No products in the cart.
ಫೆಬ್ರವರಿ 11 – ಅಪ್ಪಾ, ತಂದೆಯೇ!
” ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ ದಾಸನ ಭಾವವನ್ನು ಹೊಂದಿದವರಲ್ಲ, ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ ಎಂದು ಕೂಗುತ್ತೇವೆ.” (ರೋಮ 8:15)
ಈ ಲೋಕದಲ್ಲಿ ಜೀವಿಸುತ್ತಿರುವ ಸಾಧಾರಣ ಜನರಾದ ನಾವು ಭೂಪರಲೋಕಗಳನ್ನು ಸೃಷ್ಟಿಮಾಡಿದ ದೇವರನ್ನು “ಅಪ್ಪಾ, ತಂದೆಯೇ” ಎಂದು ಪ್ರಾರ್ಥಿಸುತ್ತೇವೆ, ನಾವು ಎಂತಹ ಭಾಗ್ಯಶಾಲಿಗಳು ಅಲ್ಲವೇ.
ಸೇರಾಫಿಯರು ಭಯದಿಂದ ತಮ್ಮ ಮುಖವನ್ನು ಮುಚ್ಚಿಕೊಂಡು, ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡು ದೇವರನ್ನು ಆರಾಧಿಸುತ್ತಿದ್ದರು. ಆದರೆ ನಾವು ದೇವರ ಕೃಪಾ ಸಿಂಹಾಸನದ ಮುಂದೆ ಧೈರ್ಯದಿಂದ ಆತನ ಮಕ್ಕಳಾಗಿ ಬಂದು ಕರ್ತನೊಂದಿಗೆ ಮಾತನಾಡುವ ಸೌಭಾಗ್ಯವನ್ನು ನಮಗೆ ದಯಪಾಲಿಸಿದ್ದಾರೆ. ಎಂತಹ ಮಹಿಮೆಯ ಆರ್ಶೀವಾದವಲ್ಲವೇ!
ಯೇಸುಕ್ರಿಸ್ತನು ತನ್ನ ಶಿಷ್ಯರಿಂದ ಬೇರ್ಪಡಿಸಲ್ಪಟ್ಟವನಾಗಿ ತಂದೆಯ ಬಲಗಡೆ ಕುಳಿತುಕೊಂಡನು. ಆ ಬೇರ್ಪಡಿಸುವಿಕೆಯ ನೋವನ್ನು ನೀಗಿಸಲು ಯೇಸು ಪವಿತ್ರಾತ್ಮನನ್ನು ಕಳುಹಿಸಿದನು. ಪವಿತ್ರಾತ್ಮನ ಮೂಲಕ ನಾವು ದತ್ತು ಆತ್ಮವನ್ನು ಪಡೆದುಕೊಂಡೆವು. ಆತನ ಮೂಲಕ ನಾವು ದೇವರನ್ನು “ಅಪ್ಪಾ ತಂದೆಯೇ” ಕರೆಯುತ್ತೇವೆ.
ಈಗ ನಮ್ಮ ಪ್ರಾರ್ಥನೆಗಳು ಯಾಕೋಬನ ಏಣಿಯ ಸಹಾಯದಿಂದ ದೇವರ ಸಮ್ಮುಖಕ್ಕೆ ಕೊಂಡೊಯ್ಯಲು ನಮಗೆ ದೇವದೂತರ ಅವಶ್ಯಕತೆಯು ಇರುವುದಿಲ್ಲ. ಈ ಭೂಮಿಯಲ್ಲಿ ನಾವು ಪ್ರಾರ್ಥಿಸಿದ ಕೂಡಲೇ, ಪವಿತ್ರಾತ್ಮನು ನಮ್ಮ ಪ್ರಾರ್ಥನೆ ವಿಜ್ಞಾಪನೆಗಳನ್ನು ಪರಲೋಕಕ್ಕೆ ಕೊಂಡೊಯ್ಯುವನು. ನಾವು ಕೂಗುವುದಕ್ಕಿಂತ ಮೊದಲೇ ಆತನು ಕೇಳುತ್ತಾನೆ. ನಮ್ಮ ಪ್ರತಿಯೊಂದು ಪ್ರಾರ್ಥನೆಗೆ ಆತನು “ಹೌದು” ಮತ್ತು “ಇಲ್ಲ” ಎಂದು ಉತ್ತರ ಕೊಡುವನು.
ಈ ದಿನಮಾನಗಳಲ್ಲಿ ಮೊಬೈಲ್‌ಪೋನ್‌ಗಳು ಹೆಚ್ಚು ಬಳಕೆಯಲ್ಲಿವೆ. ಒಬ್ಬ ತಂದೆಯು ಅನೇಕ ಮೈಲುಗಳ ದೂರದಿಂದ “ನನ್ನ ಮಗನೇ” ಎಂದು ಕರೆಯಬಹುದು. ತಕ್ಷಣವೇ ಆ ಧ್ವನಿಗೆ ಮಗನು ಪ್ರತಿಕ್ರಿಯಿಸಿ ಮತ್ತೊಂದು ಕಡೆಯಿಂದ “ಹೇಳಿ, ಅಪ್ಪಾ” ಎನ್ನಬಹುದು.
ಪ್ರಾರ್ಥನೆಯು ಮೊಬೈಲ್‌ಪೋನ್‌ಗಿಂತಲೂ ಅತ್ಯುತ್ಯಮವಾದುದಲ್ಲವೇ? ಪ್ರಾರ್ಥನೆಯು ನಮಗೆ ಪರಲೋಕದೊಂದಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಕೆಲವೊಮ್ಮೆ ನಾವು ಏನು ಪ್ರಾರ್ಥನೆ ಮಾಡಬೇಕೆಂದು ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ಯೇಸುಕ್ರಿಸ್ತನು ನಮಗೋಸ್ಕರ ದೇವರ ಬಲಗಡೆಯಲ್ಲಿ ನಿಂತುಕೊಂಡು ನರಲಾಟದಿಂದ ಪ್ರಾರ್ಥಿಸುತ್ತಿದ್ದಾರೆ.
ದೇವರು ನಮಗೆ ವಾಗ್ದಾನ ಮಾಡಿದ್ದಾರೆ “ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು.” (ಯೆಶಾ 41:17)
ದೇವರ ವಾಕ್ಯ ಪ್ರಕಟಿಸುವುದೇನಂದರೆ “ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ. ನಿನ್ನನ್ನು ಕಾಯುವವನು ಯೆಹೋವನೇ; ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ. ಹಗಲಲ್ಲಿ ಸೂರ್ಯನೂ ಇರುಳಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವದಿಲ್ಲ.” (ಕೀರ್ತ 121:4-6)
ಪ್ರಿಯ ದೇವರ ಮಕ್ಕಳೇ, ನೀವು ಯಾವುದೇ ಸಮಯದಲ್ಲಿ ಕರ್ತನನ್ನು ಕೂಗಿ ಕರೆಯಬಹುದು, ಹಗಲಲ್ಲಿ ಅಥವಾ ರಾತ್ರಿಯಲ್ಲಿಯೂ ಪ್ರಾರ್ಥಿಸಬಹುದು. ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರ ವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.” (ಯೆಶಾ 65:23-24)
