No products in the cart.
ಏಪ್ರಿಲ್ 05 – ಹೆದರಬೇಡಿರಿ!
“ಯೇಸು ಅವರಿಗೆ ಹೆದರಬೇಡಿರಿʼ ಅಂದನು.” (ಮತ್ತಾ 28:10)
ಪ್ರೀತಿಯ ಅನುದಿನ ಆಹಾರ ಕುಟುಂಬದ ಸದಸ್ಯರಿಗೆ ನಮ್ಮ ಯೇಸು ಕ್ರಿಸ್ತನ ಸುಮಧುರ ನಾಮದಲ್ಲಿ ಸಂತೋಷಪೂರ್ವಕವಾಗಿ ಪುನರುತ್ತಾನ ದಿನದ ಶುಭಾಷಯಗಳನ್ನು ತಿಳಿಸುತ್ತೇವೆ.
ಯೇಸು ಕ್ರಿಸ್ತನು ಈ ಲೋಕದಲ್ಲಿ ಜೀವಿಸಿದ ದಿನಗಳಲ್ಲಿ ಅನೇಕ ಸಂದೇಶಗಳನ್ನು ನೀಡುವುದರ ಮೂಲದ ಅನೇಕರನ್ನು ಸಂತೈಸಿದನು. ಹಲವು ಬಾರಿ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಮತ್ತು ವಿಶ್ವಾಸಿಗಳಿಗೆ “ಹೆದರಬೇಡಿರಿ” ಎಂಬುದಾಗಿ ಹೇಳಿದ್ದಾರೆ. ಆದರೆ “ಹೆದರಬೇಡಿರಿ” ಎಂದು ಆತನು ಶಿಷ್ಯರಿಗೆ ಹೇಳಿದ ಮಾತು ಪುನರುತ್ತಾನದ ನಂತರ ಹೆಚ್ಚಿನ ಬಲ ಮತ್ತು ಸಾಂತ್ವನವನ್ನು ಪಡೆದುಕೊಂಡಿತು.
ಪುನರುತ್ತಾನ ಹೊಂದಿದ ಯೇಸುವನ್ನು ಗಮನಿಸಿರಿ. ಆತನು ಮಾತ್ರವೇ ಮರಣವನ್ನು ಗೆದ್ದು ಸಮಾಧಿಯಿಂದ ಮೃತ್ಯುಂಜಯನಾಗಿ ಎದ್ದು ಮೇಲೆ ಎದ್ದು ಬಂದನು. ಆತನೊಬ್ಬನೇ ಶತ್ರುವಿನ ತಲೆಯನ್ನು ಜಜ್ಜಿ ಹಾಕಿದನು. “ಹೆದರಬೇಡಿರಿ” ಎಂದು ಆತನು ಹೇಳುವಾಗ ನಾವು ಎಂದಿಗೂ ಮರಣಕ್ಕೆ, ಸಮಾಧಿಗೆ ಅಥವಾ ಸೈತಾನನಿಗೆ ಭಯಪಡಬಾರದು ಎಂದರ್ಥ.
ಪ್ರಾಪಂಚಿಕ ನಾಯಕರು ಅಥವಾ ಅಧಿಕಾರಿಗಳು, “ಹೆದರಬೇಡಿರಿ” ಎಂದು ಹೇಳುವಾಗ ಅವರ ಮಾತುಗಳ ಲಾಭ ತುಂಬಾ ಸೀಮಿತವಾಗಿರುತ್ತದೆ. ತುಂಬಾ ಅಂದರೆ ಅವರು ಈ ಲೋಕದ ಕೆಲವು ಭಯಗಳಿಂದ ಸ್ವಲ್ಪಕಾಲ ನಮಗೆ ವಿಮುಕ್ತಿಯನ್ನು ಕೊಡಬಹುದು. ಆದರೆ ಅವರು ಮಾನವ ಕುಲವನ್ನು ಸೈತಾನನಿಂದ, ಸಮಾಧಿಯ ಬಲದಿಂದ ಅಥವಾ ಮರಣದಿಂದ ಬಿಡಿಸಲು ಸಾಧ್ಯವೇ ಇಲ್ಲ.
ಆದರೆ ಮೃತ್ಯುಂಜಯನಾದ ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳಿರಿ, ” “ಹೆದರಬೇಡಿರಿ”. ಆತನು ಒಬ್ಬ ಪರಕ್ರಮಶಾಲಿ ಯುದ್ಧವೀರನಂತೆ ಹಾಗೂ ಸೇನಾಧೀಶ್ವರನಾದ ಕರ್ತನಂತೆ ನಿಂತುಕೊಳ್ಳುತ್ತಾನೆ. ರಾಜಾಧಿ ರಾಜನಾಗಿ, ಭೂಪರಲೋಕಗಳು ಸಕಲ ಅಧಿಕಾರವನ್ನು ಸ್ವಾದೀನಪಡಿಸಿಕೊಂಡು ಹೀಗೆ ಪ್ರಕಟಿಸುತ್ತಾನೆ, “ಹೆದರಬೇಡಿರಿ”. ಕರ್ತನಾದ ಯೇಸುಕ್ರಿಸ್ತನಿಗೆ ಮಾತ್ರವೇ ಇಂತಹ ಅಲೌಕಿಕ ಶಕ್ತಿ ಇರುತ್ತದೆ. ಆತನು ಆ ಮಾತುಗಳಿಂದ ಇಡೀ ಮಾನವ ಕುಲವನ್ನು ಸಂತೈಸುವನು.
