಿಯಾಳಿಸುವದು. ಒಬ್ಬ ವ್ಯಕ್ತಿಯು ದೇವರ ಮಹಿಮೆ ಮತ್ತು ಘನತೆಯ ಕುರಿತು ಮಾತನಾಡದೇ ಯಾವಾಗಲೂ ಇತರ ಸಹೋದರ ಸಹೋದರಿಯರ ಮೇಲೆ ದೂರುಗಳನ್ನು ಹೇಳುತ್ತಿದ್ದರೆ ಅವನು ಹಿಂದೆಗೆದಿದ್ದಾನೆ ಎಂಬುದಾಗಿ. ಇದರ ಅರ್ಥ ಅವನು ಹಿಂದೆಗೆದು ಹೋಗುವುದು ಮಾತ್ರವಲ್ಲದೇ ಸೈತಾನನಿಗೆ ತನ್ನ ಜೀವನದಲ್ಲಿ ಸ್ಥಳವನ್ನು ನೀಡಿದ್ದಾನೆ.

ನೀವು ಒಂದು ವೇಳೆ ಆ ಸ್ಥಿತಿಯಲ್ಲಿ ಇದ್ದರೆ, ಪಶ್ಚತ್ತಾಪ ಪಟ್ಟು ಕಣ್ಣೀರಿನಿಂದ ದೇವರ ಸಮ್ಮುಖಕ್ಕೆ ಬನ್ನಿರಿ. ಅನೇಕರು ದೇವರನ್ನು ದೃಷ್ಟಿಸಿ ನೋಡುವದನ್ನು ನಿಲ್ಲಿಸಿಬಿಟ್ಟು ಲೋಕವನ್ನು ನೋಡಲು ಪ್ರಾರಂಭಿಸಿದರು. ಲೂಕ ೯:೬೨ರಲ್ಲಿ ಹೀಗೆ ಓದುತ್ತೇವೆ. ” ಯೇಸು ಅವನಿಗೆ – ಯಾವನಾದರೂ ನೇಗಿಲನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲವೆಂದು ಹೇಳಿದನು.” (ಲೂಕ ೯:೬೨)

ಇಸ್ರಾಯೇಲ್ಯರು ಕಾನಾನ್‌ಪ್ರದೇಶಕ್ಕೆ ಪ್ರಯಾಣ ಮಾಡುತ್ತಿರುವಾಗ, ಅವರ ಹೃದಯಗಳು, ಐಗುಪ್ತ ದೇಶದಲ್ಲಿ ಸಿಗುತ್ತಿದ್ದ ಸೌತೆಕಾಯಿ, ಕರ್ಬೂಜು, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಆಶಿಸಿತು. ಕಾರಣ ಅವರ ಹೃದಯಗಳು ದೇವರಿಂದ ದೂರ ಸರಿದಿದ್ದವು. ಆದಕಾರಣ ಅವರು ವಾಗ್ದಾನದ ದೇಶವಾಗಿರುವ ಕಾನಾನನ್ನು ಸೇರಲಾರದೇ ಹೋದರು.

ಪ್ರಿಯ ದೇವರ ಮಕ್ಕಳೇ, ಸ್ಥಿರವಾಗಿ ನಿಲ್ಲಿರಿ, ಹಾಗೂ ಹಿಂದೆಗೆಯಬೇಡಿರಿ.

ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: “ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು; ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು” (ಜ್ಞಾನೋ ೧೪:೧೪)

Leave A Comment

Your Comment
All comments are held for moderation.