No products in the cart.
ಫೆಬ್ರವರಿ 07 – ಯೇಸುಕ್ರಿಸ್ತನ ವೈಯಕ್ತಿಕ ಪ್ರಾರ್ಥನೆ !
“ಆದರೆ ಇವರಿಗೋಸ್ಕರ ಮಾತ್ರವಲ್ಲದೇ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ.” (ಯೋಹಾ ೧೭:೨೦)
ಇಡೀ ಹೊಸಒಡಂಬಡಿಕೆಯಲ್ಲಿ ಯೇಸುಕ್ರಿಸ್ತನ ವೈಯಕ್ತಿಕ ಪ್ರಾರ್ಥನೆಯನ್ನು ಸೂಕ್ಷ್ಮವಾಗಿ ಗಮನಿಸುವಾಗ, ಅತೀ ಉದ್ದವಾದ ವೈಯಕ್ತಿಕ ಪ್ರಾರ್ಥನೆಯನ್ನು ನಾವು ಯೋಹಾನ ೧೭ನೇ ಅಧ್ಯಾಯದಲ್ಲಿ ಕಾಣುತ್ತೇವೆ. ಈ ಆಧ್ಯಾಯವನ್ನು ಓದುವಾಗ ನಮಗೆ ಹೊಸ ಬಲ ಮತ್ತು ಚೈತನ್ಯ ಉಂಟಾಗುತ್ತದೆ. ಹಾಗೂ ನಾವು ಹೇಗೆ ಪ್ರಾರ್ಥಿಸಬೇಕೆಂಂದು ಕಲಿಸಿ, ಸೂಕ್ತ ಮಾದರಿಯನ್ನು ತೊರಿಸುತ್ತದೆ.
ವೈಯಕ್ತಿಕ ಪ್ರಾರ್ಥನೆಯು ದೇವರೊಂದಿಗೆ ಉತ್ತಮ ಬಾಂದವ್ಯವನ್ನು ಹಾಗೂ ಅನ್ಯೋನ್ಯತೆಯನ್ನು ಹೊಂದಿಕೊಳ್ಳಲು ಸಹಾಯಮಾಡುತ್ತದೆ.
ಪ್ರಾರ್ಥನೆಯು ದೇವರ ಮುಂದೆ ನಮ್ಮ ಹೃದಯವನ್ನು ಹೊಯ್ದುಬಿಡುವ ಸ್ಥಳವಾಗಿದೆ. ಪ್ರಾರ್ಥನೆಯೆಂದರೆ ನಮ್ಮ ಚಿಂತೆ, ಭಯವನ್ನು ಕರ್ತನ ಪಾದಗಳ ಸಮ್ಮುಖದಲ್ಲಿ ಒಪ್ಪಿಸುವಂತಹದ್ದಾಗಿದೆ.
ದೇವರ ವಾಕ್ಯ ಹೇಳುತ್ತದೆ, “ಜನರೇ, ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ; ದೇವರು ನಮ್ಮ ಆಶ್ರಯವು.” (ಕೀರ್ತ ೬೨:೮) ” ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು; ನನ್ನ ಕಷ್ಟವನ್ನು ಆತನಿಗೆ ಅರಿಕೆ ಮಾಡುವೆನು;” (ಕೀರ್ತ ೧೪೨:೨). ” ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (೧ ಪೇತ್ರ ೫:೭).
ನಾವು ಯೇಸುಕ್ರಿಸ್ತನ ಪ್ರಾರ್ಥನೆಯನ್ನು ಹತ್ತಿರದಿಂದ ಗಮನಿಸುವಾಗ, ಆತನು ತನ್ನ ಜೊತೆಯಲ್ಲಿದ್ದ ಶಿಷ್ಯರಿಗಾಗಿ ಮಾತ್ರವೇ ಪ್ರಾರ್ಥಿಸದೇ ಈ ದಿನಗಳಲ್ಲಿ ಜೀವಿಸುತ್ತಿರುವ ನಮಗಾಗಿಯೂ ಸಹ ಪ್ರಾರ್ಥಿಸಿದರು.
ಮೇಲೆ ತಿಳಿಸಲ್ಪಟ್ಟ ವಾಕ್ಯವನ್ನು ಪುನಃ ಓದಿರಿ, ಯೇಸು ಹೇಳಿದರು ” ಇವರಿಗೋಸ್ಕರ ಮಾತ್ರವಲ್ಲದೇ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ.” ಇದರಲ್ಲಿ ನೀವು ಮತ್ತು ನಾವು ಸಹ ಸೇರಿಕೊಂಡಿದ್ದೇವಾ?
ನಮಗಾಗಿ ಪ್ರಾರ್ಥಿಸಿದ ಯೇಸು ಕ್ರಿಸ್ತನು ಇಂದು ನಮಗಾಗಿಯೂ ಸಹ ಪ್ರಾರ್ಥಿಸುತ್ತಿದ್ದಾನೆ. ದೇವರ ವಾಕ್ಯ ಹೇಳುತ್ತದೆ ” ಹಾಗೆ ಪವಿತ್ರಾತ್ಮನು ಸಹ ನಮ್ಮ ಅಶಕ್ತಿಯನ್ನು ನೋಡಿ ಸಹಾಯಮಾಡುತ್ತಾನೆ. ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ.” (ರೋಮ ೮:೨೬)
ಅಪೋಸ್ತಲನಾದ ಪೌಲನು ಯೇಸು ಕ್ರಿಸ್ತನ ಮಧ್ಯವರ್ತಿ ಪ್ರಾರ್ಥನೆಯನ್ನು ಅರ್ಥಮಾಡಿಕೊಂಡು ಹೀಗೆ ಹೇಳಿದ್ದಾರೆ ” ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೇ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.” (ರೋಮ ೮:೩೪)
ಆದುದರಿಂದ, ಎಂದಿಗೂ ಕುಗ್ಗಿಸಲ್ಪಟ್ಟವರಾಗಿ ಯೋಚಿಸಬೇಡಿರಿ, ” ನನಗಾಗಿ ಪ್ರಾರ್ಥಿಸುವವರು ಯಾರೂ ಇಲ್ಲ”, “ನನ್ನ ಭಾರವನ್ನು ಯಾರು ಹೊರುತ್ತಾರೆ” ಆಥವಾ ” ನನ್ನ ಕಣ್ಣೀರನ್ನು ಯಾರು ಒರೆಸುತ್ತಾರೆ ಎಂದು ಚಿಂತಿಸಬೇಡಿರಿ.
ಪ್ರಿಯ ದೇವರ ಮಕ್ಕಳೇ ಈ ದಿನದಲ್ಲಿಯೂ ಸಹ ಯೇಸು ಕ್ರಿಸ್ತನು ತಂದೆಯ ಬಲಗಡೆಯಲ್ಲಿ ಕುಳಿತುಕೊಂಡು, ಮಾತಿಲ್ಲದವನಾಗಿ ನರಳಾಟದಿಂದ ನಮಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿಮ್ಮನ್ನು ಗೋದಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು; ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು ಎಂದು ಹೇಳಿದರು.: (ಲೂಕ ೨೨:೩೧-೩೨)
