No products in the cart.
ಜನವರಿ 12 – ಆಶೀರ್ವದಿಸಲ್ಪಟ್ಟ ಸೌಭಾಗ್ಯ!
“ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರುಷ ಬದುಕಿದನು. ಅವನು ಒಟ್ಟು ಒಂಭೈನೂರೈವತ್ತು ವರುಷ ಬದುಕಿ ಸತ್ತನು.” (ಆದಿ 9:28-29)
ನೋಹನನ್ನು ನೋಡಿರಿ! ಆತನು ಈ ಭೂಮಿಯ ಮೇಲೆ 950 ವರುಷಗಳು ಬದುಕಿದನು! ಆತನ ಜೀವನದ ಸುದೀರ್ಘ ಶತಮಾನಗಳ ಕಾಲಮಾನದಲ್ಲಿ ದೇವರು ಅವನಿಗೆ ಉತ್ತಮ ಆರೋಗ್ಯ, ಬಲ ಮತ್ತು ಸಧೃಡವಾದ ಶರೀರವನ್ನು ಅನುಗ್ರಹಿಸಿದನು. ಆ ಕಾಲದ ಸಂತತಿಯವರಿಗೆ ಯಾವ ಆಸ್ಪತ್ರೆಗಳು ಇರಲಿಲ್ಲಿ, ವೈದ್ಯರು ಸಹ ಇರಲಿಲ್ಲ, ಆದರೂ ಕರ್ತನು ಸ್ವತಃ ನೋಹನಿಗೆ ಘನ ವೈದ್ಯನಾಗಿದ್ದನು.
ನೋಹನಿಗೆ ಕೃಪೆ ತೋರಿಸಿದ ಅದೇ ದೇವರು ನಿಶ್ಚಯವಾಗಿ ನಿಮಗೂ ಉತ್ತಮ ಆರೋಗ್ಯ, ಬಲ ಮತ್ತು ಆಶೀರ್ವಾದದ ಧೀರ್ಘಾಯುಷ್ಯವನ್ನು ನೀಡುತ್ತಾನೆ. ಕರ್ತನು ಹೀಗೆ ಹೇಳಿದ್ದಾನೆ “ನನ್ನಿಂದ ನಿನ್ನ ದಿನಗಳು ಹೆಚ್ಚುವವು, ನಿನ್ನ ಆಯುಸ್ಸಿನ ವರುಷಗಳು ವೃದ್ಧಿಯಾಗುವುವವು” (ಜ್ಞಾನೋ 9:11). ಆದುದರಿಂದ ಆತನಿಗಾಗಿ ಜೀವಿಸಿರಿ, ಕರ್ತನ ನಾಮದ ಮಹಿಮೆಗಾಗಿ ಜೀವಿಸಿರಿ.
ಕೀರ್ತನೆಗಾರನು ಹೀಗೆ ಪ್ರಕಟಿಸಿದ್ದಾನೆ ” ನಾನು ಸಾಯುವದಿಲ್ಲ; ಜೀವದಿಂದಿದ್ದು ಯಾಹುವಿನ ಕ್ರಿಯೆಗಳನ್ನು ಸಾರುವೆನು.” (ಕಿರ್ತ 118:17).
ನಿನ್ನ ಜೀವನ ದೇವರ ದೃಷ್ಟಿಯಲ್ಲಿ ತುಂಬಾ ಅಮೂಲ್ಯವಾಗಿದೆ. ನೀವು ಆಕಾಶದಲ್ಲಿರುವ ಪಕ್ಷಿಗಳಿಗಿಂತ ಹೆಚ್ಚಿನವರಾಗಿದ್ದೀರಿ ಮತ್ತು ಅಡವಿಯ ಹೂವುಗಳಿಂದ ಹೆಚ್ಚು ಸುಂದರವಾಗಿದ್ದೀರಿ. ದೇವರು ನಿಮ್ಮನ್ನು ಆತನ ಸಾರೂಪ್ಯದಲ್ಲಿ ಆತನ ಹೋಲಿಕೆಗೆ ಸರಿಯಾಗಿ ಸೃಷ್ಟಿಮಾಡಿದ್ದಾನೆ. ನಿಮ್ಮನ್ನು ತನ್ನ ರಕ್ತದಿಂದ ಬಿಡಿಸಿದ್ದಾರೆ, ಮತ್ತು ದೈವೀಕ ಉದ್ದೇಶದಿಂದ ಭೂಮಿಯ ಮೇಲೆ ನೆಲೆಸಲು ಅನುಕೂಲ ಮಾಡಿದ್ದಾನೆ.