ದೇವರ ಪ್ರಸನ್ನತೆಯನ್ನು ಅನುಭವಿಸದೇ ಇರುವವರು ಸಾಮಾನ್ಯವಾಗಿ ಭಯಪಡುತ್ತಾರೆ; ಅಥವಾ ಆತನು ತನ್ನ ಜೀವನದ ಪರಿಸ್ಥಿತಿಗಳನ್ನು ದೈವೀಕ ಶಕ್ತಿಯಿಂದ ನಿಭಾಯಿಸಲು ಅಸಮರ್ಥನಾಗಿರುತ್ತಾನೆ. ಇದುವೇ ಶಿಷ್ಯರಿಗೂ ನಡೆಯಿತು. ಯೇಸು ಕ್ರಿಸ್ತನು ಕ್ರೂಜೆಗೆ ಹಾಕಲ್ಪಟ್ಟು ಮರಣವನ್ನು ಹೊಂದಿದಾಗ, ಅವರು ಆಲೋಚಿಸಿದರು, ʼಎಲ್ಲವೂ ಮುಕ್ತಾಯದ ಹಂತಕ್ಕೆ ಬಂದಿದೆʼ ಎಂದು ನಿರ್ಧರಿಸಿದರು. ಅವರು ಹಿಂಬಾಲಿಸುತ್ತಿದ್ದ ಯೇಸುವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಇದ್ದುದರಿಂದ ಅವರು ಸಮಸ್ಯೆ ಮತ್ತು ಒತ್ತಡದಲ್ಲಿ ಜೀವಿಸುತ್ತಿದ್ದರು.
ಆದರೆ ಯೇಸು ಕ್ರಿಸ್ತನು ಅವರ ಬಳಿಗೆ ಬಂದು, ಪುನರುತ್ತಾನ ಹೊಂದಿದ ಕರ್ತನಾಗಿ ಅವರ ಮುಂದೆ ನಿಂತುಕೊಂಡು ಅವರನ್ನು “ಹೆದರಬೇಡಿರಿ” ಎಂದು ಸಂತೈಸಿದನು.
ಈ ಮೊದಲು ಯೇಸು ಅವರ ಮಧ್ಯೆ ಶಾರೀರಿಕವಾಗಿ ಜೀವಿಸುತ್ತಿದ್ದನು. ಆ ಕಾರಣಕ್ಕಾಗಿ ಅವರು ಒಂದು ಸಮಯದಲ್ಲಿ ಒಂದು ಸ್ಥಳದಲ್ಲಿ ಮಾತ್ರ ಇರಲು ಸಾಧ್ಯವಾಗುತ್ತಿತ್ತು. ಆದರೆ ಈಗ ಮರಣದಿಂದ ಮೇಲಕ್ಕೆ ಎದ್ದವನಾಗಿ, ಆತ್ಮದಲ್ಲಿ ಎಲ್ಲಾ ಕಡೆ ಒಂದೇ ಸಮಯದಲ್ಲಿ ಇರುವವನಾಗಿದ್ದಾನೆ. ಆತನು ಏಕಕಾಲದಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಜನರನ್ನು ಸಂತೈಸುವಿಕೆಯನ್ನು ನೀಡಬಲ್ಲನು. ಆತನು ನಮ್ಮ ಎಲ್ಲಾ ಸಮಯದಲ್ಲಿ ನಮ್ಮನ್ನು ಆದರಿಸಿ ಬಲಪಡಿಸುವವನಾಗಿದ್ದಾನೆ.
ಪ್ರಿಯ ದೇವರ ಮಕ್ಕಳೇ, ಪುನರುತ್ತಾನ ಹೊಂದಿದ ಯೇಸು ಕ್ರಿಸ್ತನು ಜೀವಿಸುತ್ತಿರುವದರಿಂದ, ನಿನ್ನೊಂದಿಗೆ ಇರುವದರಿಂದ, ನೀವು ಭಯ ಪಡದೇ ಸಂತೋಷವಾಗಿ ಜೀವಿಸಬಹುದು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: ” ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು – “ಹೆದರಬೇಡ, ನಾನು ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನೂ ಆಗಿದ್ದೇನೆ” (ಪ್ರಕ 1:17;18)
