No products in the cart.
ಫೆಬ್ರವರಿ 02 – ನಿಮಗಾಗಿ!
“ದೇವಾ, ನನ್ನನ್ನು ಪರೀಕ್ಷೀಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು.” (ಕೀರ್ತ 139:23)
ನೀವು ವೈಯಕ್ತಿಕ ಪ್ರಾರ್ಥನೆಗಾಗಿ ದೇವರ ಪ್ರಸನ್ನತೆಯಲ್ಲಿ ಕುಳಿತುಕೊಳ್ಳುವಾಗ, ಮೊಟ್ಟ ಮೊದಲು ದೇವರು ನಿನ್ನ ಕುರಿತು ಪ್ರಕಟಿಸುತ್ತಾನೆ. ನೀವು ನಿಮ್ಮ ಬಲಹೀನತೆಗಳನ್ನು, ಸೋಲುಗಳನ್ನು ಮತ್ತು ನಿಮ್ಮೋಳಗೆ ಅಡಕವಾಗಿರುವ ಬರಿದಾದ ಸ್ಥಿತಿಯನ್ನು ಕಂಡುಹಿಡಿಯಲು ಪ್ರಾರಂಭಿಸುತ್ತೀರಿ. ಮಾತ್ರವಲ್ಲದೇ ನೀವು ಎಷ್ಟು ಆಳವಾಗಿ ದೇವರ ಮೇಲೆ ಅವಲಂಭಿತರಾಗಿರಬೇಕು ಎಂಬುದನ್ನು ಗ್ರಹಿಸಿಕೊಳ್ಳುವಿರಿ.
ಪ್ರವಾದಿಯಾದ ಯೆಶಾಯನು ಏಕಾಂಗಿಯಾಗಿ ದೇವರ ಆಲಯಕ್ಕೆ ಹೋಗಿ ಆತನ ಪಾದ ಸನ್ನಿಧಿಯಲ್ಲಿ ಕಾಯುತ್ತಿದ್ದಾಗ, ದೇವರು ಮೊದಲು ಆತನ ಆತ್ಮೀಕ ಜೀವನದ ನಿಜ ಪರಿಸ್ಥಿತಿಯನ್ನು ಪ್ರಕಟಿಸಿದನು. ಆ ಕಾರಣದಿಂದಲೇ ಯೆಶಾಯನು ದೇವರ ಮುಂದೆ ಅಡ್ಡಬಿದ್ದು ಅಳುವದಕ್ಕೆ ಪ್ರಾರಂಭಿಸಿದನು, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸು ತುಟಿಯವನು, ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು; ಇಂತಹ ನನ್ನ ಕಣ್ಣುಗಳು ರಾಜಾಧಿರಾಜನನ್ನು ಸೇನಾಧೀಶ್ವರನಾದ ಯೆಹೋವನನ್ನು ಕಂಡವು ಎಂದು ಕೂಗಿಕೊಂಡನು”.
ದೇವರ ವಾಕ್ಯ ಹೇಳುತ್ತದೆ: “ಸೆರಾಫಿಯರಲ್ಲಿ ಒಬ್ಬನು ಯಜ್ಞವೇಧಿಯಿಂದ ತಾನು ತಂಡಸದಲ್ಲಿ ತೆಗೆದ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು ನನ್ನ ಬಾಯಿಗೆ ಮುಟ್ಟಿಸಿ – ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು; ನಿನ್ನ ದೋಷವು ನೀಗಿತು, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು ಅಂದನು.” (ಯೆಶಾ 6:6-7)
ದೇವರು ಅಡಗಿಸಿಟ್ಟಿರುವ ನಮ್ಮ ಪಾಪಗಳನ್ನು ನೋಡುತ್ತಾನೆ. ನಾವು ಅವುಗಳನ್ನು ದೇವರ ಮುಂದೆ ಅರಿಕೆ ಮಾಡಿ ಬಿಟ್ಟುಬಿಡುವಾಗ, ಅವುಗಳಿಂದ ಪುನಃ ನಾವು ಸಮಸ್ಯೆಗೆ ಒಳಗಾಗುವದಿಲ್ಲ. ನಾವು ತಿಳಿದು ತಿಳಿಯದೇ ಮಾಡಿರುವ ಪಾಪಗಳನ್ನು ದೇವರ ಮುಂದೆ ಅರಿಕೆಮಾಡಬೇಕು. ಒಂದು ವೇಳೆ ನಾವು ಒಬ್ಬ ವ್ಯಕ್ತಿಯ ವಿರುದ್ಧವಾಗಿ ಪಾಪ ಮಾಡುವಾಗ, ಅವರನ್ನು ವ್ಯಕ್ತಿಗತವಾಗ ಭೇಟಿಮಾಡಿ ನಮ್ಮ ಪಶ್ಚತ್ತಾಪವನ್ನು ವ್ಯಕ್ತಪಡಿಸಿ ಅವರಲ್ಲಿ ಕ್ಷಮಾಪಣೆಯನ್ನು ಕೇಳಬೇಕು. ಮುಖಾಮುಖಿಯಾಗಿ ಅಥವಾ ಪತ್ರದ ಮೂಲಕ ಕೇಳಬೇಕು. ನಮ್ಮನ್ನು ತಗ್ಗಿಸಿಕೊಂಡು ಕ್ಷಮೆಯನ್ನು ಕೇಳಬೇಕು ಮತ್ತು ಪ್ರೀತಿಯಿಂದ ಕ್ಷಮೆಯನ್ನು ಹೊಂದಿಕೊಳ್ಳಬೇಕು.
