No products in the cart.
ಫೆಬ್ರವರಿ 08 – ಬಲ ಬೇಕಾಗಿದೆ!
“ಇಗೋ ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲನ ಲೋಕದಿಂದ ನಿಮಗೆ ಶಕ್ತಿಯನ್ನು ಹೊದಿಸುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ ಎಂದು ಹೇಳಿದನು.” (ಲೂಕ 24:49)
ಈ ದಿನಮಾನಗಳಲ್ಲಿ ನಾವು ಎಲ್ಲಾ ಕಡೆ ಗಮನಿಸುತ್ತೇವೆ, ದೇವರ ಮಕ್ಕಳು ಶಕ್ತಿಗಾಗಿ, ಅಭಿಷೇಕಕ್ಕಾಗಿ, ನೂತನವಾದ ಬಲವನ್ನು ಹೊಂದಿಕೊಳ್ಳುವದಕ್ಕಾಗಿ ಕಾತುರದಿಂದ ಎದುರುನೋಡುತ್ತಿದ್ದಾರೆ. ನಾವು ಹೀಗೆ ಹಾಡುವುದುಂಟು. ” ಓ ದೇವರೇ ನಮಗೆ ಶಕ್ತಿ ನೀಡಿರಿ, ಓ ದೇವರೇ ನಮಗೆ ಈ ದಿನವೇ ಬೇಕು, ಓ ದೇವರೇ ನಮಗೆ ಈಗಲೇ ನೀಡಿರಿ” ಎಂಬುದಾಗಿ.
ಹೌದು ನಮಗೆ ನಿಜವಾಗಿಯೂ ಶಕ್ತಿಯು ಬೇಕಾಗಿದೆ. ಪಾಪದಿಂದ ಹೊರಬರುವದಕ್ಕೆ ನಮಗೆ ಶಕ್ತಿ ಬೇಕು. ಸೈತಾನನ್ನು ಸೋಲಿಸುವುದಕ್ಕೆ ನಮಗೆ ಶಕ್ತಿ ಬೇಕು, ಕ್ರೈಸ್ತರಾದ ನಾವು ನ್ಯಾಯವಂತರಾಗಿ, ಜಯಶಾಲಿಗಳಾಗಿ ನಡೆಯಲು ನಮಗೆ ದೇವರ ಶಕ್ತಿ ಅವಶ್ಯವಾಗಿದೆ. ಈ ಶಕ್ತಿಯು ಮನುಷ್ಯರ ಶಕ್ತಿ ಅಲ್ಲ, ಇದು ಮೇಲಿನಿಂದ ಇಳಿದುಬಂದ ಬಲವಾಗಿದೆ, ಇದು ಪವಿತ್ರಾತ್ಮನಿಂದ ದೊರಕಿರುವ ಶಕ್ತಿಯಾಗಿದೆ..
ಕೀರ್ತನೆಗಾರನು ಸ್ಪಷ್ಟವಾಗಿ ಹಾಗೂ ದೃಢವಾಗಿ ಘೋಷಿಸಿದ್ದಾನೆ, ” ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.” (ಕೀರ್ತ 62:11)
ಹೌದು, ಎಲ್ಲಾ ಶಕ್ತಿಯು ದೇವರಲ್ಲಿ ಅಡಕವಾಗಿವೆ, ದೇವರ ವಾಕ್ಯ ಹೇಳುತ್ತದೆ, ” ಅಬ್ರಾಮನು ತೊಂಬತ್ತೊಂಬತ್ತು ವರುಷದವನಾದಾಗ ಯೆಹೋವನು ಅವನಿಗೆ ದರ್ಶನಕೊಟ್ಟು – ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು.” (ಆದಿ 17:1)
ನಮ್ಮ ದೇವರು ಸರ್ವಶಕ್ತನಾದ ದೇವರಾಗಿದ್ದಾನೆ. ನಮ್ಮ ನಿಲುಕಿಗೆ ಹಾಗೂ ನಮ್ಮ ಲೆಕ್ಕಕ್ಕೆ ಸಿಗದಷ್ಟು ಅದ್ಭುತಕಾರ್ಯಗಳನ್ನು ನಮ್ಮ ದೇವರು ಮಾಡುವರು. ಆತನಿಗೆ ಅಸಾಧ್ಯವಾದುದ್ದು ಯಾವೂದೂ ಇಲ್ಲ.
