No products in the cart.
ಫೆಬ್ರವರಿ 01 – ವೈಯಕ್ತಿಕ ಪ್ರಾರ್ಥನೆ!
” ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು.” (ಮಾರ್ಕ 1:35)
ನಿಮಗೆ ವೈಯಕ್ತಿಕ ಪ್ರಾರ್ಥನೆ ತುಂಬಾ ಅವಶ್ಯವಾಗಿ ಬೇಕು. ನಿಮಗೆ ದೇವರೊಂದಿಗೆ ಆಳವಾದ ಸಂಬಂಧವಿರಬೇಕು. ನಿಮಗೆ ಕ್ರಿಸ್ತನೊಂದಿಗೆ ಅಧಿಕ ಬಾಂಧವ್ಯದಿಂದ ಕೂಡಿದ ಅನ್ಯೋನ್ಯತೆ ಇರಬೇಕು. ಆದಕಾರಣ ಈ ತಿಂಗಳ ಪ್ರಾರಂಭದಲ್ಲಿ ವೈಯಕ್ತಿಕ ಪ್ರಾರ್ಥನೆಗೆ ಸಮಯ ಕೊಡುವದಕ್ಕಾಗಿ ಒಂದು ದೃಢವಾದ ತೀರ್ಮಾನವನ್ನು ಮಾಡಿರಿ.
ಯೇಸುಕ್ರಿಸ್ತನೂ ಸಹ ವೈಯಕ್ತಿಕ ಪ್ರಾರ್ಥನೆ ಮಾಡುತ್ತಿದ್ದನು. ಆತನು ತನ್ನ ತಂದೆಯ ಸಂಗಡ ಖಾಸಗಿಯಾಗಿ ಅನ್ಯೋನ್ಯತೆಯನ್ನು ಹೊಂದಿದ್ದನು. ಯೇಸು ತನ್ನನ್ನು ಗುಂಪಿನ ಜನರಿಂದ, ಸಮಾಜದಿಂದ ಹಾಗೂ ತನ್ನ ಆಪ್ತವಲಯದ ಪ್ರಿಯ ಶಿಷ್ಯರಿಂದಲೂ ತನ್ನನ್ನು ಬೇರ್ಪಡಿಸಿಕೊಂಡು ಮುಂಜಾನೆಯಲ್ಲಿಯೇ ಏಕಾಂತವಾದ ಸ್ಥಳವನ್ನು ಆರಿಸಿಕೊಂಡು ವೈಯಕ್ತಿಕ ಪ್ರಾರ್ಥನೆಯನ್ನು ಮಾಡುತ್ತಿದ್ದನು.
ಸತ್ಯವೇದವು ಹೇಳುತ್ತದೆ ” ಆದರೂ ಆತನ ಸುದ್ಧಿಯು ಮತ್ತಷ್ಟು ಹಬ್ಬಿತು; ಮತ್ತು ಜನರು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ತಮ್ಮ ಜಾಡ್ಯಗಳನ್ನು ವಾಸಿ ಮಾಡಿಸಿಕೊಳ್ಳುವದಕ್ಕೂ ಗುಂಪುಗುಂಪಾಗಿ ನೆರೆದರು. ಆತನಾದರೋ ಅರಣ್ಯಪ್ರದೇಶಗಳಿಗೆ ಹೋಗಿ ದೇವರ ಪ್ರಾರ್ಥನೆಯನ್ನು ಮಾಡುತ್ತಿದ್ದನು.” (ಲೂಕ 5:15-16)
ಆಗಿನ ಕಾಲದಲ್ಲಿ ಆತನು ಪ್ರಾರ್ಥನೆಗಾಗಿ ಬೆಟ್ಟದ ಮೇಲೆ ಹೋಗುತ್ತಿದ್ದರು. ಇಡೀ ರಾತ್ರಿಯೆಲ್ಲಾ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. (ಮಾರ್ಕ 6:46). ಮತ್ತೆ ನಾವು ಹೀಗೆ ಓದುತ್ತೇವೆ ” ಇದು ಆದ ಕೂಡಲೇ ಆತನು ತನ್ನ ಶಿಷ್ಯರಿಗೆ – ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ಮುಂದಾಗಿ ಆಚೆದಡಕ್ಕೆ ಹೋಗಿರಿ ಎಂದು ಬಲವಂತ ಮಾಡಿದನು, ಆತನು ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟ ಮೇಲೆ ಪ್ರಾರ್ಥನೆ ಮಾಡುವದಕ್ಕೆ ಬೆಟ್ಟವನ್ನು ಹತ್ತಿದನು. ಮತ್ತು ಹೊತ್ತು ಮುಳುಗಿದ ಮೇಲೆ ಒಬ್ಬನೇ ಅಲ್ಲಿ ಇದ್ದನು.” (ಮತ್ತಾ 14:23-24)
ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ಯೇಸುಕ್ರಿಸ್ತನ ವೈಯಕ್ತಿಕ ಪ್ರಾರ್ಥನೆಗೆ ಹೆಚ್ಚು ಪ್ರಾಧ್ಯಾನ್ಯತೆ ನೀಡುವುದನ್ನು ನಾವು ಗಮನಿಸುತ್ತೇವೆ. ವೈಯಕ್ತಿಕ ಪ್ರಾರ್ಥನೆಯು ನಮ್ಮ ಜೀವನದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಕಾರ್ಯವಾಗಿದೆ.
