No products in the cart.
ಜನವರಿ 08 – ನಿಮಗೆ ಭಯಪಡುವದು!
“ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ ಆಕಾಶದ ಎಲ್ಲಾ ಪಕ್ಷಿಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಸಮುದ್ರದ ಮೀನುಗಳೂ ನಿಮಗೆ ಬೆದರಿ ಅಂಜಿಕೊಳ್ಳುವವು”. (ಆದಿ 9:2)
ನೋಹನ ಕುಟುಂಬಕ್ಕೆ ದೇವರು ವಾಗ್ದಾನ ಕೊಟ್ಟ ಹಾಗೆ ಈ ನೂತನ ವರ್ಷದಲ್ಲಿ ನಿಮಗೂ ಕೊಡುವನು. ಈ ಭೂಮಿಯ ಮೇಲೆ ಸಂಚರಿಸುವ ಯಾವುದೇ ಪ್ರಾಣಿಗಳಿಗೆ ನೀವು ಭಯಪಡುವ ಅವಶ್ಯಕತೆ ಇರುವುದಿಲ್ಲ.
ನೀವು ಹೀಗೆ ಹೇಳಬಹುದು “ನನಗೆ ನಾಯಿಗಳೆಂದರೆ ತುಂಬಾ ಭಯ, ಅಥವಾ ಮದವೇರಿದ ಹಸುವು ನನ್ನ ಮೇಲೆ ದಾಳಿ ಮಾಡುತ್ತದೆ” ಎಂದು. ಆದರೆ ನೀನು ಕ್ರಿಸ್ತನಲ್ಲಿರುವಾಗ ಅಂತಹ ಯಾವುದೇ ಕಾರಣಗಳಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ದೇವರ ವಾಕ್ಯ ಹೀಗೆ ಹೇಳುತ್ತದೆ ” ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ”. (2 ತಿಮೋ 1:7)
ದಾವೀದನು ತನ್ನ ಜೀವನದಲ್ಲಿ ಸಿಂಹಗಳನ್ನು, ಕರಡಿಗಳನ್ನು, ಗೊಲ್ಯಾತನನ್ನು ಮತ್ತು ಫಿಲಿಷ್ಟಿಯರನ್ನು ಎದುರಿಸಲು ಆತನಲ್ಲಿ ಇದ್ದಂತಹ ಧೈರ್ಯದ ರಹಸ್ಯವೇನು? ಆತನೇ ಹೇಳುವ ಹಾಗೆ “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.” (ಕಿರ್ತ 34:4) ಮತ್ತೆ ” ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು; ಶಿಷ್ಟನು ಸಿಂಹದಂತೆ ಧೈರ್ಯದಿಂದಿರುವನು.” (ಜ್ಞಾನೋ 28:1)
ಹಾವು ನಿಮ್ಮನ್ನು ನೋಡಿ ಬುಸುಗುಡುವಾಗ ಅದು ತನ್ನಲ್ಲಿರುವ ಧೈರ್ಯವನ್ನು ಪ್ರದರ್ಶಿಸುವುದಿಲ್ಲ, ಬದಲಿಗೆ ತನ್ನಲ್ಲಿರುವ ಭಯವನ್ನು ವ್ಯಕ್ತಪಡಿಸುತ್ತಾ ತನ್ನನ್ನು ರಕ್ಷಿಸಿಕೊಳ್ಳುತ್ತಿರುತ್ತದೆ. ನಾಯಿಯು ನೀವು ಓಡುವಾಗ ನಿಮ್ಮನ್ನು ಹಿಂದಟ್ಟಿ ಓಡಿಸಿಕೊಂಡು ಬರುತ್ತದೆ. ನೀವು ಅಲ್ಲಿಯೇ ನಿಂತುಕೊಂಡು ಕಲ್ಲನ್ನು ಕೈಗೆ ತೆಗೆದುಕೊಳ್ಳುವಾಗ ನಾಯಿಯು ನಿಮ್ಮನ್ನು ಬಿಟ್ಟು ಓಡಿಹೋಗುತ್ತದೆ. ಬೃಹೃತ್ಗಾತ್ರದ ಆನೆಗಳು ಮಾನುಷ್ಯನ ಅಜ್ಞೆಗೆ ಹೇಗೆ ಭಯಪಡುತ್ತದೆ ಎಂಬುದನ್ನು ನಾವು ಗಮನಿಸುತ್ತೇವೆ. ಅವು ಅಧಿಕವಾದ ಬಾರಗಳನ್ನು ಹೊರುತ್ತವೆ, ಶಕ್ತಿಶಾಲಿಯಾಗಿರುವ ಎತ್ತುಗಳು ನೇಗಿಲ ಸಹಾಯದಿಂದ ಹೊಲವನ್ನು ಉಳುತ್ತವೆ.
