No products in the cart.
ಮಾರ್ಚ್ 24 – ಪ್ರೀತಿಯು ಬಹು ತಾಳ್ಮೆಯುಳ್ಳದ್ದು
“ಪ್ರೀತಿಯು ಬಹು ತಾಳ್ಮೆಯುಳ್ಳದ್ದು” (೧ ಕೊರಿ ೧೩:೪)
ಈ ವಾಕ್ಯಭಾಗದಲ್ಲಿ ಅಪೋಸ್ತಲನಾದ ಪೌಲನು ಪ್ರೀತಿಯ ಗುಣಲಕ್ಷಣಗಳನ್ನು ಪಟ್ಟಿ ಮಾಡಿದ್ದಾನೆ ಮತ್ತು ೧೫ ಸುಂದರವಾದ ಪ್ರೀತಿಯ ಗುಣಲಕ್ಷಣಗಳನ್ನು ವಿವರಿಸಿದ್ದಾನೆ. ಇವುಗಳು ತೋಟದಲ್ಲಿರುವ ೧೫ ಪರಿಮಳ ಬೀರುವ ಹೂವುಗಳನ್ನು ಹೋಲುತ್ತದೆ. ಅವು ಇಡೀ ತೋಟದಲ್ಲಿ ಸುಗಂಧ ಪರಿಮಳವನ್ನು ಹರಡುತ್ತದೆ. ಒಬ್ಬ ಮನುಷ್ಯನ ಜೀವನದಲ್ಲಿ ಪ್ರೀತಿಯು ಕೃಪೆಯುಳ್ಳ ಗುಣಲಕ್ಷಣವಾಗಿದ್ದು, ಆತನ ಜೀವನವನ್ನು ಮೆಚ್ಚಿಕೆಯ ಪರಿಮಳವಾಗಿ ಮಾಡುತ್ತದೆ.
ಪ್ರೀತಿಯ ಅನೇಕ ಗುಣಲಕ್ಷಣಗಳಲ್ಲಿ ಅತೀ ಮುಖ್ಯವಾದದ್ದು, ಪ್ರೀತಿಯು ಬಹು ತಾಳ್ಮೆಯುಳ್ಳದ್ದು. ಪ್ರೀತಿ ಇರುವಲ್ಲಿ ಒಬ್ಬನು ಎಂತಹ ಕಷ್ಟ ಅಥವಾ ಗಾಯವನ್ನಾದರೂ ತಾಳ್ಮೆಯಿಂದಲೇ ಸಹಿಸಿಕೊಳ್ಳುವನು. ಪ್ರೀತಿಯಿಂದ ಒಬ್ಬನು ತನ್ನ ಕೆನ್ನೆಗೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನು ತೋರಿಸುತ್ತಾನೆ. ಪ್ರೀತಿಯು ದ್ವೇಷವನ್ನು ಸಾಧಿಸುವುದಿಲ್ಲ. ಸಕಲವನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದನ್ನು ಪ್ರೀತಿಯು ಕಲಿಸುತ್ತದೆ. ಅಂತಹ ಸಹಿಸಿಕೊಳ್ಳುವಿಕೆಯು ಬಲಹೀನತೆಯಲ್ಲ. ಅದು ಗೌರವವುಳ್ಳದ್ದು ಮತ್ತು ದೈವೀಕ ಗುಣವನ್ನು ಹೊಂದಿರುವಂತಹದ್ದಾಗಿದೆ.
ಅಬ್ರಹಾಂ ಲಿಂಕನ್‌ರವರಿಗೆ ಬಲಶಾಲಿಯಾದ ರಾಜಕೀಯ ವಿರೋಧಿಯಾಗಿ ಸ್ಟಂಟನ್‌ರವರು ಇದ್ದರು. ಸ್ಟಂಟನ್‌ಲಿಂಕನ್‌ರವರನ್ನು ಸಾರ್ವಜನಿಕವಾಗಿ ಹಿಯಾಳಿಸಿದರು. ಆತನನ್ನು ಒಬ್ಬ ಕೀಲಾದ ಹಾಸ್ಯಗಾರನು ಹಾಗೂ ಕಡಿಮೆ ಬುದ್ಧಿಯುಳ್ಳವನು ಎಂದು ಹಿಯಾಳಿಸಿದರು. ಆತನ ಭಾಷಣ ಮತ್ತು ಬರಹಗಳನ್ನು ಹೀನೈಸಿದನು. ಆದರೂ ಲಿಂಕನ್‌ರವರು ಒಮ್ಮೆಯಾದರೂ ಆತನ ವಿರೋಧವಾಗಿ ಪ್ರತಿಕ್ರಿಯೆ ನೀಡಲಿಲ್ಲ.
