No products in the cart.
ಜನವರಿ 11 – ಆಹ್ಲಾದಕರ ಸಂತತಿ!
“ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ಕಾನಾನನು ಅವರಿಗೆ ದಾಸನಾಗಲಿ. ಯಫೆತನನ್ನು ದೇವರು ವಿಸ್ತರಿಸಲಿ.” (ಆದಿ ೯:೨೬-೨೭)
ಆದಾಮನು ಎಲ್ಲಾ ಜನರಿಗೆ ಮೂಲ ಪುರುಷನಾಗಿದ್ದಾನೆ. ಆದರೆ ಮಹಾ ಜಲಪ್ರಳಯದ ನಂತರ, ನೋಹನು ಹೊಸ ಸಂತತಿಯ ಮೂಲ ತಂದೆಯಾದನು. ದೇವರ ವಾಕ್ಯ ಹೇಳುತ್ತದೆ “.. ಇವರೇ ಶೇಮನ ವಂಶದವರು. ಸಂತತಿ ಜನಾಂಗಗಳ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳವರು ಇವರೇ.” (ಆದಿ ೧೦:೩೧,೩೨).
ಶಾರೀರಕವಾದ ವಂಶಾವಳಿಗಳು ಹಾಗೂ ಆತ್ಮೀಕವಾದ ವಂಶಾವಳಿಗಳು ಇವೆ. ಮಾಂಸದಾರಿಯಾದ ಮನುಷ್ಯನು ಶಾರೀರಿಕ ವಂಶಾವಳಿಯನ್ನು ಹೊಂದಿರುತ್ತಾನೆ. ಆತ್ಮೀಕ ಮನುಷ್ಯನು ಆತ್ಮೀಕ ವಂಶಾವಳಿಯನ್ನು ಹೊಂದಿರುತ್ತಾನೆ.
ಆದಾಮನು ಎಲ್ಲಾ ಮನುಷ್ಯರಿಗೆ ಮೂಲ ತಂದೆಯಾಗಿದ್ದಾನೆ. ಆದರೆ ಜನರನ್ನು ಮಾರ್ಗದರ್ಶಿಸಲು ಮತ್ತು ಪೋಷಣೆಮಾಡಲು ದೇವರು ತನ್ನ ಕೃಪೆಯಿಂದ ಸಭೆಯಲ್ಲಿ ಆತ್ಮೀಕ ತಂದೆಗಳನ್ನು ಮತ್ತು ಸೇವಕರನ್ನು ನೇಮಕಮಾಡಿದ್ದಾನೆ.
ಇಷಾಯನು ದಾವೀದನಿಗೆ ಇಹಲೋಕದ ತಂದೆಯಾಗಿದ್ದರೂ, ಸಮುವೇಲನು ಆತನ ಆತ್ಮೀಕ ತಂದೆಯಾಗಿದ್ದರೂ , ದಾವೀದನು ಅವನನ್ನು “ತಂದೆ” ಎಂದು ಕರೆದನು. ಎಲೀಷನೂ ಸಹ ಎಲೀಯನನ್ನು ನೋಡಿ “ನನ್ನ ತಂದೆಯೇ, ನನ್ನ ತಂದೆಯೇ ಎಂದು ಕೂಗಿದನು. ತಿಮೋಥಿಗೆ ಪೌಲನು ಆತ್ಮೀಕ ತಂದೆಯಾಗಿದ್ದನು. ನೀವು ನಿಮ್ಮ ಮಕ್ಕಳಿಗೆ ಆತ್ಮೀಕ ತಂದೆಯಾಗಿರಬೇಕು.
ನೀವು ಇಹಲೋಕದ ತಂದೆಯಾಗಿರುವದಕ್ಕೇ ಮಾತ್ರವೇ ತೃಪ್ತಿಪಟ್ಟುಕೊಳ್ಳಬಾರದು. ನಿಮ್ಮ ಮಕ್ಕಳನ್ನು ಕರ್ತನ ಮಾರ್ಗದಲ್ಲಿ ನಡೆಸಬೇಕು. ದೇವರು ನಿಮಗೆ ಪರಿಶುದ್ಧವಾದ ಮತ್ತು ಶ್ರೇಷ್ಟವಾದ ಜವಬ್ಧಾರಿಯನ್ನು ನೀಡಿದ್ದಾರೆ. ನಾವು ಯಥಾರ್ಥವಂತರಾಗಿ ನಡೆದು ನಮ್ಮ ಕುಟುಂಬವನ್ನು ಆತ್ಮೀಕತೆಯಡೆಗೆ ನಡೆಸಬೇಕು.