ಈ ಲೋಕದಲ್ಲಿ ಜೀವಿಸುವಾಗ ಮಾತ್ರವೇ ಸುವಾರ್ತೆ ಸಾರುವ ಅವಕಾಶವಿದೆಯೋ? ದೇವರ ವಾಕ್ಯದಲ್ಲಿ ಹೀಗೆ ಹೇಳುತ್ತದೆ ” ಸತ್ತವರು ಯಾಹುವನ್ನು ಸ್ತುತಿಸುವದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವದಿಲ್ಲ”. (ಕೀರ್ತ 115:17).
ದೇವರು ನಮಗೆ ಕಲಿಸಿಕೊಟ್ಟು, ಕೆಸರಿನಿಂದ ಮೇಲಕ್ಕೆ ಎಬ್ಬಿಸಿ ಕಲ್ವಾರಿ ರಕ್ತದಿಂದ ಶುದ್ಧಿಮಾಡಿ ತನ್ನ ಮಕ್ಕಳನ್ನಾಗಿ ಮಾಡಿಕೊಂಡರು. ಹಾಗೂ ತನಗಾಗಿ ನಮ್ಮನ್ನು ಅರಸರನ್ನಾಗಿ ಮತ್ತು ಯಾಜಕರನ್ನಾಗಿ ಮಾಡಿಕೊಂಡನು. ಇದು ದೇವರು ನಿನಗೆ ತೋರಿಸುವ ತನ್ನ ಕೃಪೆ?
ಆದ ಕಾರಣ ನೀವು ಸೋಲು ಮತ್ತು ನಿರುತ್ಸಾಹದ ಕುರಿತು ಮಾತನಾಡಬೇಡಿರಿ. ಯಾವುದೇ ವಿಧವಾದ ಸವಾಲುಗಳನ್ನು ನೀವು ಎದುರಿಸಿದರೂ ನಿರೀಕ್ಷೆಯಿಲ್ಲದ ಮಾತುಗಳು ನಿಮ್ಮ ತುಟಿಯ ಮೇಲೆ ಬರದಂತೆ ಜಾಗ್ರತೆವಹಿಸಿರಿ. ದೇವರು ನಿಮಗೆ ವಾಗ್ದಾನವನ್ನು ನೀಡಿದ್ದಾರೆ “ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು. ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು, ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು” (ಕೀರ್ತ 91:15-16)
ಜೀವ ಮತ್ತು ಮರಣ ನಾಲಿಗೆಯ ಶಕ್ತಿಯ ಮೇಲೆ ಆಧಾರಗೊಂಡಿದೆ. “ಜೀವ ಮರಣಗಳು ನಾಲಿಗೆಯ ವಶ.” (ಜ್ಞಾನೋ 18:21)
ಕರ್ತನು ಮತ್ತೇ ಹೇಳಿದ್ದೇನಂದರೆ ” ಕಂದಾ, ನನ್ನ ಉಪದೇಶವನ್ನು ಮರೆಯಬೇಡ,.. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು”. (ಜ್ಞಾನೋ 3:1-3)
ಪ್ರಿಯ ದೇವರ ಮಕ್ಕಳೇ, ನೀವು ಪರಿಪೂರ್ಣವಾಗಿ ಹಾಗೂ ಫಲಭರಿತವಾಗಿ ಜೀವಿಸಿರಿ. ನಾವು ಈ ಭೂಮಿಯ ಮೇಲೆ ಬದುಕುವ ಎಲ್ಲಾ ದಿನಗಳಲ್ಲಿ ಪರಿಪೂರ್ಣವಾಗಿ, ಆತನ ಚಿತ್ತವನ್ನು ನೆರವೇರಿಸುವವರಾಗಿ, ಆತನನ್ನು ಮೆಚ್ಚಿಸುವವರಾಗಿ ಆತನ ಮಹಿಮೆಗಾಗಿ ಜೀವಿಸೋಣ! ನಮ್ಮ ಜೀವನವು ನೂತನ ಶಕ್ತಿಯನ್ನು ಪಡೆದುಕೊಂಡಿರುವ ಹದ್ದಿನ ಹಾಗೆ ಇರಬೇಕು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಪ್ರೀತಿ ಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ. ಶ್ರೇಷ್ಠವರಗಳಿಂದ ನಿನ್ನ ಆಶೆಯನ್ನು ಪೂರ್ತಿಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ಬರಮಾಡುತ್ತಾನೆ.” (ಕೀರ್ತ 103:4-5)
