No products in the cart.
ಫೆಬ್ರವರಿ 25 – ಹೆಸರು ಹೇಳಿ ಕರೆದರು!
“ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು ಅವನು ದುಃಖಧ್ವನಿಯಿಂದ ದಾನಿಯೇಲನನ್ನು ಕೂಗಿ – ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸ ಶಕ್ತನಾದನೋ ಎಂದು ಕೇಳಲು.” (ದಾನಿ 6:20)
ದೇವರು ನಮ್ಮನ್ನು ಹೆಸರಿಡಿದು ಕರೆಯುವನು. ನಾವು ಲೋಕದಲ್ಲಿ ಹುಟ್ಟುವದಕ್ಕಿಂತ ಮೊದಲು, ನಾವು ಇನ್ನೂ ತಾಯಿಯ ಗರ್ಭದಲ್ಲಿ ಇರುವಾಗಲೇ ದೇವರು ನಮ್ಮನ್ನು ಮುಂಚಿತವಾಗಿಯೇ ತಿಳಿದುಕೊಂಡಿದ್ದನು ಮತ್ತು ಆತನಿಗಾಗಿ ಆರಿಸಿಕೊಂಡಿದ್ದಾನೆ. ಆತನು ನಮ್ಮ ಹೆಸರು ಕರೆಯುವಾಗ, ನಮ್ಮ ಇಡೀ ಜೀವನವು ದೈವೀಕ ಆನಂದದಿಂದ ತುಂಬಿರುತ್ತದೆ.
ದಾನಿಯೇಲನ ಪೋಷಕರು ಆತನಿಗೆ ಸುಂದರವಾದ ಹೆಸರನ್ನು ನೀಡಿದ್ದರು. ದಾನಿಯೇಲ ಪದದ ಅರ್ಥವು ” ದೇವರು ನನ್ನ ನ್ಯಾಯಾಧಿಪತಿ.” ಪ್ರತಿ ಸಾರಿಯೂ ದಾನಿಯೇಲನು ಈ ಹೆಸರನ್ನು ಕೇಳಿಸಿಕೊಳ್ಳುವಾಗ, ಪರಿಶುದ್ಧವಾದ ಗೌರವವು ಆತನ ಮನಸ್ಸಿನಲ್ಲಿ ಮೂಡಿರಬಹುದು. ಅದರ ಆಲೋಚನೆ ಏನಂದರೆ ” ನನ್ನ ಜೀವನವನ್ನು ನ್ಯಾಯತೀರ್ಪು ಮಾಡುವ ದೇವರು ಇದ್ದಾನೆ, ಆದಕಾರಣ ನಾನು ಭಯಭಕ್ತಿಯಿಂದ ಇರಬೇಕು”. ಈ ಆಲೋಚನೆಯು ಆತನ ಹೃದಯವನ್ನು ನಿಜವಾಗಿಯೂ ರೂಪಾಂತರ ಪಡಿಸಿರುತ್ತದೆ.
ಆದರೆ ದಾನಿಯೇಲನನ್ನು ಬ್ಯಾಬಿಲೋನಿಗೆ ಕರೆದುಕೊಂಡು ಬಂದಾಗ ಅರಸನು ಆತನಿಗೆ ಬೇಲ್ತೆಶಚ್ಚರ್‌ಎಂಬ ಹೆಸರನ್ನು ಕೊಟ್ಟನು. ಅದರ ಅರ್ಥ “ಬಾಳನು ನನ್ನನ್ನು ಸಂರಕ್ಷಿಸುತ್ತಾನೆ, ಎಂಬುದಾಗಿ ಆದರೂ ಆ ಹೆಸರು ತುಂಬಾ ದಿನ ಉಳಿಯಲಿಲ್ಲ.
ದಾನಿಯೇಲನು ತನ್ನ ಮೂಲ ಹೆಸರನ್ನು ಹೊಂದಿಕೊಂಡು ಅದರ ಪ್ರಕಾರ ಜೀವಿಸಿದನು. ದೇವರು ನನಗೆ ನ್ಯಾಯಾಧೀಶನು ಎಂಬ ಆಳವಾದ ಅರಿವಿನೊಂದಿಗೆ ಜೀವಿಸಿದನು.
