No products in the cart.
ಫೆಬ್ರವರಿ 12 – ಸಹನೆಯಿಂದ ಓಡು!
” ಆದ ಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” (ಇಬ್ರಿ ೧೨:೧-೨)
ಕೆಲವು ಜನರು ಸರಿಯಾದ ಮಾರ್ಗದರ್ಶನವಿಲ್ಲದೇ ತಮ್ಮ ತಲೆಯಲ್ಲಿರುವ ಜ್ಞಾನದ ಹಿಂದೆ ಓಡುತ್ತಿದ್ದಾರೆ. ಕೆಲವರು ಉದ್ವೇಗಗಳ ಹೀಂದೆ ಓಡುತ್ತಾರೆ, ಕೆಲವರು ನಿದ್ರೆಯಲ್ಲಿ ಜಾರಿದವರಾಗಿ ಓಡುತ್ತಾರೆ. ಕೆಲವರು ಕಾಟಚಾರಕ್ಕಾಗಿ ಓಡುತ್ತಾರೆ.
ಅಪೋಸ್ತಲನಾದ ಪೌಲನು ಸಹನೆಯಿಂದ, ಶಾಂತವಾಗಿ, ಸ್ಪಷ್ಟ ಮನಸ್ಸಿನಿಂದ, ಸ್ತಿರತೆಯಿಂದ ಹಾಗೂ ತಾಳ್ಮೆಯಿಂದ ಓಡುವದಕ್ಕಾಗಿ ಪ್ರೋತ್ಸಾಹಿಸುತ್ತಿದ್ದಾನೆ. ದೇವರ ವಾಕ್ಯ ಹೇಳುತ್ತದೆ, ” ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ” (ಲೂಕ ೨೧:೧೯)
ಸಹನೆ ಎಂದರೇನು? ಸಹನೆ ಎನ್ನುವುದು ಅನೇಕ ಅರ್ಥಗಳನ್ನು ಒಳಗೊಂಡಿದೆ. ಇತರರು ನಮ್ಮನ್ನು ಪ್ರಚೋದನೆ ಮಾಡಿ ಕೋಪವನ್ನೆಬ್ಬಿಸುವಾಗ ಅಥವಾ ನಮ್ಮ ತಾಳ್ಮೆಗೆ ಕಿರಿಕಿರಿಯನ್ನು ಉಂಟುಮಾಡುವಾಗ ಶಾಂತವಾಗಿ ಇರುವದು. ಶ್ರಮೆಗಳನ್ನು ಸಹಿಸಿಕೊಳ್ಳುವದು. ಬೆದರಿಸುವಿಕೆಗಳು, ಕೀಲಾಗಿ ಕಾಣುವದನ್ನು ಸಂತೋಷವಾಗಿ ಸಹಿಸಿಕೊಳ್ಳುವದು. ಸಂಭಂದಗಳು ಮುರಿಯಲ್ಪಡುವ ಸನ್ನಿವೇಶಗಳು ಬಂದರೂ, ಸಹನೆಯನ್ನು ಪರೀಕ್ಷೀಸುವ ಸಂದರ್ಭಗಳು ಬಂದರೂ ಪ್ರೀತಿಯಿಂದ ಪ್ರತಿಕ್ರಿಯಿಸಬೇಕು .
ಸಹನೆಯು ಯೇಸುಕ್ರಿಸ್ತಲ್ಲಿದ್ದ ದೈವೀಕ ಗುಣಲಕ್ಷಣವಾಗಿದೆ. ನಾವು ಯೇಸುಕ್ರಿಸ್ತನ ಜೀವನವನ್ನು ನೋಡುವುದರಿಂದ ಸಹನೆಯನ್ನು ಕಲಿತುಕೊಳ್ಳುತ್ತೇವೆ. ಆತನು ಶಿಷ್ಯರೊಂದಿಗೆ ಎಷ್ಟು ಸಹನೆಯಿಂದ ನಡೆದುಕೊಂಡನು! ಅವರು ಯೇಸುವಿನ ಸಂಗಡ ಇದ್ದರೂ ಸಹ, ಯೇಸುವನ್ನು ಅರ್ಥಮಾಡಿಕೊಳ್ಳಲು ಸೋತುಹೋದರು. ಆತನ ಸಾಮ್ಯಗಳನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಹೃದಯದಲ್ಲಿ ನಿಧಾನಗತಿಯುಳ್ಳವರಾಗಿದ್ದರು, ಆದರೂ ಯೇಸು ಅವರೆಲ್ಲರನ್ನೂ ತಾಳ್ಮೆಯಿಂದ ಸಹಿಸಿಕೊಂಡರು.