ನೀವು ದೇವರ ಮುಂದೆ ನಂಬಿಗಸ್ತರಾಗಿ ಜೀವಿಸುವಾಗ, ಆತನ ಆಶೀರ್ವಾದಗಳು ನಿಮ್ಮ ಸಂತತಿ ಸಂತತಿಯ ವರೆಗೂ ನಿಮ್ಮನ್ನು ಹಿಂಬಾಲಿಸುತ್ತದೆ. ಕರ್ತನು ಹೀಗೆ ಹೇಳುತ್ತಾನೆ ” ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನರು” (ಯೆಶಾಯ ೪೩:೨೦) ಇದುವೇ ನಿನ್ನ ಸಂತಾನಕ್ಕೆ ದೇವರ ಅಪೇಕ್ಷೆಯಾಗಿದೆ.
ನಿಮ್ಮ ಮೂಲ ಪಿತೃಗಳ ದೇವರು ನಿಮ್ಮ ದೇವರಾಗಿದ್ದಾನೆ. ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಹಾಗೂ ಯೋಸೇಪನ ದೇವರಾಗಿರುವವರು ಅದೇ ರೀತಿಯಾಗಿ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಸಂತತಿ ಸಂತತಿಯವರೆಗೂ ದೇವರಾಗಿದ್ದಾನೆ.
ಅಬ್ರಹಾಮನ ಸಂತತಿಯವರು ಹಾಲು ಜೇನು ಹರಿಯುವ ವಾಗ್ದಾನದ ದೇಶವನ್ನು ಸ್ವಾದೀನಪಡಿಸಿಕೊಂಡರು. ಅದೇ ಪ್ರಕಾರ ಆತ್ಮೀಕ ಇಸ್ರಾಯೇಲ್ಯರಾದ ನಾವು ಪರಲೋಕದ ಕಾನಾನನ್ನು , ಹೊಸ ಯೆರೂಸಲೇಮನ್ನು ಸ್ವಾದೀನಪಡಿಸಿಕೊಳ್ಳುತ್ತೇವೆ.
ದೇವರು ನೋಹನ ಕುರಿತಾಗಿ ಸಾಕ್ಷಿ ನುಡಿದಂತೆ ನಿಮ್ಮ ಕುರಿತಾಗಿ ಸಾಕ್ಷಿ ಹೇಳಲಿ. ಕರ್ತನು ಹೇಳಿದ್ದೇನಂದರೆ “ಈ ಸಂತಾನದವರಲ್ಲಿ ನೀನು ನನ್ನ ಮುಂದೆ ನೀತಿವಂತನಾಗಿ ಜೀವಿಸಿದ್ದನ್ನು ನಾನು ನೋಡಿದ್ದೇನೆ”. ನಿಮ್ಮ ವಿಷಯದಲ್ಲಿಯೂ ದೇವರು ಹಾಗೇಯೇ ಪ್ರಕಟಿಸಲಿ!
ಪ್ರಿಯ ದೇವರ ಮಕ್ಕಳೇ, ನೀವು ಕರ್ತನಿಗಾಗಿ ದೃಢವಾಗಿ ನಿಂತುಕೋಡು ಆತನ ಸುವಾರ್ತೆಯನ್ನು ಈಗಿನ ಸಂತತಿಯವರಿಗೆ ಸಾರಿದರೆ, ಕರ್ತನು ನಿಶ್ಚಯವಾಗಿ ನಿಮ್ಮ ಸಂತಾನವನ್ನು ಆಶೀರ್ವದಿಸುತ್ತಾನೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆತನನ್ನು ಸೇವಿಸುವವರ ಸಂತಾನದವರು ಯೆಹೋವನ ಸಂತಾನದವರೆಂದು ಎಣಿಸಲ್ಪಡುವರು” (ಕೀರ್ತ ೨೨:೩೦)