ಅರಸನಾದ ದಾರ್ಯುವೇಷನು ದುಃಖದಿಂದ ಹೀಗೆ ಕರೆದನು, “ದಾನಿಯೇಲನೇ ಜೀವ ಸ್ವರೂಪನಾದ ದೇವರ ಸೇವಕನೇ.” ಜೀವಸ್ವರೂಪನಾದ ದೇವರ ಸೇವಕನೇ ಎಂದು ಅರಸನು ಉಚ್ಚರಿಸಿದಾಗ, ದಾನಿಯೇಲನ ಹೃದಯವು ಎಷ್ಟು ಸಂತೋಷದಿಂದ ತುಂಬಿತ್ತು ಎಂದು ಊಹಿಸಿಕೊಳ್ಳಿರಿ.
ಜನರು ನಿಮ್ಮ ಹೆಸರನ್ನು ಕೇಳಿಸಿಕೊಳ್ಳುವಾಗ, ಅವರೂ ಸಹ ನೀವು ಜೀವಸ್ವರೂಪನಾದ ದೇವರ ಮಕ್ಕಳು ಎಂದು ನಿಮ್ಮನ್ನು ಗುರುತಿಸುವರು. ನೀವು ನಿರಂತರವಾಗಿ ಆರಾಧಿಸುವವರು ಎಂದು ತಿಳಿದುಕೊಳ್ಳುವರು. ಜನರು ನಿಮ್ಮ ಹೆಸರನ್ನು ಕರೆಯುವಾಗ ಸಾಧಾರಣವಾಗಿ ಕರೆಯದೇ ಅದರ ಜೊತೆಗೆ ನೀವು ದೇವರ ಮಗನು ಅಥವಾ ಮಗಳು ಎಂದು ಕರೆಯುವಾಗ ನೀವು ಅತೀ ಹೆಚ್ಚು ಸಂತೋಷದಿಂದ ಕೂಡಿರುತ್ತೀರಿ.
ದೇವರು ದಾನೀಯೇಲನ್ನು ಕರೆಯುವಾಗ ಹೇಗೆ ಕರೆಯುತ್ತಾನೆ ಎಂಬುದನ್ನು ದೇವರ ವಾಕ್ಯದಲ್ಲಿ ನೋಡಿರಿ, ” ದಾನಿಯೇಲನೇ, ಅತಿಪ್ರಿಯನೇ, ನಾನು ನುಡಿಯುವ ಮಾತುಗಳನ್ನು ಗ್ರಹಿಸು; ” (ದಾನಿ 10:11) ಹಾಗೂ ” ಅತೀ ಪ್ರಿಯನೇ, ಭಯಪಡಬೇಡ; ನಿನಗೆ ಸಮಾಧಾನವಿರಲಿ” (ದಾನಿ10:19) ಮತ್ತೊಮ್ಮೆ , “ನೀನು ದೇವರಿಗೆ ಅತೀ ಪ್ರಿಯ, ” (ದಾನಿ 9:23) ದೇವರು ನಮಗೆ ಎಂತಹ ಮಹಿಮೆಯ ಕರೆಯುವಿಕೆಯನ್ನು ನೀಡಿದ್ದಾನೆ!
ಪ್ರಿಯ ದೇವರ ಮಕ್ಕಳೇ, ದೇವರು ಸ್ವತಃ ನಿಮ್ಮ ಹೆಸರಿಡಿದು ಪ್ರೀತಿಯಿಂದ ಕರೆಯುವಾಗ ಆ ಕ್ಷಣ ನಿಮಗೆ ಎಷ್ಟು ಸಂತೋಷವಾಗುತ್ತದೆಯಲ್ಲವೇ? ” ನನ್ನ ಪ್ರಿಯನು” ನೀವು ಆತನಿಗೆ ಮೆಚ್ಚುವ ರೀತಿಯಲ್ಲಿ ಜೀವಿಸುವಿರಾ? ಆಗ ಮಾತ್ರವೇ ದೇವರು ನಿಮ್ಮ ಹೆಸರನ್ನು ಹಿಡಿದು ಕರೆಯುವನು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ನಮ್ಮ ಯೆಹೋವ ದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ. ನಾವು ಕೈಹಾಕಿದ ಕೆಲಸವನ್ನು ನಮಗೆ ಸಫಲಪಡಿಸು.” (ಕೀರ್ತ 90:17)
