No products in the cart.
ಮಾರ್ಚ್ 20 – ದೈವೀಕ ಪ್ರೀತಿಯನ್ನು ತನ್ನಿರಿ!
“ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ.” (1 ಯೋಹಾ 4:18)
ಭಯವನ್ನು ಹೋಗಲಾಡಿಸುವ ದೇವರ ಶಕ್ತಿಯು ಪ್ರೀತಿಯಲ್ಲಿ ಅಡಕವಾಗಿದೆ. ಆದುದರಿಂದ ನೀವು ಭಯಪಡುವ ಎಲ್ಲಾ ಸಂದರ್ಭಗಳಲ್ಲಿ ನಿಮ್ಮ ಮುಂದೆ ದೈವೀಕ ಪ್ರೀತಿಯನ್ನು ತನ್ನಿರಿ. “ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ದೇವರು ಅವನಲ್ಲಿ ನೆಲೆಗೊಂಡಿದ್ದಾನೆ”. (1 ಯೋಹಾ 4:16)
ಸತ್ಯವೇದವು ಹೇಳುತ್ತದೆ, “ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ. ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾ 4:18,19)
ಸಬ್ಬತ್‌ಶಾಲೆಯಲ್ಲಿ ಇರುವ ಹುಡುಗರು ಮತ್ತು ಹುಡುಗಿಯರಿಗೆ ಒಬ್ಬರು ಪ್ರಶ್ನೆ ಕೇಳಿದರು, “ನೀವು ಒಬ್ಬರೇ ಕೋಣೆಯಲ್ಲಿರುವಾಗ, ತಕ್ಷಣ ಸೈತಾನನು ಬಂದು ಬಾಗಿಲು ತಟ್ಟಿದಾಗ ನೀವು ಏನು ಮಾಡುವಿರಿ? ಕೆಲವು ಹುಡುಗಿಯರು ʼ ನಾವು ತುಂಬಾ ಭಯಪಟ್ಟು ಮಂಚದ ಕೆಳಗೆ ಅಡಗಿಕೊಳ್ಳುತ್ತೇವೆʼ ಅಂದರು. ಇನ್ನೂ ಕೆಲವರು ನಾವು ಬಾಗಿಲು ತೆರೆಯುವುದೇ ಇಲ್ಲ ಎಂದರು, ಇನ್ನೂ ಕೆಲವರು ನಾವು ಸೈತಾನನಿಗೆ ಹೊರಟು ಹೋಗಲು ಆಜ್ಞಾಪಿಸುತ್ತೇವೆ ಅಂದರು. ಆದರೆ ಒಬ್ಬ ಹುಡುಗಿ ಎದ್ದು ನಿಂತುಕೊಂಡು ಧೈರ್ಯದಿಂದ ಉತ್ತರ ನೀಡಿದಳು, “ಸೈತಾನನು ಬಾಗಿಲನ್ನು ತಟ್ಟುವಾಗ, ನಾನು ದೇವರನ್ನು ಬಾಗಿಲು ತೆರೆಯಲು ಬೇಡಿಕೊಳ್ಳುವೆನು, ಆಗ ಸೈತಾನನು ಓಡಿಹೋಗುವನು”. ಎಂತಹ ಅದ್ಭುತವಾದ ಉತ್ತರವಲ್ಲವೇ.
ಯೇಸುಕ್ರಿಸ್ತನನ್ನು ಪ್ರೀತಿಸುವವರು ದೇವರ ಪ್ರೀತಿಯಿಂದ ತುಂಬಲ್ಪಟ್ಟಿರುತ್ತಾರೆ, ಆದಕಾರಣ ಭಯವು ಅವರನ್ನು ಜಯಿಸಲು ಸಾಧ್ಯವಿಲ್ಲ. ಆದುದರಿಂದ ದೇವರ ಪ್ರೀತಿಯನ್ನು ಹೊಂದಿಕೊಳ್ಳಿರಿ. ಸತ್ಯವೇದವು ಹೇಳುತ್ತದೆ, “ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವುದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದಿದೆಯಲ್ಲಾ.” (ರೋಮ 5:5)
ನೀವು ದೇವರ ಪ್ರಸನ್ನತೆಯಲ್ಲಿರುವಾಗ, ಯಾವ ವಿಷಯವಾಗಿಯೂ ಭಯಪಡುವ ಅವಶ್ಯಕತೆಯಿಲ್ಲ. ಕರ್ತನ ಪ್ರಸನ್ನತೆಯಲ್ಲಿ ನೀವು ಇರುವಾಗ ನಿಮ್ಮ ಹೃದಯವು ಶ್ರೇಷ್ಟವಾದ ಧೈರ್ಯದಿಂದ ತುಂಬಿರುತ್ತದೆ. ದೇವರ ಪ್ರಸನ್ನತೆಯು ನಿಮ್ಮ ಸುತ್ತಲೂ ಆವರಿಸಿರುವಾಗ ಸಾವಿರ ದೇವದೂತರು ನಿಮ್ಮ ಜೊತೆ ಇದ್ದಾರೆ ಎಂಬ ಅನುಭವ ಉಂಟಾಗುತ್ತದೆ. ಇಡೀ ಪರಲೋಕವು ನಿನ್ನ ಹಿಂದೆ ಇರುತ್ತದೆ.
ಒಬ್ಬ ಸಾಮಾನ್ಯ ಪೋಲಿಸ್‌ವ್ಯಕ್ತಿಯು ಅಪರಾಧಿಯನ್ನು ಹಿಡಿದುಕೊಳ್ಳಲು ತುಂಬಾ ಪ್ರಯಾಸ ಮತ್ತು ಸಾಹಸಮಯ ಪ್ರಯತ್ನವನ್ನು ಮಾಡುತ್ತಾನೆ, ಕಾರಣ ಇಡೀ ಪೋಲಿಸ್‌ಇಲಾಖೆಯ ಸಿಬ್ಬಂದಿಯು ಆತನ ಹಿಂದೆ ಇದ್ದಾರೆ ಎಂಬ ನಂಬಿಕೆ ಅವನಿಗೆ ಇರುತ್ತದೆ.
ಕರ್ತನು ವಾಗ್ದಾನ ಮಾಡಿ ಹೇಳಿದ್ದೇನಂದರೆ, ” ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನು.” (ಯೆಹೋ 1:5) “ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುವೆನು.” (ಮತ್ತಾ 28:20).
ಪ್ರಿಯ ದೇವರ ಮಕ್ಕಳೇ, ಯಾವಾಗಲೂ ದೇವರ ಪ್ರಸನ್ನತೆ ಮತ್ತು ಅನ್ಯೋನ್ಯತೆಯನ್ನು ಅನುಭವಿಸಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು?” (ಇಬ್ರಿ 13:6).
