No products in the cart.
ಮಾರ್ಚ್ 19 – ಪ್ರೀತಿಯಲ್ಲಿ ನೆಲೆಗೊಳ್ಳು!
“ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ”. (ಯೋಹಾ 15:9-10)
ಆತ್ಮನ ಫಲಗಳಲ್ಲಿ ಶ್ರೇಷ್ಟವಾದ ಫಲ ಪ್ರೀತಿಯಾಗಿದೆ. ಆತ್ಮನ ಫಲಗಳ ಪಟ್ಟಿಯು ಪ್ರೀತಿಯಿಂದ ಪ್ರಾರಂಭವಾಗುತ್ತದೆ. (ಗಲಾತ್ಯ 5:22) ಈ ಪವಿತ್ರವಾದ ಮತ್ತು ಶುದ್ಧವಾದ ಪ್ರೀತಿಯನ್ನು ನಾವು ಪರಿಪೂರ್ಣನಾಗಿರುವ ಯೇಸುಕ್ರಿಸ್ತನಲ್ಲಿ ಮಾತ್ರ ಕಾಣಲು ಸಾಧ್ಯ. ಆತನು ತನ್ನನ್ನೇ ಶಿಲುಬೆಯಲ್ಲಿ ಕಾಣಿಕೆಯಾಗಿ ಅರ್ಪಿಸುವುದರ ಮೂಲಕ ಲೋಕವನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ಸಾಭೀತುಪಡಿಸಿದನು. (ಯೋಹಾ 3:16). ಆದಕಾರಣ ಆತನ ದೈವೀಕ ಪ್ರೀತಿಯಲ್ಲಿ ನೆಲೆಗೊಳ್ಳಿರಿ.
ಯೇಸು ಕ್ರಿಸ್ತನ ಪ್ರೀತಿಯು ತ್ಯಾಗದ ಪ್ರೀತಿಯಾಗಿದೆ. ಆತನ ಬಳಿಗೆ ಬರುವವರನ್ನು ಎಂದಿಗೂ ತಳ್ಳಿಬಿಡುವದಿಲ್ಲ. ಆತನ ಪ್ರೀತಿಯು ನಿಮ್ಮನ್ನು ನಡೆಸುತ್ತದೆ, ಹಾಗೂ ಆ ಪ್ರೀತಿಯೇ ನಿಮ್ಮನ್ನು ಪಾಪದ ಕೆಸರಿನಿಂದ ಮೇಲಕ್ಕೆ ಎತ್ತಿದ್ದು, ಮತ್ತು ನಿರಂತರವಾಗಿ ನಿಮ್ಮನ್ನು ಪ್ರೀತಿಸುತ್ತದೆ. ಸತ್ಯವೇದವು ಹೇಳುತ್ತದೆ, ” ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದಿದೆಯಲ್ಲಾ.” (ರೋಮ 5:5)
ಪ್ರೀತಿ ಇಲ್ಲದಿದ್ದರೆ ಆತ್ಮನ ಫಲಗಳಿಂದ ಯಾವ ಪ್ರಯೋಜನವಾಗುವುದಿಲ್ಲ. ಅಪೋಸ್ತಲನಾದ ಪೌಲನು ಹೀಗೆ ಹೇಳುತ್ತಾನೆ, ” ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ. ನನಗೆ ಪ್ರವಾಧನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿಧ್ಯೆಯು ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.” (1 ಕೊರಿ 13:1-2).
ಆದ ಕಾರಣ ಪ್ರೀತಿಯಲ್ಲಿ ನೆಲೆಗೊಳ್ಳಿರಿ.
ಪ್ರೀತಿ ಇಲ್ಲದೇ ಮಾಡುವ ಸೇವೆಯು ಬರಿದಾದ ಪ್ರದರ್ಶನವಾಗಿದೆ. ಪ್ರೀತಿ ಇಲ್ಲದ ಹೃದಯವು ಬಂಜೆತನದಿಂದ ಕೂಡಿದ ಹೃದಯವಾಗಿದೆ. ಕಡೆಯ ದಿನಗಳಲ್ಲಿ ” ಅಧರ್ಮವು ಹೆಚ್ಚಾಗುವದರಿಂದ ಬಹುಜನರ ಪ್ರೀತಿಯು ತಣ್ಣಗಾಗಿಹೋಗುವದು.” (ಮತ್ತಾ 24:12). ನಿಮ್ಮ ಪ್ರೀತಿಯು ತಣ್ಣಗಾಗಿ ನಾಶವಾಗದೇ ಇರಲಿ. ನಿಮ್ಮಲ್ಲಿ ಅಡಕವಾಗಿರುವ ಪ್ರೀತಿಯ ಬೆಳಕು ಆರದಂತೆ ಅದನ್ನು ನಿರಂತರವಾಗಿ ಉರಿಸುತ್ತಿರಿ.
“ಪ್ರೀತಿಯು ಮರಣದಷ್ಟು ಬಲವಾಗಿದೆ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯು ಬೆಂಕಿಯ ಉರಿ, ಅದು ಯೆಹೋವನ ರೋಷಾಗ್ನಿಯು. ಜಲದ ರಾಶಿಗಳೂ ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳಿಗೂ ಅದನ್ನು ಮುಣುಗಿಸಲು ಶಕ್ತಿಯಿಲ್ಲ. ಒಬ್ಬನು ತನ್ನ ಮನೆಮಾರನ್ನೆಲ್ಲಾ ಕೊಟ್ಟು ಪ್ರೀತಿಯನ್ನು ಪಡೆಯಲು ಯತ್ನಿಸಿದರೆ ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.” (ಪರಮಗೀತೆ (8:6-7)
ಯೇಸು ಕ್ರಿಸ್ತನು ಸ್ವತಃ ಪ್ರೀತಿಗೆ ವ್ಯಾಖ್ಯಾನವನ್ನು ನೀಡಿದ್ದಾರೆ. ಆತನಲ್ಲಿ ಮಾತ್ರವೇ ನಾವು ಪರಿಪೂರ್ಣ ಪ್ರೀತಿಯನ್ನು ಕಾಣುತ್ತೇವೆ. ದೇವರ ವಾಕ್ಯ ಹೀಗೆ ಪ್ರಕಟಿಸುತ್ತದೆ, “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮ 5:8)
ಯೇಸುಕ್ರಿಸ್ತನ ಕರುಣೆಯ ನೋಟದಲ್ಲಿ, ಆತನ ಮಾತುಗಳಲ್ಲಿ, ಕ್ರಿಯೆಗಳಲ್ಲಿ ಮತ್ತು ಆತನ ಬೋಧನೆಯಲ್ಲಿ ನಾವು ಪ್ರೀತಿಯನ್ನು ಕಾಣುತ್ತೇವೆ. ಕಲ್ವಾರಿ ಬೆಟ್ಟದ ಶಿಲುಬೆಯಲ್ಲಿ ಸುರಿದ ಪವಿತ್ರ ರಕ್ತವೆಂಬ ಪ್ರವಾಹವು ನಮ್ಮ ಹೃದಯಗಳಲ್ಲಿ ತುಂಬಿದೆ.
ಪ್ರಿಯ ದೇವರ ಮಕ್ಕಳೇ ಪ್ರೀತಿಯಲ್ಲಿ ನೆಲೆಗೊಳ್ಳಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಯಿತು.” (1 ಯೋಹಾ 4:9)
