No products in the cart.
ಫೆಬ್ರವರಿ 10 – ನನ್ನನ್ನು ಬಿಟ್ಟು!
“ನಾನು ದಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.” (ಯೋಹಾ ೧೫:೫)
ಪ್ರಾರ್ಥನೆ ಮಾಡುವ ದೇವರ ಮಕ್ಕಳು ಯಾವಾಗಲೂ ದೇವರೊಬ್ಬರನ್ನೇ ಅವಲಂಬಿಸಿರುವದನ್ನು ಕಲಿತಿರುತ್ತಾರೆ. ಒಮ್ಮೆ ಜಾರ್ಜ ಮುಲ್ಲರ್ರವರು ನಡೆಸುತ್ತಿದ್ದ ಅನಾಥಾಶ್ರಮಕ್ಕೆ ಸಹಾಯ ಮಾಡುವ ಸಮಿತಿಯ ಸದಸ್ಯರು ಹೀಗೆ ಆಲೋಚಿಸಿದರು, ಆನಾಥಾಶ್ರಮ ನಡೆಸಲು ಹಣಕಾಸು, ಮೂಲ ಸಂಪನ್ಮೂಲಗಳು ಮತ್ತು ಪ್ರಭಾವಭೀರುವ ಜನರ ಅಗತ್ಯತೆಯಿದೆ. ಅದಕ್ಕಾಗಿ ಅವರು ತುಂಬಾ ಪ್ರಯತ್ನವನ್ನು ಪಟ್ಟರು, ಶ್ರೀಮಂತ ವ್ಯಕ್ತಿಗಳನ್ನು ಭೇಟಿ ಮಾಡಿದರು ಆದರೆ ಯಾರೂ ಅವರಿಗೆ ಸಹಾಯ ಮಾಡಲಿಲ್ಲ.
ಅವರು ನಿರಾಶೆಯಿಂದ ಹಿಂತಿರುಗಿ ಬಂದಾಗ ಜಾರ್ಜ ಮುಲ್ಲರ್ರವರು ಅವರಿಗೆ “ನಾವು ದೇವರ ಮೇಲೆ ಮಾತ್ರ ಅವಲಂಭಿತರಾಗಿರಬೇಕು, ನಾವು ಸ್ಥಿರಚಿತ್ತರಾಗಿ ಪ್ರಾರ್ಥನೆ ಮಾಡಲು ಪ್ರಾರಂಭಿಸಬೇಕು.” ನಂತರ ಅವರು ಸಮಿತಿಯನ್ನು ಒಗ್ಗೂಡಿಸಿ ಅವರೊಂದಿಗೆ ಪ್ರಾರ್ಥಿಸಲಾರಂಭಿಸಿದರು. ಅವರು ಪ್ರಾರ್ಥಿಸಿದಾಗ ದೇವರು ಪರಲೋಕದ ಬಾಗಿಲುಗಳನ್ನು ತೆರೆದನು. ಸಹಾಯ ಮತ್ತು ಒದಗಿಸುವಿಕೆಯು ನಿರೀಕ್ಷಿಸದ ಸ್ಥಳಗಳಿಂದ ಹರಿದು ಬಂತು.
ಈ ಸತ್ಯವನ್ನು ನಾವು ನಮ್ಮ ಜೀವನದ ಪ್ರಾರಂಭದಲ್ಲಿಯೇ ಅರ್ಥಮಾಡಿಕೊಂಡಿದ್ದರೆ, ಅನೇಕ ನಿರಾಶೆಗಳನ್ನು ತಡೆಯಬಹುದಾಗಿತ್ತು. ಸೃಷ್ಟಿಕರ್ತನೂ, ಸರ್ವಶಕ್ತನೂ ಆಗಿರುವ ದೇವರಮುಂದೆ ನಿಂತುಕೊಳ್ಳುವ ವ್ಯಕ್ತಿಯು ಸಾಧರಣವಾದ ಗುರುತಿಸುವಿಕೆ ಇಲ್ಲದ ಜನರ ಬಳಿಗೆ ಹೋಗುವ ಅಗತ್ಯತೆ ಇರುವುದಿಲ್ಲ.