ದೇವರ ಪ್ರಸನ್ನತೆಯಲ್ಲಿ ಪ್ರತೀ ಸಾರಿಯೂ ಮೊಣಕಾಲೂರುವಾಗ, ಪವಿತ್ರಾತ್ಮನು ನಮ್ಮ ಕುರಿತಾಗಿ ಮಾತ್ರ ಪ್ರಕಟಿಸದೇ ನಮ್ಮ ಆಂತರ್ಯದ
ಅರಿವನ್ನೂ ನೀಡುವನು. ದೇವರು ಮುರಿಯಲ್ಪಟ್ಟ ಜಜ್ಜಿದ ಹೃದಯವನ್ನು ಕೊಡುವನು. ಅಂತಹ ಹೃದಯವು ನಾವು ಹೀಗೆ ಪ್ರಾರ್ಥಿಸುತ್ತದೆ ” ಕರ್ತನೇ ಪಾಪಿಯಾದ ನಾನು ಹೇಗೆ ನಿನ್ನ ಸೇವೆಯನ್ನು ಮಾಡಲು ಸಾಧ್ಯ?, ನಿನ್ನ ಪವಿತ್ರವಾದ ನಾಮವನ್ನು ಉಚ್ಚರಿಸಲು ಹೇಗೆ ಸಾಧ್ಯ? ನನಗೆ ಕರುಣೆ ನೀಡಿರಿ.
ಪೇತ್ರನು ತನ್ನ ಪಾಪವನ್ನು ಅರಿಕೆಮಾಡಿದಾಗ, ದೇವರು ಆತನನ್ನು ಮನುಷ್ಯರನ್ನು ಹಿಡಿಯುವ ಬೆಸ್ತನನ್ನಾಗಿ ಮಾಡಿದನು. ಸತ್ಯವೇದವು ಹೇಳುತ್ತದೆ: “ಹೀಗಿರುವಲ್ಲಿ, ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಅಣ್ಣತಮ್ಮಂದಿರಿಬ್ಬರು ಬಲೇಬೀಸುವದನ್ನು ಕಂಡನು; ಅವರು ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ತಮ್ಮನಾದ ಅಂದ್ರೆಯ. ಅವರು ಬೆಸ್ತರು, ಸಮುದ್ರದಲ್ಲಿ ಬಲೆಬೀಸುತ್ತಿದ್ದರು. ಅವರಿಗೆ ಆತನು – “ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನ ಹಿಂದೆ ಹೋದರು.” (ಮತ್ತಾ 4:18-20)
ಅದೇ ಪ್ರಕಾರ ಯೆಶಾಯನು ಪಾಪವನ್ನು ಅರಿಕೆ ಮಾಡಿದಾಗ, ದೇವರು ಉನ್ನತವಾದ ಪ್ರವಾದಿಯನ್ನಾಗಿ ಮಾಡಿದನು. ಪ್ರಿಯ ದೇವರ ಮಕ್ಕಳೇ ನಿಮ್ಮ ಪಾಪಗಳನ್ನು ಅರಿಕೆಮಾಡಿರಿ ಮತ್ತು ದೇವರ ಆರ್ಶೀವಾದಗಳನ್ನು ಪಡೆದುಕೊಳ್ಳುವ ಸಾಧನಗಳಾಗಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಅದಲ್ಲದೇ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳನ್ನು ಆಳದಿರಲಿ.” (ಕೀರ್ತ 19:13)