ಒಬ್ಬ ಮನುಷ್ಯನು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ, ಆತನು ಪ್ರಾಣಿಗಳ ಮೇಲೆ ಮಾತ್ರ ಅಧಿಕಾರವನ್ನು ಪಡೆಯದೇ ದುರಾತ್ಮಗಳ ಮೇಲೆಯೂ ಅಧಿಕಾರವನ್ನು ಪಡೆಯುತ್ತಾನೆ. ದೇವರು ನಮಗೆ ಹಾವುಗಳನ್ನು ಮತ್ತು ಚೇಳುಗಳನ್ನು ತುಳಿಯಲು ಅಧಿಕಾರವನ್ನು ನೀಡಿದ್ದಾನೆ. ಕರ್ತನು ಹೀಗೆ ಪ್ರಕಟಿಸಿದ್ದಾರೆ ” ಸಿಂಹಸರ್ಪಗಳ ಮೇಲೆ ನಡೆಯುವಿ; ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ”. (ಕೀರ್ತ 91:13)
ಸೈತಾನನಿಗೆ ಎಂದಿಗೂ ಜಯವಾಗುವದಿಲ್ಲ. ಕಲ್ವಾರಿ ಬೆಟ್ಟದಲ್ಲಿ ಕರ್ತನು ಅವನ ತಲೆಯನ್ನು ಜಜ್ಜಿ ಸೋಲಿಸಿದ್ದಾನೆ. ದೇವಕುಮಾರನಾದ ಯೇಸು ಕ್ರಿಸ್ತನು ಸೈತಾನನ ಕಾರ್ಯಗಳನ್ನು ನಿರ್ನಾಮ ಮಾಡಲು ಈ ಲೋಕಕ್ಕೆ ಬಂದನು. (1 ಯೋಹಾ 3:8). ದೇವರ ವಾಕ್ಯ ಹೇಳುತ್ತದೆ: “ಇದಲ್ಲದೇ ಮಕ್ಕಳು ರಕ್ತ ಮಾಂಸಧಾರಿಗಳಾಗಿರುವದರಿಂದ ಆತನೂ ಅವರಂತೆಯೇ ಆದನು. ತನ್ನ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು.” (ಇಬ್ರಿ 2:14-15)
ಪ್ರಿಯ ದೇವರ ಮಕ್ಕಳೇ, ದೇವರು ನಿಮಗೆ ನೀಡುವ ಸ್ವಭಾವಿಕ ಮತ್ತು ದೊರೆತನ ಆಧಿಕಾರದ ಜೊತೆಗೆ ಪವಿತ್ರಾತ್ಮನ ಶಕ್ತಿಯು ಸೇರಿಕೊಳ್ಳುವಾಗ, ನೀನು ದೇವರ ಮಹಿಮೆಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡುವಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಇದಲ್ಲದೇ ನಂಬುವುದರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಿಂದ ಮಾತನಾಡುವರು; ಹಾವುಗಳನ್ನು ಎತ್ತುವರು….” (ಮಾರ್ಕ 16:17-18)