ಯಾಕೋಬನ ಜೀವನವನ್ನು ಕೆಲವು ನಿಮಿಷಗಳು ಆಲೋಚಿಸಿರಿ. ಆತನು ಯೌವನಸ್ಥನಾಗಿರುವಾಗ ತನ್ನ ಸ್ವಂತ ಜ್ಞಾನದ ಮೇಲೆ ಅವಲಂಭಿತನಾಗಿದ್ದನು. ಆತನು ತನ್ನ ಸಹೋದರನಾದ ಏಸಾವನನ್ನು ಮೋಸದಿಂದ ವಂಚಿಸಿ ಚೊಚ್ಚಲ ಹಕ್ಕನ್ನು ಪಡೆದುಕೊಂಡನು. ಏಸಾವನು ೪೦೦ ಜನರೊಂದಿಗೆ ತನ್ನ ವಿರುದ್ದವಾಗಿ ಬರುತ್ತಿದ್ದಾರೆ ಎಂದು ಅರಿತ ಯಾಕೋಬನು ಭಯಪಟ್ಟನು, ಆತನ ಹೃದಯವು ನಡುಗಳು ಪ್ರಾರಂಭಿಸಿತು. ಏಸಾವನು ನನ್ನನ್ನು ನಾಶಪಡಿಸುತ್ತಾನೆ ಎಂದು ಹೆದರಿದನು.
ಇಂತಹ ಕಷ್ಟಕರವಾದ ಪರಿಸ್ಥಿತಿಯಲ್ಲಿ ಆತನಿಗೆ ಯಾವ ಮನುಷ್ಯರ ಸಹಾಯವು ದೊರಕಲಿಲ್ಲ. ಆತನ ಸಂಬಂಧಿಕರೂ ಸಹ ಆವನ ಸಂಗಡ ನಿಂತುಕೊಳ್ಳಲಿಲ್ಲ. ಆತನಿಗೆ ದೇವರನ್ನು ಅವಲಂಭಿಸುವನ್ನು ಬಿಟ್ಟು ಬೇರೆ ಪರ್ಯಾಯ ಮಾರ್ಗವಿರಲಿಲ್ಲ. ಯಾಕೋಬನು ಪ್ರಾರ್ಥನೆಯಲ್ಲಿ ದೇವರನ್ನು ಕೂಗಿದನು. ಇಡೀ ರಾತ್ರಿ ದೇವರೊಂದಿಗೆ ಪ್ರಾರ್ಥನೆಯಲ್ಲಿ ಹೋರಾಡಿದನು. ಆ ಮುಖಾಮುಖಿಯ ಅನುಭವವು ಯಾಕೋಮನ ಜೀವನವನ್ನೇ ಬದಲಾಯಿಸಿತು.
ದೇವರ ವಾಕ್ಯ ಹೇಳುತ್ತದೆ: ” ಯಾಕೋಬನು ಒಂಟಿಗನಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. ಆ ಪುರುಷನು ತಾನು ಗೆಲ್ಲದೆ ಇರುವದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು. ಆ ಪುರುಷನು – ನನ್ನನ್ನು ಬಿಡು. ಬೆಳಗಾಗುತ್ತದೆ ಅನ್ನಲು, ಯಾಕೋಬನು – ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವದಿಲ್ಲ ಅಂದನು.: (ಆದಿ ೩೨:೨೪-೨೬)
ಮತ್ತೆ ಹೀಗೆ ಓದುತ್ತೇವೆ: ” ಯಾಕೋಬನ ಗರ್ಭದಲ್ಲಿ ಅಣ್ಣನನ್ನು ವಂಚಿಸಿದನು; ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು; ಹೌದು, ದೇವದೂತನ ಸಂಗಡ ಹೋರಾಡಿ ಗೆದ್ದನು; ಅಳುತ್ತಾ ಆತನ ಕೃಪೆಯನ್ನು ಬೇಡಿಕೊಂಡನು. ಯೆಹೋವನೆಂಬ ಸೇನಾಧೀಶ್ವನಾದ ದೇವರು ಅವನನ್ನು ಬೇತೇಲಿನಲ್ಲಿಯೂ ಕಂಡು ಅಲ್ಲಿ ನಮ್ಮೊಡನೆ ಮಾತನಾಡಿದನು.” (ಹೋಶೇಯ ೧೨:೩-೪)
ಪ್ರಿಯ ದೇವರ ಮಕ್ಕಳೇ, ನಾವು ದೇವರ ಮೇಲೆ ಸಂಪೂರ್ಣವಾಗಿ ಅವಲಂಭಿತರಾಗಿರೋಣ. ನಮ್ಮ ನಂಬಿಕೆಗೆ ಹಾಗೂ ಭರವಸೆಗೆ ಆತನೇ ಆಧಾರವಾಗಿದ್ದಾನೆ.
ಮೂಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವನು; ನನ್ನ ಯಜ್ಷವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ ಯಜ್ಞಗಳೂ ನನಗೆ ಮೆಚ್ಚಿಕೆಯಾಗುವವು.. ನನ್ನ ಆಲಯವು ಎಲ್ಲಾ ಜನಾಂಗಗಳಿಗೆ ಪ್ರಾರ್ಥನಾಲಯವೆನಿಸಿಕೊಳ್ಳುವದು” (ಯೆಶಾ ೫೬:೭)