ಶಿಷ್ಯರ ಆಲೋಚನೆಗಳು ಪ್ರಾಪಂಚಿಕತೆಯಿಂದ ತುಂಬಿದ್ದರೂ ಯೇಸು ಅವರ ವಿಷಯದಲ್ಲಿ ಸಹನೆಯುಳ್ಳವರಾಗಿಯೇ ಇದ್ದರು. ಆತನು ಶ್ರಮೆಯನ್ನು ಅನುಭವಿಸುವಾಗ ಅವರು ಚದುರಿ ಓಡಿದಾಗಲೂ ನಂತರದ ದಿನಗಳಲ್ಲಿ ಮತ್ತೆ ಅವರನ್ನು ಸ್ವೀಕರಿಸಿಕೊಂಡನು.
ಎಲ್ಲದಕ್ಕಿಂತಲೂ ಮಿಗಿಲಾಗಿ ನಾವು ಯೇಸು ಕ್ರಿಸ್ತನ ಶಿಲುಬೆಯ ಅಡಿಯಲ್ಲಿ ನಿಂತು ಭಯಭಕ್ತಿಯಿಂದ ಆತನ ಸಹನೆಯನ್ನು ಕಾಣುತ್ತೇವೆ. ನಾವು ಸತ್ಯವೇದದ ಭಾಗಗಳಾಗಿರುವ ಮತ್ತಾಯ ೨೬;೫೯-೬೮, ೨೭:೨೯-೫೦ ಮತ್ತು ೧ ಪೇತ್ರ ೨:೨೧-೧೪ ನ್ನು ಓದುವಾಗ ಆತನು ಎಷ್ಟು ಶ್ರಮೆ, ಹೀಯಾಳಿಸುವಿಕೆ ಮತ್ತು ಅವಮಾನವನ್ನು ಹೇಗೆ ಸಹಿಸಿಕೊಂಡನು ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ. ದೇವರ ವಾಕ್ಯ ನಮಗೆ ಇದನ್ನೇ ಕಲಿಸುತ್ತದೆ, ಆತನು ನಮಗೆ ದೊಡ್ಡ ಮಾದರಿಯನ್ನು ಬಿಟ್ಟು ಹೋಗಿದ್ದಾನೆ.
ದೇವರ ಮಕ್ಕಳೇ, ನಾವು ದೇವರ ಮಕ್ಕಳು ಎಂಬುದನ್ನು ನಮ್ಮಲ್ಲಿರುವ ಸಹನೆಯು ಈ ಲೋಕಕ್ಕೆ ಪ್ರಕಟಿಸಿಲಿ. (ಎಫೆ ೪:೧-೩). ನಮ್ಮ ಸಹನೆಯು ಪ್ರೀತಿಯಲ್ಲಿ ಕಾಣಿಸಲಿ, ಪ್ರೀತಿಯ ಅನ್ಯೋನ್ಯತೆಯಲ್ಲಿ ಒಬ್ಬರ ಬಾರಗಳನ್ನು ಒಬ್ಬರು ಹೊರುವುದರಲ್ಲಿ ನಮ್ಮ ತಾಳ್ಮೆಯನ್ನು ತೋರಿಸಬೇಕು. (೧ ಕೊರಿ ೧೩:೪) ನಮ್ಮ ಸಹನೆಯು ಇತರರಿಗೆ ಉತ್ತೇಜನಕಾರಿಯಾಗಿರಲಿ. ಅವರನ್ನು ಬಲಪಡಿಸುತ್ತಾ ಮುಂದೆ ಸಾಗಲು ಸಹಾಯ ಮಾಡೋಣ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಸಹೋದರರೇ, ಕರ್ತನು ಪ್ರತ್ಯಕ್ಷನಾಗುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಬೆಲೆಯುಳ್ಳ ಫಲಕ್ಕಾಗಿ ಕಾದಿದ್ದು ಮುಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರಿ. ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಕರ್ತನ ಪ್ರತ್ಯಕ್ಷತೆಯು ಹತ್ತಿರನವಾಯಿತು. “(ಯಾಕೋಬ ೫:೭-೮)