ಯುದ್ಧದ ಸಮಯ ಬಂದಾಗ, ಲಿಂಕನ್‌ರವರು ಇದೇ ಸ್ಟಂಟನ್‌ರವರನ್ನು ಯುದ್ಧದ ಕಾರ್ಯದರ್ಶಿಗಳನ್ನಾಗಿ ನೇಮಿಸಿ ಆತನ ಸಾಮರ್ಥ್ಯಗಳನ್ನು ಪ್ರಶಂಸಿದನು. ಈ ಪ್ರೀತಿಯ ಕ್ರಿಯೆಯಿಂದಾಗಿ ಅವನ ಹೃದಯವನ್ನು ಮುರಿಯಲ್ಪಟ್ಟಿತು. ಅಂದಿನಿಂದ ಅವನು ಹೃದಯಪೂರ್ವಕವಾಗಿ ತನ್ನ ದೇಶಕ್ಕಾಗಿ ಹಾಗೂ ಲಿಂಕನ್‌ರವರಿಗಾಗಿ ಕೆಲಸ ಮಾಡಲಾರಂಭಿಸಿದನು. ಲಿಂಕನ್‌ರವರು ಮರಣಹೊಂದಿದಾಗ, ಸ್ಟಂಟನ್‌ರವರು ದುಃಖದಿಂದ ಅಳುತ್ತಾ ಸಾರ್ವಜನಿಕವಾಗಿ ಹೀಗೆ ಘೋಷಿಸಿದನು, ” ಲೋಕವು ಇದುವರೆಗೂ ಕಾಣದೇ ಇರುವ ದೀಮಂತ ನಾಯಕನು ಇಲ್ಲಿ ಶಾಂತವಾಗಿ ಮಲಗಿದ್ದಾನೆ.” ಹೌದು ಪ್ರೀತಿಯು ಬಹುತಾಳ್ಮೆಯನ್ನು ಹೊಂದಿದೆ. ಅದು ಅಳತೆಮಾಡಲಾರದಷ್ಟು ಸಹನೆಯನ್ನು ಮತ್ತು ತಾಳ್ಮೆಯನ್ನು ಹೊಂದಿರುತ್ತದೆ.
ಒಬ್ಬ ಯೌವನಸ್ಥ ಹುಡುಗಿಯು ತ್ಯಾಗ ಪೂರ್ವಕವಾಗಿ ತನ್ನನ್ನು ಪ್ರೀತಿಸುವ ವ್ಯಕ್ತಿಯನ್ನು ವಿವಾಹವಾಗಲು ತಾಳ್ಮೆಯಿಂದ ಕಾಯುತ್ತಿರುತ್ತಾಳೆ. ಒಬ್ಬ ಹೆಂಡತಿಯು ತನ್ನ ಗಂಡನ ಹೃದಯವು ತನ್ನ ಕಡೆಗೆ ತಿರುಗಿಕೊಳ್ಳುತ್ತದೆ ಎಂದು ಕಾತುರದಿಂದ ಕಾಯುತ್ತಿರುತ್ತಾಳೆ. ದೂರದ ದೇಶಕ್ಕೆ ಹೋಗಿರುವ ತಮ್ಮ ತಂದೆಯು ಸುರಕ್ಷಿತವಾಗಿ ಹಿಂತಿರುಗಿ ಬರುವನು ಎಂದು ಮಕ್ಕಳು ಪ್ರೀತಿಯಿಂದ ಕಾಯುತ್ತಿರುತ್ತಾರೆ. ಪ್ರೀತಿಯು ಬಹು ತಾಳ್ಮೆಯುಳ್ಳದ್ದು. ಅದು ನಿರೀಕ್ಷೆ ಮತ್ತು ತಾಳ್ಳೆಯಿಂದ ಕಾಯಬೇಕೆಂದು ಕಲಿಸಿಕೊಡುತ್ತದೆ.
ಯಾಕೋಬನು ರಾಹೇಲಳನ್ನು ಆಳವಾಗಿ ಪ್ರೀತಿಸಿದನು, ಆಕೆಯನ್ನು ಪಡೆದುಕೊಳ್ಳಬೇಕೆಂದು ಆಕೆಗೋಸ್ಕರ ಕೆಲಸಗಾರನಾಗಿ ದುಡಿದನು. ಆತನು ತಾಳ್ಮೆಯುಳ್ಳವನಾಗಿ ೧೪ ವರ್ಷಗಳು ತನ್ನ ಮಾವನ ಸೇವೆಯನ್ನು ಮಾಡಿದನು. ಸತ್ಯವೇದವು ಹೇಳುತ್ತದೆ, ” ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು”. (ಹೋಶೇಯ ೧೨:೧೨)
ಅದೇ ರೀತಿಯಾಗಿ, ನಾವು ಮಾನಸಾಂತರ ಪಡಬೇಕೆಂದು ದೇವರು ನಮ್ಮನ್ನು ಪ್ರೀತಿಸಿ ನಮಗಾಗಿ ಬಹು ತಾಳ್ಮೆಯಿಂದ ಕಾದಿರುತ್ತಾನೆ. ನಮಗಾಗಿ ಪ್ರಾಣವನ್ನೇ ಕೊಟ್ಟಿರುವಾತನಿಗೆ, ಕನಿಕರದ ಕೊರತೆಯು ಉಂಟೋ? ನಮಗಾಗಿ ರಕ್ತವನ್ನು ಸುರಿಸದಾತನು ತನ್ನ ಪ್ರೀತಿಯನ್ನು ಹಿಂತೆಗೆದುಕೊಳ್ಳುತ್ತಾನೋ?
ಪ್ರಿಯ ದೇವರ ಮಕ್ಕಳೇ, ನಮ್ಮ ಕರ್ತನಲ್ಲಿರುವ ಅದೇ ವಿನಯ ಮತ್ತು ಪ್ರೀತಿಯನ್ನು ನಾವು ಸಹ ಬಾಧ್ಯವಾಗಿ ಪಡೆದುಕೊಳ್ಳೋಣವೇ?
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ. “(೧ ಪೇತ್ರ ೩:೯)