ನೀವು ಪ್ರಾರ್ಥಿಸುವಾಗ ದೇವರು ನಿಮಗೆ ಬಲವನ್ನು ಅನುಗ್ರಹಿಸುವನು. ದೇವರು ನಿಮಗೆ ಶಕ್ತಿಯನ್ನು ಮೇಲಿನಿಂದ ನೀಡುವನು.
ದೇವರ ಆತ್ಮನು ನಿಮ್ಮ ಮೇಲೆ ಬರುವಾಗ ನೀವು ಉನ್ನತವಾದ ಬಲವನ್ನು ಹೊಂದಿಕೊಳ್ಳುವಿರಿ.
ದೇವರ ಶಕ್ತಿಯನ್ನು ಹೊಂದಿಕೊಳ್ಳಬೇಕು, ಉನ್ನತವಾದ ಶಕ್ತಿಯನ್ನು ಮತ್ತು ಅಭಿಷೇಕವನ್ನು ಹೊಂದಿಕೊಳ್ಳಬೇಕೆಂಬ ದಾಹ ನಿಮಗೆ ಇದೆಯಾ? ನೀವು ದಾಹದಿಂದ ಮತ್ತು ನಿರೀಕ್ಷೆಯಿಂದ ದೇವರ ಪ್ರಸನ್ನತೆಗೆ ಬರುವಿರಾ? ನೀವು ಬಲಕ್ಕಾಗಿ ಉಪವಾಸವಿದ್ದು ಪ್ರಾರ್ಥಿಸುವಿರಾ? ದೇವರಾತ್ಮನ ವರಗಳಿಂದ ನಾನು ಶೃಂಗರಿಸಲ್ಪಡಬೇಕೆಂಬ ಬಯಕೆ ಇದೆಯಾ?.
ದೇವರಿಗಾಗಿ ನಾವು ಕಾಯುವಾಗ, ನಮಗೆ ಹೊಸ ಬಲವನ್ನು ಕರ್ತನು ಕೊಡುವನು. ನಾವು ದೇವರ ಆತ್ಮನ ಬಲದಿಂದ ಹೊಂದಿಕೊಳ್ಳುವವರೆಗೂ ನಾವು ಪ್ರಾರ್ಥನೆಯಲ್ಲಿ ಕಾಯಬೇಕು. ದೇವರ ಪ್ರಸನ್ನತೆಯಲ್ಲಿ ಸಮಯವನ್ನು ಕಳೆದಿರುವ ದಾವೀದನು ಹೀಗೆ ಬರೆಯುತ್ತಾನೆ. ” ಆದರೆ ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಂತೆ ಎತ್ತಿದ್ದೀ; ಚೈತನ್ಯತೈಲದಿಂದ ನನ್ನನ್ನು ಅಭಿಷೇಕಿಸಿದ್ದೀ. ನನ್ನ ಶತ್ರುಗಳಿಗುಂಟಾದ ದುರ್ಗತಿಯನ್ನು ಕಣ್ಣಾರೆ ಕಂಡಿದ್ದೇನೆ; ನನಗೆ ವಿರೋಧವಾಗಿ ಎದ್ದವರ ವಿಪತ್ತನ್ನು ಕಿವಿಯಾರೆ ಕೇಳಿದ್ದೇನೆ.” (ಕೀರ್ತ 92:10-11) ಈ ಪ್ರಾರ್ಥನೆಯ ನಂತರ ದಾವೀದನು ತನ್ನ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಜಯವನ್ನು ಅನುಭವಿಸಿದನು.
ಪ್ರಿಯ ದೇವರ ಮಕ್ಕಳೇ, ದೇವರು ನಿಮ್ಮನ್ನು ಬಲಪಡಿಸಿ ತನ್ನ ಶಕ್ತಿಯಿಂದ ತುಂಬಿಸಲು ಕಾಯುತ್ತಿದ್ದಾನೆ. ಆತನ ಪ್ರಸನ್ನತೆಯಲ್ಲಿ ಕಾಯುವುದು, ಆಸಕ್ತಿಯಿಂದ ಪ್ರಾರ್ಥಿಸುವುದು ಮತ್ತು ದೇವರಿಂದ ಶಕ್ತಿಯನ್ನು ಹೊಂದಿಕೊಳ್ಳುವುದು ನಮ್ಮ ಕೈಯಲ್ಲಿದೆ.
ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13)