ನಮ್ಮ ಆಂತರ್ಯದ ಮನುಷ್ಯನು ಹೊಸ ಬಲವನ್ನು ಪಡೆದುಕೊಳ್ಳಲು ವೈಯಕ್ತಿಕ ಪ್ರಾರ್ಥನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಮುಂಜಾನೆಯಲ್ಲಿ ವೈಯಕ್ತಿಕ ಪ್ರಾರ್ಥನೆಯ ಮೂಲಕ ದೇವರ ಅನ್ಯೋನ್ಯತೆಯನ್ನು ಹೊಂದಿಕೊಳ್ಳುವವರು ದೈವೀಕ ಮಾರ್ಗದರ್ಶನವನ್ನು ಮಾತ್ರವೇ ಹೊಂದಿಕೊಳ್ಳದೇ ಪ್ರತೀ ದಿನ ಜೀವನದಲ್ಲಿ ಎದುರಿಸುವ ಎಲ್ಲಾ ಸಮಸ್ಯೆಗಳನ್ನು ಜಯಿಸಲು ದೇವರ ಕೃಪೆ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾರೆ.
ಈ ದಿನಮಾನಗಳಲ್ಲಿ ಜನರು ಸಾರ್ವಜನಿಕ ಕೂಟಗಳಲ್ಲಿ, ಸಭೆಯ ಕೂಟಗಳಲ್ಲಿ, ಮತ್ತು ಗುಂಪು ಕೂಟಗಳಲ್ಲಿ ಪ್ರಾರ್ಥಿಸಲು ಹಾತೋರೈಯುತ್ತಾರೆ. ಆದರೂ ತಮ್ಮ ವೈಯಕ್ತಿಕ ಪ್ರಾರ್ಥನೆಯಲ್ಲಿ ಸಂತೋಷವಾಗಿ ಪ್ರಾರ್ಥಿಸಲು ತುಂಬಾ ಕಷ್ಟಪಡುತ್ತಿರುತ್ತಾರೆ. ಕ್ರಮೇಣ ವೈಯಕ್ತಿಕ ಪ್ರಾರ್ಥನೆಯ ಕೊರತೆಯು ನಮ್ಮನ್ನು ಬಲಹೀನತೆಗೆದ, ಅಸ್ಥಿರತೆಗೆ ನಡೆಸಿ ಕೊನೆಗೆ ನಮ್ಮ ಜೀವನವನ್ನು ಸೋಲಿಸುತ್ತದೆ.
ದಾನಿಯೇಲನು ತನ್ನ ಸ್ನೇಹಿತರ ಸಂಗಡ ಗುಂಪಾಗಿ ಅನೇಕ ಸಲ ಪ್ರಾರ್ಥಿಸಿದರೂ ತನ್ನ ವೈಯಕ್ತಿಕ ಪ್ರಾರ್ಥನೆಗೆ ಹೆಚ್ಚು ಮಹತ್ವವನ್ನು ನೀಡಿದನು. ಸತ್ಯವೇದವು ಹೀಗೆ ಹೇಳುತ್ತದೆ “ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇಮಿನ ಕಡೆಗೆ ಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾಪ್ರಕಾರ ದಿನಕ್ಕೆ ಮೂರಾವರ್ತಿ ಪ್ರಾರ್ಥನೆ ಮಾಡಿ ಸ್ತೋತ್ರ ಸಲ್ಲಿಸಿದನು” (ದಾನಿ 6:10)
ಪ್ರಿಯ ದೇವರ ಮಕ್ಕಳೇ, ನಮ್ಮ ರಾಜಧಿರಾಜನ ಸಮ್ಮುಖದಲ್ಲಿ ಪ್ರತೀ ಮುಂಜಾನೆ ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯುವುದಕ್ಕಾಗಿ ಒಂದು ದೃಢವಾದ ತೀರ್ಮಾನವನ್ನು ಮಾಡಿರಿ.
ಮುಂದಿನ ಆಧ್ಯಾಯನಕ್ಕಾಗಿ ದೇವರ ವಾಕ್ಯ: ” ಬೆಳಿಗ್ಗೆ ನೀನು ಸಿದ್ಧವಾಗಿದ್ದು ಸೀನಾಯಿ ಬೆಟ್ಟವನ್ನು ಹತ್ತಿ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು.” (ವಿಮೋ 34:2)
